January 14, 2025

Newsnap Kannada

The World at your finger tips!

7816ef62 fee8 40ac ad9d dafd0a4e2495

ಮಗನ ಸಾವಿನ ಸುದ್ದಿ ತಿಳಿಯದೆ ಕೃಷ್ಣೇಗೌಡರು ಕೊನೆಯುಸಿರೆಳೆದರು

Spread the love

ಮಂಗಳವಾರ ಹೃದಯಾಘಾತದಿಂದ ನಿಧನ‌ರಾದ ಹಿರಿಯ ನಟ ಕೃಷ್ಣೇಗೌಡರಿಗೆ ಮಗನ ಸಾವಿನ‌ ಸಂಗತಿ ತಿಳಿಯದೇ ಜೀವನದ ಕೊನೆ ಕ್ಷಣ ಕೂಡ ಅತ್ಯಂತ ದುಃಖದಿಂದ ಕೂಡಿತ್ತು.

ಕೇವಲ 20 ದಿನಗಳ ಹಿಂದೆ ನಟ ಕೃಷ್ಣೇಗೌಡ ಹಾಗೂ ಅವರ ಎರಡನೇ ಪುತ್ರ ಸತೀಶ್ ಗೆ ಕೊರೋನಾ ಸೋಂಕು ತಗುಲಿತು.‌

ಕೃಷ್ಣೇಗೌಡರು ಕೊರೋನಾದಿಂದ ಬಚಾವ್ ಆದರು. ಆದರೆ ಕೊರೋನಾ ಸೋಂಕು ಶ್ವಾಸಕೋಶವನ್ನು ಆವರಿಸಿದ್ದರಿಂದ ಕೃಷ್ಣೇಗೌಡರನ್ನು ಐಸಿಯುನಲ್ಲೇ ಇರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ಮಗ ಸತೀಶ್ ಕೊರೋನಾಗೆ ಬಲಿಯಾಗಿ ಹೋದರು. ಮಗ ಸಾವನ್ನಪ್ಪಿದ ಸುದ್ದಿಯನ್ನು ಐಸಿಯುನಲ್ಲಿ ಇದ್ದ ಗೌಡರಿಗೆ ಹೇಳಲಿಲ್ಲ. ಹೀಗಾಗಿ ಮಗನ ಸಾವಿನ ಸುದ್ದಿಯೂ ಸಹ ಅಪ್ಪನಿಗೆ ಗೊತ್ತಾಗದೇ ಕೊನೆಯುಸಿರೆಳೆದರು.

ಚಿತ್ರರಂಗದಲ್ಲಿ ಹೋರಾಟದ ಬದುಕನ್ನು ಕಟ್ಟಿಕೊಂಡಿದ್ದ ಕೃಷ್ಣೇಗೌಡರು, ಕೊನೆಯ ಕ್ಷಣವೂ ದುರಂತದಿಂದಲೇ ಕೂಡಿತ್ತು ಎಂಬ ಸಂಗತಿ ಈಗ ಬಯಲಾಗಿದೆ.

Copyright © All rights reserved Newsnap | Newsever by AF themes.
error: Content is protected !!