1ಲಕ್ಷ ರು ಲಂಚ ಪಡೆಯವ ವೇಳೆ ತುಮಕೂರಿನ KPTCL ಮುಖ್ಯ ಎಂಜಿನಿಯರ್ ಲೋಕಾ ಬಲೆಗೆ

Team Newsnap
1 Min Read

ತುಮಕೂರು : 1ಲಕ್ಷ ರು ಲಂಚ ಪಡೆಯುವ ವೇಳೆ KPTCL ಚೀಫ್ ಎಂಜಿನಿಯರ್ ವೊಬ್ಬರು ತುಮಕೂರಿನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

KPTCL ಚೀಫ್ ಎಂಜಿನಿಯರ್ ನಾಗರಾಜನ್ ಅವರನ್ನು ಲೋಕಾಯುಕ್ತ ಬಲೆಗೆ ಬಿದ್ದವರು.

ಸಿಇ ನಾಗರಾಜನ್ ಪವರ್ ಲೈನ್ ಎಳೆಯಲು ಅನುಮತಿಗಾಗಿ ಕಂಟ್ರಾಕ್ಟರ್ ಗೆ 1 ಲಕ್ಷ ಲಂಚ ಬೇಡಿಕೆ ಇಟ್ಟಿದ್ದರು.

ಆಗಸ್ಟ್ 4 ರಂದು 50 ಸಾವಿರ ರೂ. ಪಡೆದಿದ್ದರು . ಇಂದು ಮತ್ತೆ 50 ಸಾವಿರ ಲಂಚ ಪಡೆಯುವಾಗ ತುಮಕೂರಿನ ಬಿ. ಎಚ್. ರಸ್ತೆಯ KPTCL ಕಛೇರಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ತುಮಕೂರು ಲೋಕಾಯುಕ್ತ ಎಸ್ಪಿ ಬಾಷಾ ನೇತೃತ್ವದಲ್ಲಿ ದಾಳಿ ಮಾಡಿದ್ದು, ಆರೋಪಿ ಚೀಫ್ ಎಂಜಿನಿಯರ್ ನಾಗರಾಜನ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ಜಿಂಕೆ ಕೊಂದು ಮಾಂಸ ಮಾರಾಟಕ್ಕೆ ಯತ್ನ : ಇಬ್ಬರ ಬಂಧನ

ತುಮಕೂರು ಲೋಕಾಯುಕ್ತ ಕಛೇರಿಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment