ಜಿಂಕೆ ಕೊಂದು ಮಾಂಸ ಮಾರಾಟಕ್ಕೆ ಯತ್ನ : ಇಬ್ಬರ ಬಂಧನ

Team Newsnap
1 Min Read

ಹನೂರು : ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಪ್ರವೇಶ ಮಾಡಿ ವನ್ಯಜೀವಿ ಜಿಂಕೆಯನ್ನು ಕೊಂದು ಅದನ್ನು ಕತ್ತರಿಸಿ ಮಾರಾಟ ಮಾಡಲು ಯತ್ನಿಸುವ ಸಂದರ್ಭದಲ್ಲಿ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ತಾಲೂಕಿನ ಕಾಂಚಳ್ಳಿ ಗ್ರಾಮದ ನಾಗರಾಜು (38) ಬಿನ್ ಕಾಳೆಗೌಡ ಮತ್ತು ಹನೂರು ಪಟ್ಟಣದ ತೇಜಸ್ (21) ಬಿನ್ ಮಾದೇಶ ಇವರು ಬಂಧಿತ ಆರೋಪಿಗಳು.

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ಉಪ ವಿಭಾಗದ ಬಫರ್ ವಲಯದ ಹನೂರು ಶಾಖೆಯ ಎಲ್ಲೇಮಾಳ ಗಸ್ತಿನ ಅರಕನಹಳ್ಳ ಅರಣ್ಯ ಪ್ರದೇಶದಲ್ಲಿ ನಾಗರಾಜು ಮತ್ತು ತೇಜಸ್ ಇವರು ವನ್ಯಜೀವಿ ಜಿಂಕೆಯನ್ನು ಕೊಂದು ಅದರ ಮಾಂಸವನ್ನು ತುಂಡು ತುಂಡಾಗಿ ಕತ್ತರಿಸುತ್ತಿದ್ದರು.ನನ್ನ ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ, ಮಂಡ್ಯ ದತ್ತುಕೊಟ್ಟಿಲ್ಲ – ಸಚಿವ ಚಲುವರಾಯಸ್ವಾಮಿ

ಈ ಸಂದರ್ಭದಲ್ಲಿ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾಕ್ಟರ್.ಜಿ. ಸಂತೋಷ್ ಕುಮಾರ್ ಐ.ಎಫ್.ಎಸ್ ರವರ ಮಾರ್ಗದರ್ಶನದಂತೆ ಹನೂರು ಬಂಪರ್ ವಲಯದ ಅರಣ್ಯ ಅಧಿಕಾರಿಗಳಾದ ಪ್ರವೀಣ್ ಸಿ, ಮತ್ತು ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಗಳಾದ ನಾಗರಾಜು ಮತ್ತು ತೇಜಸ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ವರದಿ :- ನಾಗೇಂದ್ರ ಪ್ರಸಾದ್

Share This Article
Leave a comment