ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಎಂಜಿನಿಯರ್ ಕೋವಿಡ್ ಗೆ ಬಲಿ

Team Newsnap
0 Min Read

ಎರಡು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖಸಂಸಾರದ ಸವಿ ಅನುಭವಿಸುವ ವೇಳೆಯಲ್ಲೇ ಮಹಾಮಾರಿ ಕರೊನಾದಿಂದ, ನವವಿವಾಹಿತ ಬಲಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಆಲನಹಳ್ಳಿ ಬಡಾವಣೆ ನಿವಾಸಿ, ಇಂಜಿನಿಯರ್​ ನವೀನ್ ಕುಮಾರ್ ಮೃತ ದುರ್ದೈವಿ.

ಬೆಂಗಳೂರಿನ ಜೈನ್ ವಿವಿಯಲ್ಲಿ ಕೆಲಸ‌ ಮಾಡುತ್ತಿದ್ದ ನವೀನ್, ಎರಡು ತಿಂಗಳ ಹಿಂದಷ್ಟೆ ಮದುವೆ ಆಗಿದ್ದರು. ಇತ್ತೀಚಿಗೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನವೀನ್​ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿ ಕರೊನಾ ತಪಾಸಣೆ ಮಾಡಿಸಿದ್ದರು.

ವರದಿಯು ಪಾಸಿಟಿವ್​ ಬಂದಿತ್ತು. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ನವೀನ್​ ಸಾವಿಂದ ಕಂಗಾಲಾದ ಪತ್ನಿ ಮತ್ತು ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.

Share This Article
Leave a comment