ಬಾಡಿಗೆ ಕಾಯ್ದೆಗೆ ಕೇಂದ್ರ ‌ ಸಂಪುಟ ಅಸ್ತು- ಹೊಸ ಕಾಯ್ದೆಯಲ್ಲಿ ಏನು ಬದಲಾವಣೆ ?

Team Newsnap
1 Min Read

ಮನೆ , ಅಂಗಡಿ ಮಾಲೀಕರು ಮತ್ತು ಬಾಡಿಗೆದಾರರಿಗೆ ಸಹಾಯವಾಗುವ ಹೊಸ ಕಾಯ್ದೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ‘ಮಾದರಿ ಬಾಡಿಗೆ ಕಾಯ್ದೆ’ಗೆ ಅನುಮೋದನೆ ನೀಡಲಾಗಿದೆ.‌

ಮನೆಗಳನ್ನು ಬಾಡಿಗೆ ನೀಡುವ ವ್ಯವಸ್ಥೆಗೆ ಉದ್ಯಮ ಸ್ವರೂಪ ನೀಡಲಾಗಿದೆ. ಈ ಉದ್ಯಮದಲ್ಲಿ ಪಾಲ್ಗೊಳ್ಳುವಂತೆ ಖಾಸಗಿ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ವಸತಿ ಕ್ಷೇತ್ರ ಎದುರಿಸುತ್ತಿರುವ ಕೊರತೆಯನ್ನು ನೀಗಿಸಲು ಸಾಧ್ಯವಾಗಲಿದೆ.

ಕಾಯ್ದೆಯ ಸ್ವರೂಪ ಹೇಗಿದೆ?

  • ಮಾಲೀಕರು ಮತ್ತು ಬಾಡಿಗೆದಾರರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಬಾಡಿಗೆ ಪ್ರಾಧಿಕಾರ ರಚನೆ ಮಾಡಬೇಕು.
  • ಮಾಲೀಕರು ಭದ್ರತಾ ಠೇವಣಿಯಾಗಿ ಬಾಡಿಗೆದಾರರಿಂದ ಕೇವಲ 2 ತಿಂಗಳ ಬಾಡಿಗೆಯನ್ನು ಮಾತ್ರ ಪಡೆಯಬೇಕು.
  • ವಾಣಿಜ್ಯ ಕಟ್ಟಡಗಳಿಗೆ ಭದ್ರತಾ ಠೇವಣಿಯಾಗಿ 6 ತಿಂಗಳ ಹಣವನ್ನು ಮಾತ್ರ ಪಡೆಯಬೇಕು.
  • ಬಾಡಿಗೆ ವಿಚಾರದಲ್ಲಿ ಸಮಸ್ಯೆಯಾದಲ್ಲಿ ಜಿಲ್ಲಾ ಬಾಡಿಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು.
  • ಒಪ್ಪಂದ ಮುಗಿದ ಬಳಿಕವೂ ಮನೆಯನ್ನು ಖಾಲಿ ಮಾಡದೇ ಇದ್ದಲ್ಲಿ ಮಾಲೀಕ ಮುಂದಿನ 2 ತಿಂಗಳ ಅವಧಿಗೆ ಬಾಡಿಗೆಯನ್ನು ದ್ವಿಗುಣ ಮಾಡಬಹುದು.
  • 2 ತಿಂಗಳ ಬಳಿಕವೂ ಮನೆ ಖಾಲಿ ಮಾಡದೇ ಇದ್ದರೆ ಬಾಡಿಗೆಯನ್ನು 4 ಪಟ್ಟು ಹೆಚ್ಚಿಸಬಹುದು.
  • ವಿವಾದದ ಸಂದರ್ಭದಲ್ಲಿ ಮಾಲೀಕರು ವಿದ್ಯುತ್ ಮತ್ತು ನೀರು ಸರಬರಾಜನ್ನು ಕಡಿತಗೊಳಿಸುವಂತಿಲ್ಲ.
  • ಒಪ್ಪಂದದ ಅವಧಿ ಇರುವವರೆಗೆ ಬಾಡಿಗೆ ದರವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಲು ಸಾಧ್ಯವಿಲ್ಲ. ಬಾಡಿಗೆ ಪರಿಷ್ಕರಿಸುವ 3 ತಿಂಗಳ ಮೊದಲು ಮಾಲೀಕ ನೋಟಿಸ್ ನೀಡಬೇಕಾಗುತ್ತದೆ.
  • ಕಟ್ಟಡಕ್ಕೆ ಹಾನಿಯಾಗಿದ್ದರೆ ರಿಪೇರಿಗೆ ಬಾಡಿಗೆದಾರನೇ ಹಣವನ್ನು ನೀಡಬೇಕು.
Share This Article
Leave a comment