ಮೂರು ಜಿಲ್ಲೆಯ ಹಾಲು ಉತ್ಪಾದಕರಿಗೆ ಪ್ರತಿ ಲೀ.ಹಾಲಿಗೆ ಹೆಚ್ಚುವರಿ 9.25 ರು ನೀಡಲು ಕೆಎಂಎಫ್ ತೀರ್ಮಾನ

Team Newsnap
1 Min Read

ಬೆಂಗಳೂರು : ರಾಜ್ಯದ ಮೂರು ಜಿಲ್ಲೆಗಳ ಹಾಲು ಉತ್ಪಾದಕರಿಗೆ ಮಾತ್ರ ಕೆಎಂಎಫ್ ಲೀಟರ್ ಎಮ್ಮೆ ಹಾಲಿಗೆ ಹೆಚ್ಚುವರಿಯಾಗಿ 9.25 ರೂ. ನೀಡಲು ನಿರ್ಧರಿಸಿದೆ

ರಾಜ್ಯ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ಈ ಕುರಿತು ಮಾಹಿತಿ ನೀಡಿ ಪ್ರತಿ ಲೀಟರ್ ಎಮ್ಮೆ ಹಾಲಿಗೆ 9.25 ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು.

ಈ ಹಿಂದೆ ಲೀಟರ್ ಹಾಲಿಗೆ 36.80 ರೂ. ನೀಡಲಾಗುತ್ತಿತ್ತು. ಇದೀಗ 9.25 ರೂ. ಹೆಚ್ಚಳ ಮಾಡಲಾಗಿದೆ, ನಾಳೆಯಿಂದಲೇ ರೈತರಿಗೆ ಪ್ರತಿ ಲೀಟರ್ ಎಮ್ಮೆ ಹಾಲಿಗೆ 46 ರೂ. ನೀಡಲಾಗುವುದು ಎಂದು ತಿಳಿಸಿದ್ದಾರೆ.ಪಟಾಕಿ ಹಚ್ಚಿ ಕಾರ್ಯಕರ್ತರ ಸಂಭ್ರಮ- ಸಚಿವ ರಾಜಣ್ಣ ಕಣ್ಣಿಗೆ ಗಾಯ

ಹೆಚ್ಚುವರಿ ಹಣವನ್ನು ಕಲಬುರಗಿ, ಬೀದರ್, ಯಾದಗಿರಿ ರೈತರಿಗೆ ಮಾತ್ರ ಅನ್ವಯವಾಗಲಿದೆ ನಾಳೆಯಿಂದಲೇ ರೈತರಿಗೆ ಹೆಚ್ಚಿನ ಹಣ ನೀಡಲಾಗುವುದು ಎಂದು ತಿಳಿಸಿದ್ದಾರೆ.

Share This Article
Leave a comment