ಪಟಾಕಿ ಹಚ್ಚಿ ಕಾರ್ಯಕರ್ತರ ಸಂಭ್ರಮ- ಸಚಿವ ರಾಜಣ್ಣ ಕಣ್ಣಿಗೆ ಗಾಯ

Team Newsnap
1 Min Read
Celebration of workers by lighting firecrackers - Minister Rajanna injured in eye ಪಟಾಕಿ ಹಚ್ಚಿ ಕಾರ್ಯಕರ್ತರ ಸಂಭ್ರಮ- ಸಚಿವ ರಾಜಣ್ಣ ಕಣ್ಣಿಗೆ ಗಾಯ

ತುಮಕೂರು: ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅವರ ಕಣ್ಣಿಗೆ ಪಟಾಕಿ ಕಿಡಿ ಹಾರಿ ಗಾಯಗೊಂಡ ಘಟನೆ ಪಟ್ಟದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಭಾನುವಾರ ನಡೆದಿದೆ.

ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎನ್ ರಾಜಣ್ಣ ಶಕ್ತಿ ಯೋಜನೆಗೆ ಚಾಲನೆ ನೀಡಲು ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು.

ವಿಷಯ ತಿಳಿದ ಕೆಎನ್ ಆರ್ ಅಭಿಮಾನಿಗಳು ಹಿತೈಷಿಗಳು ಕಾಂಗ್ರೆಸ್ ಕಾರ್ಯಕರ್ತರು ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್ ಬಳಿ ಕಾರನ್ನು ತಡೆದು ಹೂಮಾಲೆ ಹಾಕಿ ಅಭಿನಂದಿಸಿದರು.

WhatsApp Image 2023 06 11 at 12.36.17 PM

ಬಳಿಕ ಸಮೀಪದಲ್ಲೇ ಪಟಾಕಿ ಸಿಡಿಸಿದರು. ತಕ್ಷಣ ಸಚಿವರು ತಮ್ಮ ಕನ್ನಡಕವನ್ನೊಮ್ಮೆ ತೆಗೆದರು. ಇದೇ ವೇಳೆ ಪಟಾಕಿಯ ಕಿಡಿ ನೇರವಾಗಿ ಬಲಗಣ್ಣಿನತ್ತ ಹಾರಿದೆ.ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಪುನರ್ ಜಾರಿ!

ಕೂಡಲೇ ಸಚಿವರನ್ನು ಎಂ.ಎಂ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ನೇತ್ರ ತಜ್ಞ ಡಾ.ರವಿಕುಮಾರ್ ಅವರಿಂದ ಚಿಕಿತ್ಸೆ ಕೊಡಿಸಲಾಯಿತು, ಬಳಿಕ ಅವರು ಹಾಸನಕ್ಕೆ ತೆರಳಿದರು.

Share This Article
Leave a comment