ಕೆ ಎಂ ದೊಡ್ಡಿ : ರಿಯಲ್ ಪೊಲೀಸ್ ಕೈಗೆ ಸಿಕ್ಕಿ ಬಿದ್ದ ರೀಲ್ ಪೊಲೀಸ್!

Team Newsnap
1 Min Read
KM Doddy: Reel police caught in the hands of the real police! ಕೆ ಎಂ ದೊಡ್ಡಿ : ರಿಯಲ್ ಪೊಲೀಸ್ ಕೈಗೆ ಸಿಕ್ಕಿ ಬಿದ್ದ ರೀಲ್ ಪೊಲೀಸ್!

ಪಿಎಸ್‌ಐ ಸಮವಸ್ತ್ರ ಧರಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ಒಬ್ಬನನ್ನು ಅಸಲಿ ಪೊಲೀಸರು ಬಂಧಿಸಿರುವ ಘಟನೆ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿ ಜರುಗಿದೆ.

ಬೆಂಗಳೂರಿನ ಗೊಟ್ಟಿಗೆರೆ ನಿವಾಸಿ ಸಂಜಯ್ ಬಂಧಿತ ಆರೋಪಿ. ಸಂಜಯ್ ಪಿಎಸ್‌ಐ ಸಮವಸ್ತ್ರ ಧರಿಸಿ ಕೆಎಂ ದೊಡ್ಡಿ ಸುತ್ತಮುತ್ತ ದ್ವಿಚಕ್ರ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದರು. ಬಳಿಕ ಸಂಚಾರಿ ನಿಯಮ ಉಲ್ಲಂಘನೆಯಾಗಿದೆ ಎಂದು ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ. ನಕಲಿ ಪೊಲೀಸ್ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದರ ಬಗ್ಗೆ ಸ್ಥಳೀಯರು ಕೆಎಂ ದೊಡ್ಡಿ ಠಾಣೆಯ ಇನ್ಸ್ ಪೆಕ್ಟರ್ ಆನಂದ್‌ಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಎಚ್ಚೆತ್ತ ಕೆಎಂ ದೊಡ್ಡಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.ಕೆಎಎಸ್ ಅಧಿಕಾರಿ ರೇಷ್ಮಾ ತಾಳಿಕೋಟಿ ಪತಿ ಆತ್ಮಹತ್ಯೆ

ಸಂಜಯ್ ಪಿಎಸ್‌ಐ ಸಮವಸ್ತ್ರದಲ್ಲಿ ಇರುವಾಗಲೇ ಹಿಡಿದು ವಿಚಾರಣೆ ಮಾಡಿದಾಗ ತಾನೊಬ್ಬ ನಕಲಿ ಪೊಲೀಸ್ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿ ಸಂಜಯ್‌ಗೆ ವಾರ್ನ್ ಮಾಡಲಾಗಿದ್ದು, ಕೋರ್ಟ್ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ.

Share This Article
Leave a comment