ಕೆಎಎಸ್ ಅಧಿಕಾರಿ ರೇಷ್ಮಾ ತಾಳಿಕೋಟಿ ಪತಿ ಆತ್ಮಹತ್ಯೆ

Team Newsnap
1 Min Read

ಕೆಎಎಸ್ ಅಧಿಕಾರಿ ರೇಷ್ಮಾ ತಾಳಿಕೋಟಿ ಪತಿ ಜಾಫರ್ ಫಿರ್ಜಾದೆ (39) ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರೇಷ್ಮಾ ಹಿಡಕಲ್ ಡ್ಯಾಂ ಭೂ ಸ್ವಾಧೀನಾಧಿಕಾರಿಯಾಗಿ ರುವ ರೇಷ್ಮಾ ತಾಳಿಕೋಟಿ ಅವರು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಪತಿ ಜಾಫರ್ ಫಿರ್ಜಾದೆ ಅವರು ಬೆಳಗಾವಿಯ ಆಜಂ ನಗರದಲ್ಲಿರುವ ತಮ್ಮ ಸಹೋದರನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ರೇಷ್ಮಾ ತಾಳಿಕೋಟಿ ಈ ಹಿಂದೆ ಹುಕ್ಕೇರಿ, ಖಾನಾಪುರ ಸೇರಿದಂತೆ ವಿವಿಧೆಡೆ ತಹಸಿಲ್ದಾರರಾಗಿ ಕಾರ್ಯನಿರ್ವಹಿಸಿದ್ದರು. ಪತಿ ಜಾಫರ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಎಫ್ ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಜಾಫರ್ ಫಿರ್ಜಾದೆ ಇಂದು ಆಜಂ ನಗರದಲ್ಲಿರುವ ತಮ್ಮ ಸಹೋದರ ಆಸಿಫ್ ಅವರ ಮನೆಗೆ ತೆರಳಿ ಅಲ್ಲಿಯೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಾಫರ್ ಅವರು ಕಳೆದ ಕೆಲವು ತಿಂಗಳಿನಿಂದ ಡಿಪ್ರೆಶನ್ ಗೆ ಒಳಗಾಗಿದ್ದರು ಎನ್ನುವ ಮಾಹಿತಿ ಇದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಶೇಖರ್ ಅವರು ಮಾಹಿತಿ ನೀಡಿದ್ದಾರೆ.

Share This Article
Leave a comment