ಖಾತೆ ತೆರೆದ ಕೋಲ್ಕತ್ತಾ – SRH ವಿರುದ್ದ 7 ವಿಕೆಟ್ ಗೆಲವು

Team Newsnap
2 Min Read

ದುಬೈನ ಅಬು ಹವ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್ 20-2ರ 8 ನೇ ದಿನದ ಮ್ಯಾಚ್ ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಮೊದಲ ಬಾರಿಗೆ ಗೆಲುವು ಸಾಧಿಸಿದೆ. ಈ ಮೂಲಕ ಕೋಲ್ಕತ್ತ ನೈಟ್ ರೈಡರ್ಸ್ ತಂಡ ತನ್ನ ಗೆಲುವಿನ ಖಾತೆ ಆರಂಭಿಸಿದಂತಾಗಿದೆ.

ಸನ್ ರೈಸರ್ಸ್ ಆಫ್ ಹೈದರಾಬಾದ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ಆಫ್ ಹೈದರಾಬಾದ್ ಎರಡನೇ ಬಾರಿಯೂ ಸೋಲನ್ನು ಅನುಭವಿಸಬೇಕಾಯ್ತು. ಸನ್ ರೈಸರ್ಸ್ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ನಾಯಕ ಡಿ. ವಾರ್ನರ್ ಹಾಗೂ ಉಪನಾಯಕ ಜೆ. ಬೇರ್ಸ್ಟೋವ್ ಅವರು ಉತ್ತಮ ಆಟ ಪ್ರಾರಂಭ ಮಾಡಿದರು. ಡಿ. ವಾರ್ನರ್ 30 ಎಸೆತಗಳಿಗೆ 36 ರನ್ ಗಳಿಸಿ ತಂಡ ಮೇಲೆತ್ತಲು ಪ್ರಯತ್ನಿಸಿದರು. ಆದರೆ ಜೆ. ಬೇರ್ಸ್ಟೋವ್ ಕೇವಲ 5 ರನ್ ಗಳಿಗೆ ಪೆವಿಲಿಯನ್ ಸೇರಿದಾಗ ರೈಸರ್ಸ್ ಅಭಿಮಾನಿಗಳಿಗೆ ನಿರಾಸೆಯಾಯ್ತು.

ಬೇರ್ಸ್ಟೋವ್ ನಂತರ ಬಂದ ಮನೀಶ್ ಪಾಂಡೆ 38 ಎಸೆತಗಾಳಲ್ಲಿ 51 ರನ್ ಮತ್ತು ಡಬ್ಲ್ಯೂ. ಸಹಾ 31 ಬಲ್ ಗಳಿಗೆ 30 ರನ್ ಗಳಿಸಿ ತಂಡಕ್ಕೆ ಆಸರೆಯಾದರಾದರೂ ತಂಡ ಗೆಲ್ಲಲಿಲ್ಲ ಮನೀಶ್ ಪಾಂಡೆಯವರ ಶ್ರಮ ಸಾರ್ಥಕವಾಗಲಿಲ್ಲ. ತಂಡವು 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು.

ಹೈದರಾಬಾದ್ ತಂಡ ಕೊಟ್ಟ ಗುರಿಯನ್ನು ಬೆನ್ನತ್ತಿ ಹೊರಟ ಕೋಲ್ಕತ್ತ ಉತ್ತಮ ಪ್ರದರ್ಶನವನ್ನೇ ನೀಡಿತು. ಕೋಲ್ಕತ್ತ ತಂಡದ ಆರಂಭಿಕ ಆಟಗಾರರಾಗಿ ಶುಭಮನ್ ಗಿಲ್ ಅವರು ಕೋಲ್ಕತ್ತ ತಂಡಕ್ಕೆ ದೊಡ್ಡ ಮಟ್ಟದ ಆಸರೆಯಾದರು. 62 ಎಸೆತಗಳಲ್ಲಿ 70 ರನ್ ಗಳ ಬೃಹತ್ ಮೊತ್ತವನ್ನು ತಂಡಕ್ಕೆ ಕೊಟ್ಟರು. ಗಿಲ್ ನಂತರ ಬಂದ ಆಟಗಾರರಾದ ಎನ್. ರಾಣ (13 ಎಸೆತಗಳಿಗೆ 26 ರನ್) ಹಾಗೂ ಇ. ಮಾರ್ಗನ್ (29 ಎಸೆತಗಳಿಗೆ 42 ರನ್) ಗಳಿಸಿ ತಂಡವು ಐಪಿಎಲ್ ನ 13 ನೇ ಸರಣಿಯಲ್ಲಿ ಮೊದಲ್ ಬಾರಿಗೆ ಖಾತೆ ತೆರೆಯುವಲ್ಲಿ ಮಹತ್ವದ ಪಾತ್ರ ವಹಿಸಿದರು. 18 ಓವರ್ ಗಳಲ್ಲಿ ತಂಡ 3 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು.

ಕೋಲ್ಕತ್ತ ತಂಡವು ಹೈದರಾಬಾದ್ ವಿರುದ್ಧ ಒಟ್ಟು 7 ವಿಕೆಟ್ ಗಳ ಭರ್ಜರಿ ಜಯವನ್ನು ಸಾಧಿಸಿತು.

Share This Article
Leave a comment