ಜನವರಿ 8 ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಶ್ರೀ ವಿಶ್ವೇಶ್ವರಯ್ಯ ಸ್ಕೂಲ್ ಆವರಣದಲ್ಲಿ ಮಂಗೋಟೆ ಶ್ರೀ ಮುರುಗೆಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು.
ಹೊಸಪೇಟೆ, ಕೊಪ್ಪಳ, ವಿಜಯನಗರ ಮತ್ತು ಶಿವಮೂಗ್ಗ ಜಿಲ್ಲೆಗಳ 25 ಕ್ಕೂ ಅದಿಕ ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಿದ್ದವು.ಅಭ್ಯರ್ಥಿಗಳನ್ನು ಸ್ಥಳದಲ್ಲೇ ನೇರ ಸಂದರ್ಶನ ನಡೆಸಲಾಯಿತು.ಸ್ಯಾಂಟ್ರೋ ರವಿ ಬಂಧನಕ್ಕೆ ನಾಲ್ಕು ತಂಡ ರಚನೆ: ADGP ಅಲೋಕ್ ಕುಮಾರ್
ಈ ಮೂಲಕ ತಮ್ಮ ಸಂಸ್ಥೆಗೆ ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕೊಪ್ಪಳ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಶ್ರೀವತ್ಸನ್ ಮತ್ತು ಮಾನವ ಸಂಪನ್ಮೂಲ ವಿಭಾಗದ ಸಂಯೋಜಕ ಉಪಾಧ್ಯಕ್ಷ ಪಿ.ನಾರಾಯಣ ಇವರು ಸ್ಥಳದಲ್ಲಿಯೇ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರ್ಡರ್ ನೀಡಿ ಶುಭಾಶಯ ತಿಳಿಸಿದರು.
ಭದ್ರಾವತಿಯ ಗಾಂಧಿವಾದಿ ಲಿಂಗೈಕ್ಯ ಮಂಗೋಟೆ ಶ್ರೀ ಮುರಿಗೆಪ್ಪ ನವರ ಹೆಸರಿನಲ್ಲಿ ಸ್ಥಾಪನೆ ಮಾಡಲಾದ ಚಾರಿಟಬಲ್ ಟ್ರಸ್ಟ್ ಮತ್ತು ಕುಟುಂಬ ಸದಸ್ಯರು ಸೇರಿ ಆಯೋಜಿಸಲಾಗಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಬೆಳಿಗ್ಗೆ 10 ,ಘಂಟೆಗೆ ವಿಶ್ವೇಶ್ವರಯ್ಯ ಶಾಲೆಯ ಆವರಣದಲ್ಲಿ ಶಿವಮೊಗ್ಗದ ಸಂಸದ ಬಿ.ವೈ ರಾಘವೇಂದ್ರ ರವರು ಮತ್ತು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಆರ್. ವಿ ಗುಮಾಸ್ತೆಯವರು ಮತ್ತು ಭದ್ರಾವತಿಯ ಕೈಗಾರಿಕೋದ್ಯಮಿ ಮತ್ತು ವಿಧಾನ ಪರಿಷತ್ ಸದಸ್ಯ ಎಸ್ ರುದ್ರೇಗೌಡರು ಮತ್ತು ಕಾರ್ಯಕ್ರಮದ ಅದ್ಯಕ್ಷ ಎಂಜಿ.ನಾಗರಾಜ್ ಸೇರಿದಂತೆ ಅನೇಕ ಆಹ್ವಾನಿತ ಅತಿಥಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ರಾಘವೇಂದ್ರ ಮಾತನಾಡಿ ಶಿವಮೊಗ್ಗ, ಭದ್ರಾವತಿಯ ಭಾಗದ ಅಭಿವೃದ್ಧಿ ಕಾರ್ಯಕ್ರಮ ದ ಬಗ್ಗೆ ವಿವರಿಸಿದರು. ನಂತರ ಆರ್ ವಿ ಗುಮಾಸ್ತೆಯವರು ಮಾತನಾಡುತ್ತಾ ಉದ್ಯೋಗ ಆಶ್ರಿತ ರಾಗಿ ಆಗಿಸಿದವರಿಗೆ ಶುಭಾಶಯ ತಿಳಿಸಿ ಇಲ್ಲಿ ಆಗಮಿಸಿರುವ ಕಾರ್ಖಾನೆಗಳು ಹೆಚ್ಚಾಗಿ ಉದ್ಯೋಗಗಳನ್ನು ನೀಡುವುದಾಗಿ ಬರವಸೆ ನೀಡಿದರು ಮತ್ತು ತಮ್ಮ ಕಂಪನಿಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಆರ್ಡರ್ ನೀಡಲು ಆದೇಶಿಸಿದರು.
ಮಂಗೋಟೆ ಶ್ರೀ ಮುರುಗೆಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮತ್ತು ಲಿಂಗೈಕ್ಯ ಶ್ರೀ ಮುರಿಗೆಪ್ಪ ನವರ ಮಕ್ಕಳು ಆಹ್ವಾನಿತ ಅತಿಥಿಗಳಿಗೆ ಸನ್ಮಾನಿಸಿದರು.
ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು ಆಗಮಿಸಿದ್ದು ಅದರಲ್ಲಿ ಮುಖ್ಯವಾಗಿ ಬಳ್ಳಾರಿ ಜಿಲ್ಲೆಯ ಜಿಂದಾಲ್ ಮತ್ತು ಸಮೂಹ ಕಂಪನಿಗಳು, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಎಸ್ ಎಲ್ ಆರ್, ಸ್ಮಯಿರೂ, ಕಲ್ಯಾಣಿ ಸ್ಟೀಲ್, ಮುಕುಂದ್ ಸುಮಿ, ಎಕ್ಸ್ಇಂಡಿಯಾ, ಬಿ ಎಂ ಎಂ , ಎಂ ಎಸ್ ಪಿ ಎಲ್ ಇನ್ನೂ ಹೆಚ್ಚಿನ ಕಾರ್ಖಾನೆಯ ಜೋತೆಗೆ ಶಿವಮೊಗ್ಗ ಜಿಲ್ಲೆಯ ಶಾಂತಲಾ ಪೌಂಡ್ರೀ ಮತ್ತು ಅನೇಕ ಹಾಸ್ಪಿಟಲ್‌ಗಳು ,ಶಾಲೆಗಳು ಪ್ರೈವೇಟ್ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸ್ಥಳದಲ್ಲೇ ನೇರ ಸಂದರ್ಶನ ನಡೆಸಿದರು.
ಈ ಉದ್ಯೋಗ ಮೇಳೆದಲ್ಲಿ ಎಸ್ಎಸ್ಎಲ್ಸಿ, ಐಟಿಐ , ಡಿಪ್ಲೋಮಾ, ಬಿಎಸ್ ಸಿ ,ಬಿಕಾಂ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಹೆಚ್ಚಾಗಿ ಭಾಗಿಯಾಗಿದ್ದರು. ಅದರಲ್ಲಿ ಮಹಿಳಾ ಅಭ್ಯರ್ಥಿಗಳು ಹೆಚ್ಚಾಗಿ ಭಾಗಿಯಾಗಿದ್ದು ಕಂಡುಬಂದಿತು.
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಶ್ರೀವತ್ಸನ್, ಹೆಚ್ ಆರ್ ವಿಭಾಗದ ಸಂಯೋಜಕ ಉಪಾಧ್ಯಕ್ಷರಾದ ಶ್ರೀ ಪಿ.ನಾರಾಯಣ, ಪ್ರೆಸಿಡೆಂಟ್ ಶ್ರೀ ಸಿ.ರಮೇಶ್ ಮತ್ತು ರಾಜಕೀಯ ಮುಖಂಡರು,ಶಾಲಾ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ಮುಖ್ಯಸ್ಥರು ಭಾಗಿಗಳಾಗಿದ್ದರು.
ಬೆಳಿಗ್ಗೆ ಯಿಂದ ಸಾಯಂಕಾಲ ವರೆಗೆ ಸುಮಾರು 1000 ಕ್ಕೂ ಅಧಿಕ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಗಳಾಗಿ ಸುಮಾರು ಅಭ್ಯರ್ಥಿಗಳು ಅನೇಕ ಕಾರ್ಖಾನೆಯ ಆಯ್ಕೆಯ ಪಟ್ಟಿಯಲ್ಲಿ ಸೇರಿದರು. ಈ ಕಾರ್ಯಕ್ರಮ ಆಯೋಜಿಸಿದ್ದ ಮಂಗೋಟೆ ಶ್ರೀ ಮುರುಗೆಪ್ಪ ನವರ ಧರ್ಮಪತ್ನಿ ರತ್ನಮ್ಮ ಮಕ್ಕಳಾದ ಶ್ರೀ ನಾಗರಾಜ್, ರುದ್ರೇಶ ಮತ್ತು ಆನಂದ್ ರವರು ಸಂತಸ ವ್ಯಕ್ತಪಡಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟ ಎಲ್ಲರಿಗೆಲ್ಲಾರಿಗೂ ಧನ್ಯವಾದ ತಿಳಿಸಿದರು.
ವರದಿ
ಮುರುಳಿಧರ್ ನಾಡಿಗೇರ್
ಹೊಸಪೇಟೆ -9008017727
- 8ನೇ ತರಗತಿ ವಿದ್ಯಾರ್ಥಿ Low ಬಿಪಿಯಿಂದ ಕುಸಿದು ಸಾವು
- ಮೈಸೂರು – ಕಲುಷಿತ ನೀರು ಸೇವಿಸಿ ಓರ್ವ ಸಾವು, 12 ಜನ ಅಸ್ವಸ್ಥ
- ಮಂಡ್ಯ ಭ್ರೂಣ ಹತ್ಯೆ ಪ್ರಕರಣ : ಆರು ಮಂದಿ ಬಂಧನ
- ನಟ ಕಿರಣ್ ರಾಜ್ ಕಾರು ಅಪಘಾತ : ಎದೆಗೆ ತೀವ್ರ ಪೆಟ್ಟು – ಕೆಂಗೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
- ಮುಡಾ ಹಗರಣ : 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್
- ಮಾಧ್ಯಮಗಳ ಮೇಲೆ ನಿಷೇಧ ಹೇರುವಂತೆ ನಟ ದರ್ಶನ್ ಕೋರಿಕೆ