ಟಿ 20 ವಿಶ್ವ ಕಪ್ ಸೆಮೀಸ್​​ಗೆ ಕಿವೀಸ್​​, ಭಾರತೀಯ ತಂಡ ಗಂಟು ಮೂಟೆ ಜೊತೆ ಮನೆಗೆ

Team Newsnap
1 Min Read

ಭಾರತೀಯರ ಆಸೆಗೆ ತಣ್ಣೀರು ಎರಚಿದ ನ್ಯೂಜಿಲೆಂಡ್ ತಂಡ ಟಿ 20 ಸೆಮೀಸ್​​ಗೆ ತಲುಪಿದೆ ಭಾರತೀಯ ತಂಡ
ಮನೆಗೆ ಗಂಟು ಮೂಟೆ ಕಟ್ಟಲು ಬೇರೆ ದಾರಿಯೇ ಇಲ್ಲ

ದುಬೈ ಇಂಟರ್​ನ್ಯಾಷನಲ್​​​ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವಿನ ಪಂದ್ಯದಲ್ಲಿ ಕಿವೀಸ್​ ಪಡೆ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ಈ ಗೆಲುವಿನೊಂದಿಗೆ ಸೆಮೀಸ್​​​​ ತಲುಪಿದೆ. ಇತ್ತ ಅಫ್ಘಾನಿಸ್ತಾನದೊಂದಿಗೆ ಕೊಹ್ಲಿ ಬಾಯ್ಸ್​ ಕೂಡ ತವರಿಗೆ ಮರಳೋದು ಖಚಿತ​ ಆಗಿದೆ.

ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಅಫ್ಘಾನ್​​ ತಂಡ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್​ಗಳಿಸಿತು.

ಈ ಸುಲಭ ಗುರಿಯನ್ನು ಬೆನ್ನತ್ತಿದ್ದ ನ್ಯೂಜಿಲೆಂಡ್​ ತಂಡ ಕೇವಲ 18.1 ಓವರ್​ಗಳಲ್ಲಿ 125 ರನ್​ಗಳಿಸಿ ಗುರಿ ತಲುಪಿತು.

ಕಿವೀಸ್ ಪರ ಗಫ್ಟಿಲ್​ 28, ಡೇರಿಲ್ ಮಿಚೆಲ್ 17 ರನ್​ ಗಳಿಸಿ ಔಟಾದರೆ, ನಾಯಕ ವಿಲಿಯಮ್ಸನ್ ಅಜೇಯ 40 ರನ್​, ಡೆವೊನ್ ಕಾನ್ವೇ ಅಜೇಯ 36 ರನ್​ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

Share This Article
Leave a comment