December 20, 2024

Newsnap Kannada

The World at your finger tips!

kingpin manjunath

PSI ಹಗರಣ: ಕಿಂಗ್​​ಪಿನ್ ಮಂಜುನಾಥ್‌ ಮೇಳಕುಂದಿ CIDಗೆ ಶರಣು

Spread the love

545 ಪಿಎಸ್​ಐ ಪರೀಕ್ಷಾ ಅಕ್ರಮದ ಪ್ರಮುಖ ಕಿಂಗ್​​ಪಿನ್​​ಗಳಲ್ಲಿ ಒಬ್ಬ ಎಂದು ಆರೋಪ ಹೊತ್ತಿದ್ದ ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ನೀರಾವರಿ ಇಲಾಖೆಯ ಎಇ ಮಂಜುನಾಥ್‌ ಮೇಳಕುಂದಿ ಭಾನುವಾರ ಸಿಐಡಿ ಪೊಲೀಸರ ಎದುರು ಶರಣಾನಾಗಿದ್ದಾನೆ.

ಆಟೋದಲ್ಲಿ ಸಿಐಡಿ ಕಚೇರಿಗೆ ಬಂದ ಆರೋಪಿ ಮಂಜುನಾಥ್, ಅಕ್ರಮದಲ್ಲಿ ನನ್ನ ಹೆಸರು ಕೇಳಿ ಬಂದಿದೆ. ಆದರೆ ಇದರಲ್ಲಿ ನನ್ನ ಪಾತ್ರವಿಲ್ಲ. ನನಗೆ ಗೊತ್ತಿರೋ ಮಾಹಿತಿಯನ್ನು ಸಿಐಡಿ ಅಧಿಕಾರಿಗಳಿಗೆ ತಿಳಿಸಲು ಈಗ ಕಚೇರಿಗೆ ಆಗಮಿಸಿದ್ದೇನೆ ಎಂದರು

ಅನಾರೋಗ್ಯದ ಸಮಸ್ಯೆಯಿಂದ ನಾನು ಮಂಗಳೂರಿಗೆ ಹೋಗಿದ್ದೆ. ಇವತ್ತು ಅಲ್ಲಿಂದ ಬಂದಿದ್ದೇನೆ. ಅಕ್ರಮದಲ್ಲಿ ಭಾಗಿಯಾಗಿರೋರು ಯಾರು ನಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದ್ದಾನೆ.

ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಪರೀಕ್ಷೆಯಲ್ಲಿ ಕೆಲ ಆರೋಪಿತ ಅಭ್ಯರ್ಥಿಗಳು ಬಳಕೆ ಮಾಡಿದ್ದ ಬ್ಲೂ ಟೂತ್‌ಗಳನ್ನು ಮಂಜುನಾಥ್ ನೀಡಿದ್ದ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಪ್ರಕರಣದ ಆರೋಪಿಯಾಗಿರುವ ಅಫ್ಜಲಪುರ ತಾಲೂಕಿನ ಕಾಂಗ್ರೆಸ್‌ ಮುಖಂಡ ರುದ್ರಗೌಡ ಪಾಟೀಲ್‌ನ ತಂಡದಲ್ಲಿ ಈತ ಇದ್ದ. ವಿದ್ಯುನ್ಮಾನ ಉಪಕರಣಗಳನ್ನು ಕರಾಕುವಕ್ಕಾಗಿ ಬಳಸಿದ ಆರೋಪಿ ಎನ್ನಲಾಗಿತ್ತು.

ಇದನ್ನು ಓದಿ : ಇ-ಖಾತೆಯಲ್ಲಿ ಅಕ್ರಮ: ಕನಕಪುರ ಪಿಡಿಒ ರವಿ ಆತ್ಮಹತ್ಯೆ

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಮಪತ್ತೆಯಾಗಿದ್ದ ಮಂಜುನಾಥ್ ಕಳೆದ 21 ದಿನಗಳಿಂದ ಯಾಕೆ ಶರಣಾಗಲಿಲ್ಲ ಎಂಬ ಅನುಮಾನ ಎದುರಾಗಿದೆ.

Copyright © All rights reserved Newsnap | Newsever by AF themes.
error: Content is protected !!