ನಿಖಿಲ್ (24) ಮೃತ ದುರ್ದೈವಿ. ಬೆಂಗಳೂರಿನ ಕೆಂಗೇರಿಯಲ್ಲಿ K 1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಕಿಕ್ ಬಾಕ್ಸಿಂಗ್ ಸ್ಪರ್ಧೆ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ನಿಖಿಲ್ ಪಾಲ್ಗೊಂಡಿದ್ದರು.ಇದನ್ನು ಓದಿ –ಮಳವಳ್ಳಿ ಬಳಿ ಭೀಕರ ರಸ್ತೆ ಅಪಘಾತ : ಆಟೋಗೆ ಕಾರ್ ಡಿಕ್ಕಿ – ಮೂವರು ಧಾರುಣ ಸಾವು
ಕಿಕ್ ಬಾಕ್ಸಿಂಗ್ನ ರಿಂಗ್‌ನಲ್ಲಿ ಸೆಣಸಾಡುತ್ತಿರುವಾಗ ಎದುರಾಳಿಯು ನಿಖಿಲ್ ತಲೆಗೆ ಹೊಡೆದ ಏಟಿಗೆ ಬಾಕ್ಸಿಂಗ್ ರಿಂಗ್ನಲ್ಲೇ ನಿಖಿಲ್ ಕೆಳಗೆ ಬಿದ್ದವರು ಮೇಲಕ್ಕೆ ಏಳಲೇ ಇಲ್ಲ. ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಎರಡು ದಿನ ಕೋಮಾದಲ್ಲಿದ್ದ ನಿಖಿಲ್, ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದರು.
ನಿಖಿಲ್ ತಂದೆ ಬಾಕ್ಸರ್ ಆಗಿದ್ದರು. ಕಿಕ್ ಬಾಕ್ಸಿಂಗ್ನಲ್ಲಿ ಹೆಸರು ಮಾಡಬೇಕೆಂದು ನಿಖಿಲ್ ಕನಸು ಕಂಡಿದ್ದ. ಆದರೆ, ವಿಧಿಯಾಟದ ಮುಂದೆ ನಿಖಿಲ್ರ ಜೀವವೇ ಕರಗಿದೆ.
ಕಿಕ್ ಬಾಕ್ಸಿಂಗ್ನ ರಿಂಗ್‌ನಲ್ಲಿ ನಿಖಿಲ್ ಕೆಳಗೆ ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ, ನಿಖಿಲ್ರ ಬದುಕಿನ ಕೊನೇ ಕ್ಷಣ ನೋಡಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು