December 23, 2024

Newsnap Kannada

The World at your finger tips!

fraud , bankers , dairy

Beware of Fraudsters (Banker's Diary)

ಕೇರಳದ ಸುಂದರಿ ಫೋಟೋ, ಮಾತಿಗೆ ಮನಸೋತ ಶಿಕ್ಷಕ – ಲಕ್ಷ ಲಕ್ಷ ಕಿತ್ತ ಯುವತಿ!

Spread the love

ಕೇರಳದ ಸುಂದರಿ ಮಾತು, ಮೆಸೇಜ್, ಫೋಟೋಗೆ ಮರುಳಾಗಿ ಬಳ್ಳಾರಿ ಖಾಸಗಿ ಶಾಲೆ ಶಿಕ್ಷಕನೊಬ್ಬ ಲಕ್ಷ, ಲಕ್ಷ ಹಣದ ಜೊತೆಗೆ ಕೆಲಸವನ್ನೂ ಕಳೆದುಕೊಂಡಿದ್ದಾನೆ.

ಶಿಕ್ಷಕ ದೇವೇಂದ್ರಪ್ಪ ಹಣ, ಕೆಲಸ ಕಳೆದುಕೊಂಡ ವ್ಯಕ್ತಿ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಗ್ರಾಮವೊಂದರಲ್ಲಿ ಹೈಸ್ಕೂಲ್ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು.ಗಡಿ ತಂಟೆ ಇಲ್ಲಿಗೆ ಬಿಡಿ : ಸುಪ್ರೀಂ ಆದೇಶವೇ ‌ ಅಂತಿಮ – ಶಾ

ಹೆಂಡತಿಯನ್ನು ಕಾರಣಾಂತರದಿಂದ ಬಿಟ್ಟಿದ್ದ ಈ ಶಿಕ್ಷಕ ಮ್ಯಾಟ್ರಿಮೊನಿ ಮೂಲಕ ಕೇರಳದ ಯುವತಿ ಜೊತೆ ಗೆಳೆತನ ಬೆಳೆಸಿದ್ದಾನೆ. ಕೊರೊನಾದ ಖಾಲಿ ಸಮಯದದಲ್ಲಿ ಪರಿಚಯವಾದ ಈ ಸುಂದರಿ ಜೊತೆ ನಿತ್ಯವೂ ಚಾಟಿಂಗ್ ನಡೆಸಿದ್ದಾನೆ.

ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವುದಾಗಿ ಹೇಳಿದ್ದ ಸುಂದರಿ ಮೊದಲಿಗೆ ಮೆಸ್‌ಗೆ ಕಟ್ಟಲು ಹಣವಿಲ್ಲವೆಂದಾಗ, 6 ಸಾವಿರ ರು ಹಣವನ್ನು ಯುವತಿಯ ಗೆಳೆತಿಯ ಅಕೌಂಟ್‌ಗೆ ವರ್ಗಾವಣೆ ಮಾಡಿದ್ದಾನೆ. ಅಲ್ಲಿಂದ ಆರಂಭವಾದ ಈ ಹಣದ ವ್ಯವಹಾರ ಹೆಚ್ಚು ಕಡಿಮೆ 8 ರಿಂದ 10 ಲಕ್ಷದವರೆಗೂ ಕಳುಹಿಸಿದ್ದಾನೆ, ಯುವತಿಗಾಗಿ ಕೇರಳಕ್ಕೆ ಹೋಗಿ ಶಿಕ್ಷಕ ಖಾಲಿ ಕೈಯಲ್ಲಿ ವಾಪಸ್ ಬಂದಿದ್ದಾರೆ.


ಪರಿಚಯವಾದಾಗಿನಿಂದಲೂ ಭೇಟಿಯಾಗೋದಕ್ಕೆ ಹವಣಿಸೋ ಶಿಕ್ಷಕನನ್ನು ಒಮ್ಮೆ ಹೈದರಾಬಾದ್‌ಗೆ ಕರೆಸಿದ್ದ ಯುವತಿ, ಅಲ್ಲಿ ಮತ್ತೊಂದು ಯುವತಿಯ ಪರಿಚಯ ಮಾಡಿಸಿದ್ದಾರೆ. ಅದು ಕೂಡ ಪೋನಿನಲ್ಲೇ. ಅಲ್ಲಿಯೂ ಒಂದಷ್ಟು ಹಣ ಕಳೆದುಕೊಂಡು ಬಂದ ಶಿಕ್ಷಕ ಇದೀಗ ಯುವತಿಯ ಜೊತೆ ಮದುವೆಯಾಗಲು ಹಾತೊರೆಯುತ್ತಿದ್ದಾರೆ. ಯುವತಿ ಮಾತ್ರ ಸಂಪರ್ಕಕ್ಕೆ ಸಿಗುತ್ತಿಲ್ಲ. ಪ್ರಕರಣ ಈಗ ಪೋಲಿಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆ ಇದೆ.

Copyright © All rights reserved Newsnap | Newsever by AF themes.
error: Content is protected !!