ಕೆನ್ನಾಳು ಗ್ರಾಪಂ‌ : ಪತಿ ,ಪತ್ನಿ, ಮಗ ನಾಮಪತ್ರ – ಒಂದೇ ಕುಟುಂಬ, ಒಂದೇ ಪಂಚಾಯತಿ!

Team Newsnap
1 Min Read

ಮಂಡ್ಯ ಜಿಲ್ಲೆಯಲ್ಲಿ ಎರಡನೇ ಗ್ರಾಮ ಪಂಚಾಯ್ತಿ ಚುನಾವಣೆಗೆ ಈಗ ನಾಮಪತ್ರ ಸಲ್ಲಿಸುವ ಕಾರ್ಯ ಬಿರುಸಿನಿಂದ ಸಾಗಿದೆ .

ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಹಳ್ಳಿಯೊಂದರಲ್ಲಿ ಪತಿ, ಪತ್ನಿ ಹಾಗೂ ಪುತ್ರ, ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.

ಅಪ್ಪ ಅಮ್ಮ ಮಗ……

ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿ ಹರಳಹಳ್ಳಿ ಗ್ರಾಮದ ಸಾಮಾನ್ಯ ಮೀಸಲಾತಿಗೆ ಸೇರಿದ 1ನೇ ವಾರ್ಡ್ ನಿಂದ ಪಾಂಡವಪುರ ತಾಲೂಕು ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಅಂಬಿ ಸುಬ್ಬಣ್ಣ ಹಾಗೂ ಇವರ ಪತ್ನಿ ಇದೇ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ವಿಶ್ವೇಶ್ವರನಗರ ಬಡಾವಣೆಯ ಬಿಸಿಎಂ ‘ಬಿ’ ಮಹಿಳೆ ಮೀಸಲು ಕ್ಷೇತ್ರದ 3ನೇ ವಾರ್ಡ್ ನಿಂದ ಸುಮಿತ್ರ ಸುಬ್ಬಣ್ಣ ಮತ್ತು ಅಂಬಿ ಸುಬ್ಬಣ್ಣ ದಂಪತಿಯ ಪುತ್ರ ಎಸ್.ಅಭಿಷೇಕ್ ಸುಬ್ಬಣ್ಣ ಅವರು ಇದೇ ಗ್ರಾಮ ಪಂಚಾಯ್ತಿಗೆ ಸೇರಿದ ಹರಳಹಳ್ಳಿ ಗ್ರಾಮದ ಸಾಮಾನ್ಯ ಮೀಸಲು 2ನೇ ವಾರ್ಡ್ ನಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.

ಕುಟುಂಬದಿಂದ ಒಟ್ಟಿಗೆ ನಾಮಪತ್ರ:

ಪಾಂಡವಪುರ ತಾಲ್ಲೂಕಿನ ಹರಳಹಳ್ಳಿ ಗ್ರಾಮದ ನಿವಾಸದಿಂದ ಕುಟುಂಬ ಸಮೇತ ಮೂವರು ಮಂದಿ ಅಭ್ಯರ್ಥಿಗಳು ಒಟ್ಟಾಗಿ ಬಂದು ಗ್ರಾಮದ ಮಾರಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಕೆನ್ನಾಳು ಗ್ರಾಮ ಪಂಚಾಯ್ತಿಗೆ ತೆರಳಿ ಚುನಾವಣಾಧಿಕಾರಿ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕಿ ಸೌಮ್ಯ ಅವರಿಗೆ
ಅಂಬಿ ಸುಬ್ಬಣ್ಣ ಕುಟುಂಬದ ಮೂರು ಮಂದಿ ಪ್ರತ್ಯೇಕ ಮೂರು ವಾರ್ಡ್ ಗಳಿಗೆ ತಮ್ಮ ನಾಮಪತ್ರ ಸಲ್ಲಿಸಿ ಎಲ್ಲರ ಗಮನ ಸೆಳೆದರು.

ಪಾಂಡವಪುರ ತಾಲೂಕು ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಅಂಬಿ ಸುಬ್ಬಣ್ಣ ಅನೇಕ ವರ್ಷಗಳಿಂದ ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಯಾಗಿದ್ದಾರೆ.ಬ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಜೊತೆ ರಾಜಕೀಯವಾಗಿ ಗುರುತಿಸಿಕೊಂಡಿದ್ದಾರೆ.. ಈ ಹಿಂದೆ ಅಂಬಿ ಸುಬ್ಬಣ್ಣ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

Share This Article
Leave a comment