2024ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ರಾಷ್ಟ್ರೀಯ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ.
ಇಂದು ಮಧ್ಯಾಹ್ನ 1.19ಕ್ಕೆ ತಮ್ಮ ಹೊಸ ಪಕ್ಷಕ್ಕೆ ‘ಭಾರತ್ ರಾಷ್ಟ್ರ ಸಮಿತಿ’ ( Bharath Rashtra Samithi )ಎಂದು ನಾಮಕರಣ ಮಾಡಿ ಘೋಷಿಸಿದ್ದಾರೆ.ಇದನ್ನು ಓದಿ –ಮಂಡ್ಯ ಮಹಾ ಕುಂಭಮೇಳಕ್ಕೆ ಅಕ್ಟೋಬರ್ 6 ರಿಂದ 14 ರವರೆಗೆ ಮಹದೇಶ್ವರ ಜ್ಯೋತಿ ಯಾತ್ರೆ
‘ತೆಲಂಗಾಣ ಭವನ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣ ( Telangana ) ರಾಷ್ಟ್ರ ಸಮಿತಿ ನಾಯಕರು, ಜೆಡಿಎಸ್ ( JDS ) ನಾಯಕರು ಹಾಗೂ ತೃತೀಯರ ರಂಗ ಬೆಂಬಲಿತರು ಭಾಗಿಯಾಗಿದ್ದರು. ಈ ಮೂಲಕ ದೇಶದಲ್ಲಿ ತೆಲಂಗಾಣ ಸಿಎಂ ಕೆಸಿಆರ್ ( KSR ) ಹೊಸ ಪಕ್ಷ ಕಟ್ಟುವ ಕನಸು ಇವತ್ತು ಸಾಕಾರಗೊಂಡಿದೆ.
ಮುಂದಿನ ಚುನಾವಣೆಗಳನ್ನು ( Elections ) ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಿನ ಸಮರ ಸಾರಲು ಕೆಸಿಆರ್ ಹೊಸಪಡೆಯನ್ನ ಕಟ್ಟಿದ್ದಾರೆ. ಓಡುವ ಕುದುರೆ ಎನ್‌ಡಿಎಗೆ ಲಗಾಮು ಹಾಕಲು, ಕುಗ್ಗುತ್ತಿರುವ ಕಾಂಗ್ರೆಸ್‌ನ ನೆಲಕಚ್ಚಿಸಲು ಕೆಸಿಆರ್‌ರ ಹೊಸ ಪಕ್ಷ ಇವತ್ತು ಉದಯವಾಗಿದೆ.
2024ಕ್ಕೆ ನರೇಂದ್ರ ಮೋದಿ ( Narendra Modi ) ಎನ್‌ಡಿಎ ಸರ್ಕಾರದ 5 ವರ್ಷದ ಅವಧಿ ಮಕ್ತಾಯವಾಗಲಿದೆ. ದೇಶದಲ್ಲಿ ಮತ್ತೆ ಲೋಕಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ರಾಷ್ಟ್ರ ರಾಜಕೀಯದಲ್ಲಿ ( Politics ) ತೃತೀಯ ರಂಗ ತಲೆ ಎತ್ತುವ ಎಲ್ಲಾ ಚರ್ಚೆಗಳು ಆರಂಭವಾಗಿವೆ.
ಅದರಲ್ಲೂ ದೇಶದಲ್ಲಿ ಬಿಜೆಪಿಯ ( BJP )ನಾಗಾಲೋಟಕ್ಕೆ ಬ್ರೇಕ್ ಹಾಕಲು ತೆಲಂಗಾಣ ಸಿಎಂ ( CM ) ಹೊಸ ಪಕ್ಷ ಹುಟ್ಟುಹಾಕಲು ಸಿದ್ಧರಾಗಿದ್ದಾರೆ. ಈ ಮೂಲಕ ಕೆ. ಚಂದ್ರಶೇಖರ್ ರಾವ್ ( K Chandrashekar Rao )ಪ್ರಧಾನಿ ಹುದ್ದೆಯ ಕನಸನ್ನು ಹಿಂಬಾಲಿಸುತ್ತಿದ್ದಾರೆ.