ಮಂಡ್ಯ ಮಹಾ ಕುಂಭಮೇಳಕ್ಕೆ ಅಕ್ಟೋಬರ್ 6 ರಿಂದ 14 ರವರೆಗೆ ಮಹದೇಶ್ವರ ಜ್ಯೋತಿ ಯಾತ್ರೆ

Team Newsnap
5 Min Read
Mahadeshwara Jyoti Yatra for Mandya Maha Kumbha Mela from 6th to 14th Oct ಮಂಡ್ಯ ಮಹಾ ಕುಂಭಮೇಳಕ್ಕೆ ಅಕ್ಟೋಬರ್ 6 ರಿಂದ 14 ರವರೆಗೆ ಮಹದೇಶ್ವರ ಜ್ಯೋತಿ ಯಾತ್ರೆ

ಅ.6 ರಿಂದ 13 ರವರೆಗೆ ಮಹದೇಶ್ವರ ಜ್ಯೋತಿ ಯಾತ್ರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ ‌14 ರಿಂದ 16 ರವರೆಗೆ ಮಹಾಕುಂಭಮೇಳ ಪುಣ್ಯಸ್ನಾನ ನಡೆಯಲಿದೆ.ಇದನ್ನು ಓದಿ –ಹೆದ್ದಾರಿಯಲ್ಲೇ ಎತ್ತಿನಗಾಡಿಯೊಂದಿಗೆ ಪ್ರತಿಭಟನೆ : ಮಂಡ್ಯ ರೈತರು ಪೊಲೀಸ್ ವಶಕ್ಕೆ

ಈ ಕಾರ್ಯಕ್ರಮಕ್ಕೆ ಅಕ್ಟೋಬರ್ 6 ರಂದು ಮಹದೇಶ್ವರ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಗುವುದು. ಜ್ಯೋತಿ ಯಾತ್ರೆಯು ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಿ ತ್ರಿವೇಣಿ ಸಂಗಮ ಸೇರಲಿದೆ.

ಮಹದೇಶ್ವರ ಜ್ಯೋತಿ ಯಾತ್ರೆಯ ಮೊದಲನೇ ವಾಹನ ಸಂಚರಿಸುವ ಮಾರ್ಗ

WhatsApp Image 2022 10 05 at 2.56.27 PM

ಅ.6 ರಂದು ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ಸಾಲೂರು ಮಠ- ಹನೂರು- ಕುಂತೂರು- ಕೊಳ್ಳೇಗಾಲದ ಮಾರ್ಗವಾಗಿ ಸಂಚರಿಸಿ ಟಿ ನರಸೀಪುರ ಜಗದ್ಗುರು ಶ್ರಶಿವರಾತ್ರೀಶ್ವರ ಮಂಗಳ ಮಂಟಪದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 07 ರಂದು ಬೆಳಿಗ್ಗೆ ಟಿ ನರಸೀಪುರದಿಂದ ಕರೊಹಟ್ಟಿ, ವಾಟಾಳು,ಮೂಗೂರು – ಸಂತೇಮರಳ್ಳಿ -ಯಳಂದೂರು ಇರಸುವಾಡಿ- ಮಸಣಾಪುರ- ಹೊಂಗನೂರು- ರೇಚಂಬಳ್ಳಿ- ಕಾಗಲವಾಡಿ, ಹುರಳಿಬಂಜನಪುರ,ಸರಗೂರು,ಚಂದಕವಾಡಿ, ಕೋಡಿಮೋಳೆ, ರಾಮಸಮುದ್ರ ಮಾರ್ಗವಾಗಿ ಸಂಚರಿಸಿ ಚಾಮರಾಜನಗರ ಸಿದ್ದಮಲ್ಲೇಶ್ವರ ಮಠದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 08 ರಂದು ಬೆಳಿಗ್ಗೆ ಚಾಮರಾಜನಗರದಿಂದ ಗುಂಡ್ಲುಪೇಟೆ- ನಂಜನಗೂಡು -ಸುತ್ತೂರು ಮಠ- ಮಾರ್ಗವಾಗಿ ಸಂಚರಿಸಿ ಸುತ್ತೂರು ಮಠದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 9 ರಂದು ಬೆಳಗ್ಗೆ ಸುತ್ತೂರು ಮಠದಿಂದ ಅಲತ್ತೂರುಹುಂಡಿ, ಮಾದಯ್ಯನಹುಂಡಿ, ಮಲ್ಲರಾಜಯ್ಯನಹುಂಡಿ, ಮೂಡಳ್ಳಿ, ಹದಿನಾರು, ಮರಿಗೌಡನಹುಂಡಿ, ದೇವಲಾಪುರ, ಚಿಕ್ಕೇಗೌಡನಹುಂಡಿ, ಹೊಸಹುಂಡಿ, ತ್ರಿನೇಶ್ವರ ದೇವಸ್ಥಾನದ ಅರಮನೆ- ಮೈಸೂರು- ಚಾಮುಂಡಿ ಬೆಟ್ಟ- ಲಕ್ಷ್ಮಿಕಾಂತ ದೇವಸ್ಥಾನ-ಒಂಟಿಕೊಪ್ಪಲ್ – ವೆಂಕಟೇಶ್ವರ ದೇವಸ್ಥಾನ- ಚಂದ್ರಮೌಳೇಶ್ವರ ದೇವಸ್ಥಾನ- ಹೆಗ್ಗಡ ದೇವನಕೋಟೆ- ಸರಗೂರು ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ಸಂಚರಿಸಿ ಶ್ರೀ ಮಹದೇಶ್ವರ ದೇವಾಲಯ ಭೀಮ ಕೊಲ್ಲಿಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 10 ರಂದು ಬೆಳಿಗ್ಗೆ ಶ್ರೀ ಮಹದೇಶ್ವರ ದೇವಾಲಯ ಭೀಮ ಕೊಲ್ಲಿಯಿಂದ ಹೆಗ್ಗಡ ದೇವನಕೋಟೆ- ಅಂತರಸಂತೆ – ಬೇಲದ ಕುಪ್ಪೆ ಮಾರ್ಗವಾಗಿ ಸಂಚರಿಸಿ ಗದ್ದಿಗೆ ಶ್ರೀ ಕೆಂಡಗಣೇಶ್ವರ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 11 ರಂದು ಬೆಳಿಗ್ಗೆ ಗದ್ದಿಗೆ ಶ್ರೀ ಕೆಂಡಗಣೇಶ್ವರ ದೇವಾಲಯದಿಂದ ಹುಣಸೂರು- ಬೆಟ್ಟದಪುರ- ಮಾರ್ಗವಾಗಿ ಸಂಚರಿಸಿ ಶ್ರೀ ಮಹಾದೇಶ್ವರ ದೇವಾಲಯ ಪಿರಿಯಾಪಟ್ಟಣದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 12 ರಂದು ಬೆಳಿಗ್ಗೆ ಪಿರಿಯಾಪಟ್ಟಣದಿಂದ ಶಿವ ದೇವಸ್ಥಾನ- ಪಿರಿಯಾಪಟ್ಟಣ -ಹುಣಸೂರು- ತಿಪ್ಪೂರು -ಸಾಲಿಗ್ರಾಮ -ಕೆ ಆರ್ ನಗರ- ಎಡತೊರೆ- ಅರ್ಕೇಶ್ವರ ದೇವಸ್ಥಾನ- ಆಲಂಬಾಡಿ ಕಾವಲು- ಅಕ್ಕಿ ಹೆಬ್ಬಾಳು ಮಾರ್ಗವಾಗಿ ಸಂಚರಿಸಿ ಕೆ ಆರ್ ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 13 ರಂದು ಬೆಳಿಗ್ಗೆ ಕೆ ಆರ್ ಪೇಟೆಯಿಂದ ಮತ್ತಿಘಟ್ಟ -ವಿಠಲಾಪುರ -ಸೋಮನಹಳ್ಳಿ -ಪುರ- ಅಂಬಿಗರಹಳ್ಳಿ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮ (ಆಗಮನ) ವಾಸ್ತವ್ಯ ಹೂಡಲಿದೆ.

ಮಹದೇಶ್ವರ ಜ್ಯೋತಿ ಯಾತ್ರೆಯ ಎರಡನೇ ವಾಹನ ಸಂಚರಿಸುವ ಮಾರ್ಗ

WhatsApp Image 2022 10 05 at 2.56.40 PM

ಅಕ್ಟೋಬರ್ 06 ರಂದು ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲ -ಹನೂರು -ಬಿ.ಜಿ ಪುರ- ಮಾರ್ಗವಾಗಿ ಸಂಚರಿಸಿ ಬಿ.ಜಿ ಪುರ ಮಂಟೇಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 07 ರಂದು ಬೆಳಿಗ್ಗೆ ಬಿ.ಜಿ ಪುರ ಮಂಟೇಸ್ವಾಮಿ ಪುಣ್ಯ ಕ್ಷೇತ್ರದಿಂದ ಹಲಗೂರು ಮಳವಳ್ಳಿ- ಕಸಬಾ 1,2 ಮತ್ತು 3 -ಕಿರಗಾವಲು 1,2 ಮತ್ತು 3 ಕೆಎಂ ದೊಡ್ಡಿ ಮಾರ್ಗವಾಗಿ ಸಂಚರಿಸಿ ಕೆ ಎಂ ದೊಡ್ಡಿ ಹನುಮಂತನಗರ ಆತ್ಮಲಿಂಗೇಶ್ವರ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 8 ರಂದು ಬೆಳಿಗ್ಗೆ ಕೆ ಎಂ ದೊಡ್ಡಿ ಹನುಮಂತನಗರ ಆತ್ಮಲಿಂಗೇಶ್ವರ ದೇವಾಲಯದಿಂದ ಆತಗೂರು -ಕೆಸ್ತೂರು -ಬೆಸಗರಹಳ್ಳಿ -ಕೊಪ್ಪ- ಬಿದರಕೋಟೆ – ಮಾರಗೌಡನಹಳ್ಳಿ ಮಾರ್ಗವಾಗಿ ಸಂಚರಿಸಿ ಕೆರಗೋಡು ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 9 ರಂದು ಬೆಳಿಗ್ಗೆ ಕೆರಗೋಡು ಶ್ರೀ ಪಂಚಲಿಂಗೇಶ್ವರ ದೇವಾಲಯದಿಂದ ಕೀಲಾರ- ಹನಕೆರೆ- ಮಂಡ್ಯ ಹುಲಿವಾನ -ಜೀಗುಂಡಿ ಪಟ್ಟಣ -ದುದ್ದ -ಶಿವಳ್ಳಿ ಚಂದಗಾವಲು -ಹೊಳಲು -ಯಲಿಯೂರು -ತೂಬಿನಕೆರೆ ಮಾರ್ಗವಾಗಿ ಸಂಚರಿಸಿ ಕೊತ್ತತ್ತಿಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 10 ರಂದು ಬೆಳಿಗ್ಗೆ ಅರಕೆರೆ 1 ಮತ್ತು 2 ಮಹದೇವಪುರ -ಮಂಡ್ಯ ಕೊಪ್ಪಲು- ಶ್ರೀರಂಗಪಟ್ಟಣ ಶೆಟ್ಟಳ್ಳಿ 1 ಮತ್ತು 2 ದರಸಗುಪ್ಪೆ- ಉಕ್ಕುಡ- ಕ್ಯಾತನಹಳ್ಳಿ- ಅರಳಕುಪ್ಪೆ -ಹರವು- ಕಟ್ಟೆರಿ -ಗಾಮನಹಳ್ಳಿ -ಚಿನಕುರಳಿ ಬೆಟ್ಟಹಳ್ಳಿ -ಪಾಂಡವಪುರ- ಬೆಳ್ಳಾಳೆ- ಇಂಗಳಗುಪ್ಪೆ ಕೆರೆತೊನ್ನೂರು -ಪಿ ಎಸ್ ಛತ್ರ -ಜಕ್ಕನಹಳ್ಳಿ ಮಾರ್ಗವಾಗಿ ಸಂಚರಿಸಿ ಮೇಲುಕೋಟೆಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 11 ರಂದು ಬೆಳಿಗ್ಗೆ ಮೇಲುಕೋಟೆಯಿಂದ ಹೊಣಕೆರೆ- ದೇವಲಾಪುರ -ನಾಗಮಂಗಲ -ಬೆಳ್ಳೂರು ಮಾರ್ಗವಾಗಿ ಸಂಚರಿಸಿ ಚುಂಚನಗಿರಿಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 12 ರಂದು ಬೆಳಿಗ್ಗೆ ಚುಂಚನಗಿರಿಯಿಂದ ಬಿಂಡಿಗನವಿಲೆ- ಕಂಬದ ಹಳ್ಳಿ -ಸಂತೆ ಬಾಚನಹಳ್ಳಿ ಮಾರ್ಗವಾಗಿ ಸಂಚರಿಸಿ ಕೆ ಆರ್ ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 13 ರಂದು ಬೆಳಿಗ್ಗೆ ಕೆಆರ್ ಪೇಟೆಯಿಂದ ಮತ್ತಿಘಟ್ಟ -ವಿಠಲಾಪುರ -ಸೋಮನಹಳ್ಳಿ- ಪುರ ಅಂಬಿಗರ ಹಳ್ಳಿ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮ(ಆಗಮನ) ವಾಸ್ತವ್ಯ ಹೂಡಲಿದೆ.

ಮಹದೇಶ್ವರ ಜ್ಯೋತಿ ಯಾತ್ರೆಯ ಮೂರನೇ ವಾಹನ ಸಂಚರಿಸುವ ಮಾರ್ಗ

WhatsApp Image 2022 10 05 at 2.56.57 PM

ಅಕ್ಟೋಬರ್ 06 ರಂದು ಬೆಳಿಗ್ಗೆ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಜ್ಯೋತಿ ಯಾತ್ರೆ ಹನೂರು- ಕೊಳ್ಳೇಗಾಲ -ಮರಡಿಗುಡ್ಡ (ವಿಶೇಷ ಪೂಜೆ) ಬನ್ನೂರು- ಬೆಳವಾಡಿ -ಪಾಲಳ್ಳಿ ಬೆಳಗೋಳ- ಕೆ ಆರ್ ಎಸ್ ಕನ್ನಂಬಾಡಿ- ವೇಣುಗೋಪಾಲಸ್ವಾಮಿ ಡಿಂಕಾ ಬಲ್ಲೇನಹಳ್ಳಿ ಮಾರ್ಗವಾಗಿ ಸಂಚರಿಸಿ ಕಲ್ಲಹಳ್ಳಿ ಭೂ ವರಾಹನಾಥ ಸ್ವಾಮಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 07 ರಂದು ಬೆಳಿಗ್ಗೆ ಕಲ್ಲಹಳ್ಳಿ ಭೂ ವರಾಹನಾಥ ಸ್ವಾಮಿ ದೇವಸ್ಥಾನದಿಂದ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮಗಳು- ಭೂಕನಕೆರೆ ಗ್ರಾಮ ಪಂಚಾಯಿತಿ ಗ್ರಾಮಗಳು- ತೆಂಡೆಕೆರೆ -ಶೀಳನೆರೆ ಮಾರ್ಗವಾಗಿ ಸಂಚರಿಸಿ ಶೀಳನೆರೆಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 08 ರಂದು ಬೆಳಿಗ್ಗೆ ಶೀಳನೆರೆಯಿಂದ ಸಿಂಧಘಟ್ಟ- ಹರಳಹಳ್ಳಿ -ಚೌಡೇನಹಳ್ಳಿ -ಮಾಕಾವಳ್ಳಿ ಬಂಡಿಹೊಳೆ ಮಾರ್ಗವಾಗಿ ಸಂಚರಿಸಿ ಬಂಡಿ ಹೊಳೆಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 09 ರಂದು ಬಂಡಿಹೊಳೆಯಿಂದ ಹರಿಹರಪುರ- ಮಡುವಿನ ಕೋಡಿ -ಬಳ್ಳೇಕೆರೆ- ಐಚನಹಳ್ಳಿ ಮಾರ್ಗವಾಗಿ ಸಂಚರಿಸಿ ಗಂಜಿಗೆರೆಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 10 ರಂದು ಬೆಳಿಗ್ಗೆ ಗಂಜಿಗೆರೆ ಭಾರತಿಪುರ ಕ್ರಾಸ್ – ಅಘಲಯ- ಸಂತೆ ಬಾಚನಹಳ್ಳಿ -ರಂಗನಾಥಪುರ ಕ್ರಾಸ್ -ಸಾರಂಗಿ ಮಾರ್ಗವಾಗಿ ಸಂಚರಿಸಿ ಆಗ್ರಹಾರ ಬಾಚಹಳ್ಳಿ ದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 11 ರಂದು ಬೆಳಿಗ್ಗೆ ಆಗ್ರಹಾರ ಬಾಚಹಳ್ಳಿಯಿಂದ ಕಿಕ್ಕೇರಿ -ಲಕ್ಷ್ಮಿಪುರ- ಆನೆಗೋಳ- ಮಾದಾಪುರ -ದಬ್ಬೆಘಟ್ಟ ಮಾರ್ಗವಾಗಿ ಸಂಚರಿಸಿ ಐಕನಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 12 ರಂದು ಬೆಳಿಗ್ಗೆ ಹೈಕನಹಳ್ಳಿಯಿಂದ ಬೀರುವಳ್ಳಿ- ಹಿರಿಕಳಲೆ -ಮಂದಗೆರೆ ಮಾರ್ಗವಾಗಿ ಸಂಚರಿಸಿ ಕೆ ಆರ್ ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 13 ರಂದು ಬೆಳಿಗ್ಗೆ ಕೆ ಆರ್ ಪೇಟೆ ಟೌನ್ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮ(ಆಗಮನ) ವಾಸ್ತವ್ಯ ಹೂಡಲಿದೆ.

ಭಕ್ತಾಧಿಗಳು ಜ್ಯೋತಿ ಯಾತ್ರೆಯಲ್ಲಿ ಹಾಗೂ ಅಕ್ಟೋಬರ್ 14 ರಿಂದ 16 ರವರೆಗೆ ಕೆ.ಆರ್.ಪೇಟೆಯ ಅಂಬಿಗರಹಳ್ಳಿಯ ತ್ರಿವೇಣಿ ‌ಸಂಗಮದಲ್ಲಿ ನಡೆಯುವ ಕುಂಭಮೇಳದಲ್ಲಿ‌ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂಡ್ಯ ಜಿಲ್ಲಾಡಳಿತ ಕೋರಿದೆ.

Share This Article
Leave a comment