February 20, 2026

Newsnap Kannada

The World at your finger tips!

kuvempu1

Kuvempu Birthday Karnataka, jnanapeeta

ಕವಿಶೈಲಕೆ ಬಾ….

Spread the love

ಕವಿಶೈಲಕೆ ಬಾ
ರಸಿಕನೆ
ಕವಿಶೈಲಕೆ ಬಾ…

kavishail

ಗಿಳಿ ಕೋಕಿಲ
ಕಾಜಾಣದ ಗೂಡಿಗೆ
ಝುಳುಝಳು ಹರಿಯುವ
ಜಲಧಾರೆಯ ಬೀಡಿಗೆ
ಬಾಬಾ ರಸಿಕನೆ
ಕವಿಶೈಲಕೆ ಬಾ

ರಸ ಋಷಿ ಉಸಿರಲಿ
ಬೆರೆತಿಹ ಹಸುರಿಗೆ
ತರುಲತೆ ಹಾಸಿಹ
ತಂಪಿನ ಇಂಪಿಗೆ
ಬಾಬಾ ರಸಿಕನೆ
ಕವಿಶೈಲಕೆ ಬಾ

ಬಾನಲಿ ಹೊಳಪು
ನೆಲದಲು ಪುಳಕ
ರವಿಶಶಿ ನರ್ತನ
ಕಣ್ಣಿಗೆ ಸೊಗಸು
ಬಾಬಾ ರಸಿಕನೆ
ಕವಿಶೈಲಕೆ ಬಾ…

ಕವಿಶೈಲಕೆ ಬಾ
ರಸಿಕನೆ
ಕವಿಶೈಲಕೆ ಬಾ…

ಡಾ.ಶುಭಶ್ರೀ ಪ್ರಸಾದ್

error: Content is protected !!