ನವೆಂಬರ್ 1 ರಂದು ಸಂಜೆ 4 ಕ್ಕೆ ಪುನೀತ್ ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ – ಸಿಎಂ ಬೊಮ್ಮಾಯಿ

Team Newsnap
1 Min Read
ʼAppu lesson in Kannada text bookʼ..!; Puneeth's fans appeal to CM Bommai ʼಕನ್ನಡ ಪಠ್ಯ ಪುಸ್ತಕದಲ್ಲಿ ಅಪ್ಪು ಪಾಠʼ..!; ಸಿಎಂ ಬೊಮ್ಮಾಯಿಗೆ ಪುನೀತ್‌ ಅಭಿಮಾನಿಗಳ ಮನವಿ

ನವೆಂಬರ್ 1ರಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು.

ಪವರ್ ಸ್ಟಾರ್ ( Power Star ) ಪುನೀತ್ ರಾಜ್‌ಕುಮಾರ್ ( Puneeth Raj Kumar ) ಅಗಲಿ ಇದೇ ಅ 29 ಕ್ಕೆ ಒಂದು ವರ್ಷವಾಗಲಿದೆ. ಚಿತ್ರರಂಗಕ್ಕೆ ಪುನೀತ್ ನೀಡಿರುವ ಕೊಡುಗೆ, ಸಾಕಷ್ಟು ಜನರ ಸಂಕಷ್ಟಕ್ಕೆ ಸಾಥ್ ಕೊಟ್ಟ ಪುನೀತ್‌ಗೆ ಕರ್ನಾಟಕ ರತ್ನ ( Karnataka Ratna ) ಪ್ರಶಸ್ತಿ ಪ್ರದಾನದ ಕುರಿತಂತೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಸಿಎಂ ಬೊಮ್ಮಾಯಿ ( Bommai ) ಅವರು ಮಾತನಾಡಿದರು.ಆರ್ಥಿಕ ಅಭದ್ರತೆಗೆ ಹೆದರಿ ಬ್ರಿಟನ್ ಪ್ರಧಾನಿ ಲೀಜ್ ರಾಜೀನಾಮೆ

ಚಿತ್ರರಂಗದಲ್ಲಿ ಸಿನಿಮಾಗಳ ಮೂಲಕ ಹೈಪ್ ಕ್ರಿಯೇಟ್ ಮಾಡಿದ್ದ ಅಪ್ಪು ಬಳಿಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿದ್ದರು. ಅಪ್ಪು ಸಾಧನೆಯನ್ನ ಗಮನಿಸಿ, ಕರ್ನಾಟಕ ರತ್ನ ಪ್ರಶಸ್ತಿ ಕೊಡುವುದಾಗಿ ಈ ಹಿಂದೆಯೇ ಘೋಷಣೆ ಮಾಡಲಾಗಿತ್ತು.

ಈ ಸಭೆಯಲ್ಲಿ ರಾಜ್‌ಕುಮಾರ್ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.ವಿಧಾನಸೌಧದ ಮೆಟ್ಟಿಲುಗಳ ಮೇಲೆ ನವೆಂಬರ್ 1ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

2019ರ ನಂತರ ಯಾರಿಗೂ ಕೂಡ `ಕರ್ನಾಟಕ ರತ್ನ ಪ್ರಶಸ್ತಿ’ ಕೊಟ್ಟಿರಲಿಲ್ಲ. ಈಗ 8 ಜನರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಲಾಗಿದೆ. ಎಲ್ಲರ ಮನದಾಳದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಪುನೀತ್ ನಿಜವಾಗಿಯೂ ಕರ್ನಾಟಕ ರತ್ನವಾಗಿದ್ದಾರೆ. ಯುವಜನತೆಗೆ ಅಪ್ಪು ಸದಾ ಪ್ರೇರಣೆ ನೀಡುತ್ತಿದ್ದರು.

ನವೆಂಬರ್ 1ರ ಬಳಿಕ ಬೆಂಗಳೂರಿನಲ್ಲಿ ಮೂರು ಕಾರ್ಯಕ್ರಮ ಮಾಡಲಿದ್ದೇವೆ. 10 ದಿನಗಳ ಅಂತರದಲ್ಲಿ ಬೆಂಗಳೂರಿನ ಮೂರು ಭಾಗಗಳಲ್ಲಿ ಅಪ್ಪು ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಲಿದ್ದೇವೆ ಎಂದು ಇದೇ ವೇಳೆ ಸಿಎಂ ಬೊಮ್ಮಾಯಿಯವರು ಹೇಳಿದ್ದಾರೆ.

Share This Article
Leave a comment