ಮಂಡ್ಯ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ಕರ್ಮಕಾಂಡ – ದನದ ಕೊಟ್ಟಿಗೆ ಆದ ಹೆರಿಗೆ ವಾರ್ಡ್

Team Newsnap
2 Min Read
Siddu will not win in Kolar : Minister Sudhakarಸಿದ್ದು ಕೋಲಾರದಲ್ಲಿ ಗೆಲ್ಲುವುದಿಲ್ಲ - ಖೆಡ್ಡಾಗೆ ಬಿದ್ದಿದ್ದಾರೆ: ಸಚಿವ ಸುಧಾಕರ್‌

ಮಂಡ್ಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಕರ್ಮಕಾಂಡಗಳು ಬಗೆದಷ್ಟು ಸಿಗುತ್ತವೆ. ಈ ಮೊದಲು ಜಿಲ್ಲಾ ಆಸ್ಪತ್ರೆ ಆಗಿದ್ದಾಗ ಬಡ ಜನರಿಗೆ ಸಾಕಷ್ಟು ಸೌಲಭ್ಯಗಳು ಸಿಗುತ್ತಿದ್ದವು. ಆದರೆ ಈಗ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಈ ಆಸ್ಪತ್ರೆಗೆ ಸೇರಿದ ನಂತರ ಆದ್ವಾನ , ಅವ್ಯವಸ್ಥೆ ಹೆಚ್ಚಾಗಿದೆ.

ರಾಜ್ಯ ಸರ್ಕಾರ ಎಷ್ಟೇ ಅನುದಾನ ನೀಡಿದರೂ ಬಡ ಜನರಿಗೆ ಸೌಲಭ್ಯಗಳು ಮಾತ್ರ ಮರಿಚಿಕೆಯಾಗಿದೆ. ಲಕ್ಷ ಲಕ್ಷ ಸಂಬಳ ಪಡೆಯವ ಪ್ರಾಧ್ಯಾಪಕರು, ತಜ್ಙ ವೈದ್ಯರು ಮಾತ್ರ ಯಾವ ರೋಗಿಗಳನ್ನು ಮುಟ್ಟಿ , ಮಾತನಾಡಿಸಿ ಚಿಕಿತ್ಸೆ ಮಾಡಿದ ಉದಾಹರಣೆಯೇ ಇಲ್ಲ.

ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ ಸುಧಾಕರ್ ಪ್ರತಿ ಭಾಷಣದಲ್ಲಿ ಬಡಾಯಿ ಕೊಚ್ಚಿಕೊಳ್ಳತ್ತಾರೆ. ಒಂದು ದಿನವೂ ವೈದ್ಯಕೀಯ ಕಾಲೇಜ್ ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅವ್ಯವಸ್ಥೆ ಗಮನಿಸಿಲ್ಲ. ಡಂಗರು ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ. ಆ ದಿನ ಮಾತ್ರ ವೈದ್ಯರು , ಅಧಿಕಾರಿಗಳು ಆಸ್ಪತ್ರೆ ವ್ಯವಸ್ಥೆ ಸರಿ ಮಾಡುತ್ತಾರೆ. ದಾಖಲೆ , ಲೆಕ್ಕ ಪತ್ರ, ವರದಿಗಳು ಎಲ್ಲವನ್ನೂ ಸರಿಯಾದ ರೀತಿಯಲ್ಲಿ ವಿವರಿಸುತ್ತಾರೆ. ಮಂತ್ರಿಗಳು ಶಭಾಷ್ ಎನ್ನುತ್ತಾರೆ. ರೋಗಿಗಳ ಬವಣೆ, ಹತಾಶಯಗಳು ಮಾತ್ರ ಆಸ್ಪತ್ರೆಯ ನಾಲ್ಕು ಗೋಡೆಗಳ ನಡುವೆಯೇ ರೋಧನಕ್ಕೆ ಒಳಗಾಗುತ್ತವೆ.

ಮಂಡ್ಯ ವೈದ್ಯಕೀಯ ಆಸ್ಪತ್ರೆಯಲ್ಲಿರುವ ಹೆರಿಗೆ ವಾರ್ಡಿನ ದಿವ್ಯ ದರ್ಶನ ನ್ಯೂಸ್ ಸ್ನ್ಯಾಪ್ ಡಿಜಿಟಲ್ ಮಿಡಿಯಾಗೆ ವಿಡಿಯೋ ಮೂಲಕ ಲಭ್ಯವಾಗಿದೆ.

ಮಂಡ್ಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಹೆರಿಗೆ ವಾಡಿ೯ನ ಅವ್ಯವಸ್ಥೆ ಯನ್ನು ಕೇಳುವವರು ಯಾರೂ ಇಲ್ಲ. ಒಂದೇ ಬೆಡ್ ನಲ್ಲಿ ಮೂರರಿಂದ ನಾಲ್ಕು ಹೆರಿಗೆಗೆ ಬಂದ ರೋಗಿಗಳು ಹಸುಗೂಸಿನ ಜತೆಗೆ ಮಲಗುವ ದೃಶ್ಯ ಸಾಮಾನ್ಯವಾಗಿದೆ

.ಇಂದು ಭಾನುವಾರ ರಜಾ ದಿನವಾಗಿದ್ದರಿಂದ ಯಾವ ವೈದ್ಯರು ಕೂಡ ಈ ಕಡೆ ಮುಖ ಮಾಡಿಲ್ಲ.ಕೋವಿಡ್ ನಿಯಮ ಪಾಲನೆ ಇಲ್ಲ. ಈ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಜನಪ್ರತಿನಿಧಿಗಳಿಗoತೂ ಈ ಬಗ್ಗೆ ಗಮನವೇ ಇಲ್ಲ.ಹೆರಿಗೆ ವಾರ್ಡುಗಳು ಹೇಗಿರಬೇಕು ಎಂಬ ಕನಿಷ್ಠ ತಿಳುವಳಿಕೆ ಸಿಬ್ಬಂದಿಗಳಿಗೆ, ಆ ವಿಭಾಗದ ಮುಖ್ಯಸ್ಥರಿಗೆ ಇದ್ದಂತಿಲ್ಲ.

ಆರೋಗ್ಯ ಮತ್ತು ವೈದ್ಯಕೀಯ ಸಚಿವರು ಮಂಡ್ಯ ವೈದ್ಯಕೀಯ ಕಾಲೇಜಿನ ಬಗ್ಗೆ ಅತ್ಯಂತ ನಿರ್ಲಕ್ಷ್ಯ ವಹಿಸಿದ್ದಾರೆ. ಏಕೆಂದರೆ ಕಳೆದ ಎರಡು ವರ್ಷಗಳಿಂದ ಕಾಲೇಜು ಆಡಳಿತ ಮಂಡಳಿಯ ಸಭೆ ಹತ್ತಾರು ಬಾರಿ ನಡೆದರೂ, ಸಭೆಯ ನಡವಳಿಕೆಯ ವರದಿಗೆ ಸಹಿ ಹಾಕಲು ಪುರುಸೊತ್ತು ಇಲ್ಲ. ಹೀಗಾಗಿ ಸಭೆ ನಿರ್ಣಯಗಳನ್ನು ಆಡಳಿತ ಮಂಡಳಿಯ ಕಾರ್ಯದರ್ಶಿ ಅದೀಕೃತ ದಾಖಲೆ ಇಲ್ಲದೆ ಅನುಷ್ಠಾನ ಮಾಡಿದ್ದಾರಂತೆ.

ಎರಡು ವರ್ಷದಿಂದ ನಡೆಸಲಾದ ಆಡಳಿತ ಮಂಡಳಿ ಸಭಾ ನಡವಳಿಕೆ ಪ್ರತಿಗಳು ಬೇಕು ಎಂದು ಮಾಹಿತಿ ಹಕ್ಕಿನಲ್ಲಿ ಅಜಿ೯ ಹಾಕಿದರೆ, ಯಾವುದೂ ಇಲ್ಲ.ಸರ್ಕಾರದಿಂದ ಬಂದಿಲ್ಲ ಎಂದು ಆಡಳಿತಾಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡಿ ನುಣುಚಿಕೊಳ್ಳುತ್ತಾರೆ

ಕೆದಕುತ್ತಾ. ಹೋದರೆ ಇಂತಹ ಇನ್ನೂ ಅನೇಕ ಸಂಗತಿಗಳು ಬಯಲಿಗೆ ಬರುತ್ತವೆ. ವೈದ್ಯಕೀಯ ಶಿಕ್ಷಣ ಸಚಿವರು ಸರ್ಕಾರದ ಮರ್ಯಾದೆ ಸಾರ್ವಜನಿಕವಾಗಿ ಹರಾಜು ಆಗುವ ಮುನ್ನವೇ ಕಠಿಣ ಕ್ರಮ ಕೈಗೊಂಡು ಈ ಮಂಡ್ಯ ವೈದ್ಯಕೀಯ ಆಸ್ಪತ್ರೆಗೆ ಅಗತ್ಯ ಚಿಕಿತ್ಸೆ ನೀಡುವ ಮನಸ್ಸು ಮಾಡುತ್ತಾರೆಯೇ ಕಾದು ನೋಡೋಣ.

Share This Article
Leave a comment