ಕನ್ನಡ ಎಂಬುದು ಮೂರಕ್ಷರವು ಆದರೆ ನಿರಂತರ ಸುಭಿಕ್ಷೆಯು

Team Newsnap
2 Min Read

ನಮ್ಮ ಭಾಷೆ ಕನ್ನಡ ಕನ್ನಡ ಅಂದರೆ ಏನು ಎಂಬ ಪ್ರಶ್ನೆ ಹಾಕಿದಾಗ ಅದಕ್ಕೆ ಸಾವಿರಾರು ಪದಗಳಲ್ಲಿ ಸಾವಿರಾರು ಭಾವನೆಗಳೊಂದಿಗೆ ಸಾವಿರಾರು ಕನ್ನಡಿಗನಿಂದ ಉತ್ತರ ಸಿಗುವುದು ನಮ್ಮ ಕರುನಾಡಿನಲ್ಲಿ ಮಾತ್ರ. ಕನ್ನಡ ಎಂಬ 3 ಅಕ್ಷರದಲ್ಲಿ ಎಣಿಸಲಾಗದ ಅದ್ಭುತ ವಿಚಾರಧಾರೆ ಅಡಕವಾಗಿದೆ ಕರುನಾಡಿನ ಕನ್ನಡಿಗನಾಗಿ ಕನ್ನಡಾಂಬೆಯ ನಲ್ಮೆಯ ಮಕ್ಕಳಾಗಿ ಕನ್ನಡ ಡಿಂಡಿಮವ ಸಾರುವ ಭಾಗ್ಯ ಕೇವಲ ಕನ್ನಡಿಗರಾಗಿ.

ನವೆಂಬರ್ ಒಂದು ನಮ್ಮ ರಾಜ್ಯ ಕರ್ನಾಟಕ ಎಂದು ಘೋಷಣೆ ಮಾಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಸಾವಿರಾರು ಜನರ ಶ್ರಮ ಮುಖ್ಯವಾಗಿ ದೇಶಭಕ್ತಿ ಸಾಕ್ಷಿಯಾಗಿದ್ದು ಜೊತೆಗೆ ಶಿವರಾಮ ಕಾರಂತರವರ ಜಯದೇವಿತಾಯಿ ಲಿಗಾಡೆ ಆಲೂರು ವೆಂಕಟರಾಯರು ದೇವರಾಜ ಅರಸುರವರು ಚನ್ನಬಸಪ್ಪನವರು ಶ್ರೀಕಂಠಯ್ಯನವರು ಕುವೆಂಪುರವರ ಗೋವಿಂದ ಪೈರವರು ಬೆನಗಲ್ ರಾಮ್ ರವರು ಎಚ್ಪಿ‌‌ ನಂಜುಂಡಯ್ಯನವರು ಇನ್ನು ಹಲವಾರು ಮಹನೀಯರ ಆಶೀರ್ವಾದ ಹಾಗೂ ಸಂಕಲ್ಪ ಕರ್ನಾಟಕ ಏಕೀಕರಣಕ್ಕೆ ಸಾಕ್ಷಿಯಾಗಿದೆ.

ಇದಲ್ಲದೆ ಕುವೆಂಪುರವರ ಜೈ ಭಾರತ ಜನನಿಯ ತನುಜಾತೆ ಗೋವಿಂದಪೈರವರ ತಾಯಿ ಬಾರೆ ಮೊಗವ ತೊರೆ ಬಿ ಎಂ ಶ್ರೀಕಂಠಯ್ಯನವರ ಆರಿಸಿ ಆರಿಸಿ ನಾರಾಯಣರವರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಶಾಂತ ಕವಿಯ ರಕ್ಷಿಸು ದೇವಿ ಕನ್ನಡ ರಕ್ಷಿಸಿ ಎಂಬ ಗೀತೆಗಳು ಕರ್ನಾಟಕ ಒಗ್ಗೂಡಿವಿಕೆಯ ಮೇಲೆ ಪ್ರಭಾವವನ್ನು ಬೀರಿದೆ.

ಇದರ ಜೊತೆಗೆ ಕರ್ಮವೀರ ಸಂಯುಕ್ತ ಕರ್ನಾಟಕ ನವಭಾರತ ಕರ್ನಾಟಕ ವೃತ್ತ ವೀರಕೇಸರಿ ಪ್ರಬುದ್ಧ ಭಾರತ ಎಂಬ ಪ್ರಮುಖ ಪತ್ರಿಕೆಗಳು ಸಹ ಏಕೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಅಲ್ಲದೆ ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿ ಸಾಹಿತ್ಯ ಸಂಗೀತ ಕಲೆ ನೃತ್ಯ ಶಿಕ್ಷಣ ವೈಭವ ಮುಂತಾದವುಗಳು ನಮ್ಮ ರಾಜ್ಯ ಏಕೀಕರಣ ನಮ್ಮ ಹೆಮ್ಮೆ ಕರುನಾಡು ಎನಿಸಿಕೊಳ್ಳುವುದರಲ್ಲಿ ಸಾಕ್ಷಿಯಾಗಿದೆ.

ಅಂದಿನಿಂದ ಇಂದಿನವರೆಗೂ ಕನ್ನಡಾಂಬೆಯ ಆಶೀರ್ವಾದದಿಂದ ಹಾಗೂ ಕನ್ನಡದ ಮೇಲಿನ ಅಭಿಮಾನದಿಂದ ಕನ್ನಡವನ್ನು ಉಳಿಸಿ ಬೆಳೆಸಿ ಪೋಷಿಸಿ ಕನ್ನಡ ರಾಜ್ಯೋತ್ಸವವನ್ನು ಇಂದಿಗೂ ಆಚರಿಸಿಕೊಂಡು ಬಂದಿದ್ದೇವೆ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ.

ಇದಕ್ಕೆ ಸುಂದರ ಸಾಕ್ಷಿಯೆಂಬಂತೆ ನಮ್ಮ ಜಿಲ್ಲೆಗಳನ್ನ ಸಕ್ಕರೆಯನಾಡು ಮಂಡ್ಯ ಮಲ್ಲಿಗೆಯ ನಗರಿ ಮೈಸೂರು ಉದ್ಯಾನನಗರಿ ಬೆಂಗಳೂರು ಕಲ್ಪತರು ನಾಡು ತುಮಕೂರು ರೇಷ್ಮೆ ನಾಡು ರಾಮನಗರ ಚಿನ್ನದ ನಾಡು ಕೋಲಾರ ಬಿಸಿಲ ನಾಡು ಬಳ್ಳ್ಳಾರಿ ಕುಂದಾನಗರಿ ಬೆಳಗಾವಿ ಬೆಣ್ಣೆ ನಗರಿ ದಾವಣಗೆರೆ ದುರ್ಗದ ನಾಡು ಚಿತ್ರದುರ್ಗ ಬಂದರು ನಗರಿ ಮಂಗಳೂರು ಕೃಷ್ಣನಗರ ಉಡುಪಿ ಕಾಫಿನಾಡು ಚಿಕ್ಕಮಗಳೂರು ಹಲವಾರು ಸುಂದರ ಹೆಸರಿನೊಂದಿಗೆ ಪ್ರವಾಸಿ ತಾಣವಾಗಿರುವ ಹೆಮ್ಮೆಯ ಕನ್ನಡಿಗರು ನಾವು.

ಇಂದಿನ ಇತಿಹಾಸದಿಂದಲೂ ಕನ್ನಡ ಅಭಿಮಾನವನ್ನು ಹಲವಾರು ವಿಚಾರಧಾರೆಗಳನ್ನು ಅಂತ ಬಂದಿರುವ ಕನ್ನಡ ಎಂಬ ಮೂರು ಅಕ್ಷರವು ನಮಗೆ ಇಂದಿಗೂ ಸಹ ಕನ್ನಡವನ್ನು ಉಳಿಸಿ ಬೆಳೆಸಿ ಘೋಷಿಸುವುದಕ್ಕೆ ಸ್ಪೂರ್ತಿಯಾಗಿ ನಿರಂತರತೆಯ ಸುಭಿಕ್ಷವಾಗಿ ಇರುವುದು ನಮಗೆ ಸಂತಸದ ವಿಷಯ ಎಂದೆಂದಿಗೂ ಕರುನಾಡ ಬೇಕು ಎನ್ನುವುದು ನನ್ನ ಆಶಯ.


sathya
ಸತ್ಯಶ್ರೀ ನಾಗರಾಜ್

Share This Article
Leave a comment