ಕರುನಾಡ ಜಿಲ್ಲೆಗಳ ಕಿರು ಪರಿಚಯ -21- ಹಾಸನ

Team Newsnap
1 Min Read

ಕಲಾವತಿ ಪ್ರಕಾಶ್
ಬೆಂಗಳೂರು

ಚನ್ನಕೃಷ್ಣಪ್ಪ ನಾಯಕ ೧೧ನೆ ಶತಮಾನದಲ್ಲಿ ಸ್ಥಾಪಿಸಿದ
ಸಿಂಹಾಸನಪುರದ ಸಂಕ್ಷಿಪ್ತ ರೂಪ ಹಾಸನ ಹೆಸರಾಗಿದೆ
ಹಾಸನಾಂಬೆ ದೇವಿಯ ಹೆಸರು ಎಂಬ ಪ್ರತೀತಿ ಇದೆ
ಇದು ವೀರ ಅರ್ಜುನನ ಮೊಮ್ಮಗನಿಗೆ ಸಂಬಂಧಿಸಿದೆ

ಹೊಯ್ಸಳ ಮೌರ್ಯ ಗಂಗ ಚಾಲುಕ್ಯ ರಾಷ್ಟರಕೂಟರು
ಚೋಳರು ವಿಜಯನಗರ ಮೈಸೂರರಸರು ಆಳಿದರು
ಹಾಸನ ಜಿಲ್ಲೆ ಹೊಯ್ಸಳ ವಾಸ್ತು ಶಿಲ್ಪಕೆಗಳ ನಾಡಾಗಿದೆ
ಮಲೆನಾಡ ಹೆಬ್ಬಾಗಿಲು ಬಡವರ ಊಟಿಯೆ ಇದಾಗಿದೆ

ಹಾಸನದೆಲ್ಲೆಡೆ ೮೦೦ ಕ್ಕೂ ಹೆಚ್ಚು ಶಾಸನ ದೊರೆತಿವೆ
ಮರಾಠಿ ಕನ್ನಡ ಸಂಸ್ಕೃತ ತಮಿಳು ಮಾರವಾಡಿ
ಮಹಾಜನಿಯಂತಹ ಭಾಷೆಗಳಲ್ಲಿದ್ದು ಕರ್ನಾಟಕದ
ಇತಿಹಾಸ ತಿಳಿಯಲು ಬಹಳ ಸಹಕಾರಿಯಾಗಿವೆ

ಹಾಸನ ಅರಸೀಕೆರೆ ಅರಕಲಗೂಡು ಬೇಲೂರು
ಚನ್ನರಾಯಪಟ್ಟಣ ಹೊಳೇನರಸೀಪುರ ಸಕಲೇಶಪುರ
ಶಾಂತಿಗ್ರಾಮ ಕೋಣನೂರು ಆಲೂರು ತಾಲ್ಲೂಕುಗಳು
ಕಾಫಿ ಮೆಣಸು ಆಲೂಗಡ್ಡೆ ಭತ್ತ ಕಬ್ಬು ಇಲ್ಲಿನ ಬೆಳೆಗಳು

ಆಲೂರಿನ ವಾಟೆಹೊಳೆ ಬೇಲೂರಿನ ಯಗಚಿ
ಗೊರೂರು ಅಣೆಕಟ್ಟು ಇಲ್ಲಿನ ಜಲಾಶಯಗಳು
ಹಾಸನದ ಹವಾಗುಣ ಬೆಚ್ಚನೆಯ ಮುಂಜಾನೆ
ತಂಪಾದ ಕೊರೆಯುವ ಚಳಿಯ ಸಂಜೆಗಳು

ಬೇಲೂರು ಹಳೇಬೀಡು ಶ್ರವಣಬೆಳಗೊಳ ಜೈನಮಠ
ಪಾರ್ವತಮ್ಮ ಬೆಟ್ಟ ಹುಲಿಕೆರೆ ಕೊಳ ಬಿಸಿಲೆಘಾಟ್
ಈಶ್ವರ ದೇವಸ್ಥಾನ ಲಕ್ಷ್ಮಿದೇವಿ ಗುಡಿ ಕೇದಾರೇಶ್ವರ
ಶೆಟ್ಟಿಹಳ್ಳಿ ಚರ್ಚ್ ಗಳು ಪ್ರಸಿದ್ಧ ಪ್ರವಾಸಿ ತಾಣಗಳು

ಬೇಲೂರ ಚನ್ನಕೇಶವ ಹಳೆಬೀಡ ಹೊಯ್ಸಳೇಶ್ವರ
ಶ್ರವಣಬೆಳಗೊಳದ ಗೊಮ್ಮಟೇಶ್ವರ ಶಿಲ್ಪ ಕಲೆ ಹೊಯ್ಸಳ ವಾಸ್ತಶಿಲ್ಪದ ಬೀಡು ಬಳಪದ ಕಲ್ಲಿನದು
ಪ್ರಪಂಚದಲ್ಲೇ ಪ್ರಸಿದ್ಧ ಕಲೆಯ ಕೆತ್ತನೆ ಇಲ್ಲಿಹುದು

ಷಟ್ಪದಿ ಬ್ರಹ್ಮ ರಾಘವಾಂಕ ರಗಳೆಯ ಕವಿ ಹರಿಹರ
ನೇಮಿಚಂದ್ರರು ಬೆಲೂರ ಕೇಶವದಾಸರು ಹಾಗೂ
ಜಾನಪದ ಜಂಗಮ ಎಸ್ ಕೆ ಕರೀಂಖಾನ್ ಕವಿಗಳು
ಕುಮಾರ ಗಂದರ್ವ ಎಸ್ ವಿ ರಂಗಣ್ಣ ಶಾಂತರಸರು

Share This Article
Leave a comment