January 27, 2026

Newsnap Kannada

The World at your finger tips!

deepa1

ಶರಣು ಸದ್ಗುರು ನಿನಗೆ..!

Spread the love
b137fc72 8513 42fd 939e b942eb12c9f1
ಜಯಕವಿ, ಮೈಸೂರು

ಶರಣು ಸದ್ಗುರು ನಿನಗೆ
ಶರಣು ಶರಣಾರ್ಥಿ..!
ಹೊತ್ತಿಸೆನ್ನೆದೆಯೊಳಗೆ
ಪ್ರಜ್ಞೆಯ ಪ್ರಣತಿ..

ಸುತ್ತ ಮುತ್ತಿಹುದೆನಗೆ
ಕಾರಿರುಳು ಕಾಡು..!
ಹುಡುಕಬೇಕಿದೆ ನನಗೆ
ನಾನೆ ಹೊಸ ಜಾಡು..!
ನನ್ನ ಪಯಣಕೆ ನನದೆ
ಬೆಳಕಿರಲಿ ಸತತ..!
ಬೆಳಕೂರ ಗುರಿ ಬಿಡದೆ
ಸಾಗಲನವರತ..!

ಹಾವು ಏಣಿಯ ಆಟ
ಈ ಬದುಕ ತಿಳಿಸು..!
ಹಾವಿಗೆಟುಕದೆ ಏಣಿ
ಏರುವುದ ಕಲಿಸು..!
ಹೊಳೆಸೆನಗೆ ಈ ಪಾಡ
ಹಾಡುಗೊಳಿಸುವುದ..!
ಜಗಕೆ ಮಾಡದೆ ಕೇಡ
ನಗುತ ನಡೆಯುವುದ..!

error: Content is protected !!