ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರರಾಗಿ ಭಾರತೀಯ ಮೂಲದ ಶಾಂತಿ ಸೇಠಿ ನೇಮಕ

Team Newsnap
1 Min Read

ಭಾರತೀಯ ಮೂಲದ ಅಮೆರಿಕ ನೌಕಾಪಡೆಯ ಅಧಿಕಾರಿ ಶಾಂತಿ ಸೇಠಿ ಅವರನ್ನು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ರಕ್ಷಣಾ ಸಲಹಾಗಾರ್ತಿಯನ್ನಾಗಿ ನೇಮಕ ಮಾಡಲಾಗಿದೆ.

ಶಾಂತಿ ಅವರು ಭಾರತ ಮೂಲದ ಮೊದಲ ಮಹಿಳಾ ಅಮೆರಿಕ ಕಮಾಂಡರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶಾಂತಿ 2010ರಿಂದ 2012ರವರೆಗೆ ಕ್ಷಿಪಣಿ ವಿದ್ವಂಸಕ ಮಾರ್ಗದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಶಾಂತಿ ಭಾರತೀಯ ಮೂಲದ ಅಮೆರಿಕ ನೌಕೆಯ ಮೊದಲ ಮಹಿಳಾ ಕಮಾಂಡರ್ ಕೂಡ ಆಗಿದ್ದರು.

1993ರಲ್ಲಿ ನೌಕಾಪಡೆಗೆ ಸೇರಿದಾಗ, ಯುದ್ಧದ ಹೊರಗಿಡುವ ಕಾನೂನು ಇನ್ನೂ ಜಾರಿಯಲ್ಲಿತ್ತು. ನಂತರದಲ್ಲಿ ಆ ಕಾಯಿದೆಯನ್ನು ತೆಗೆದುಹಾಕಲಾಯಿತು.

1960ರಲ್ಲಿ ಶಾಂತಿ ಅವರ ತಂದೆ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲೇ ನೆಲಸಿದ್ದಾರೆ.

Share This Article
Leave a comment