ತೀವ್ರವಾಗಿ ಅಸ್ವಸ್ಥರಾಗಿದ್ದ ನಟ ಶಿವ ರಾಜ್ ಕುಮಾರ್ ರೋಟಿನ್ ಚೆಕ್ ಅಪ್ ನಂತರ ಮಾಮೂಲಿಯಂತೆ ತಮ್ಮ ಆರೋಗ್ಯ ಸಹಜವಾಗಿದೆ ಇದೆ ಎಂದು ಶಿವಣ್ಣ ಹೇಳಿದ್ದಾರೆ.
ವೇದಾ ಶೂಟಿಂಗ್ ವೇಳೆ ನಟ ಶಿವರಾಜ್ ಕುಮಾರ್ ಜ್ವರದಿಂದ ಬಳಲುತ್ತಿದ್ದು ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು.
ಈ ಕುರಿತಂತೆ ವೇದಾ ಸಿನಿಮಾ ನಿರ್ದೇಶಕ ಹರ್ಷಾ ಮಾತನಾಡಿ, ‘ನಾನು ಈಗ ತಾನೆ ಶಿವಣ್ಣ ಅವರ ಜತೆ ಮಾತನಾಡಿದ್ದೇನೆ. ಅವರು ಆರೋಗ್ಯವಾಗಿಯೇ ಇದ್ದಾರೆ. ಅವರು ಆಗಾಗ್ಗೆ ಜನರಲ್ ಚೆಕಪ್ ಮಾಡಿಸುತ್ತಾರೆ. ಈ ಬಾರಿಯೂ ಆಸ್ಪತ್ರೆಗೆ ಹೋಗಿದ್ದು ಜನರಲ್ ಚೆಕಪ್ ಮಾಡಿಸಿಕೊಳ್ಳಲು ಅಷ್ಟೆ. ಉಳಿದಂತೆ ಏನೂ ಇಲ್ಲ’ ಎಂದಿದ್ದಾರೆ.
ಬಿಪಿ ಮತ್ತು ಇಸಿಜಿ ಈಗ ನಾರ್ಮಲ್ ಆಗಿದೆ. ಬೈರಾಗಿ ಚಿತ್ರದ ಡಬ್ಬಿಂಗ್ ಅನ್ನು ಎರಡು ನಿಂತುಕೊಂಡೇ ಮಾಡಿದ್ದು ಹಾಗೂ ಮೈಸೂರು ಬೆಂಗಳೂರು ನಡುವೆ ಓಡಾಟ ಹೆಚ್ಚಾಗಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ಮನುಷ್ಯ ಎಂದಾಗ ಇಂತಹ ವ್ಯತ್ಯಾಸಗಳು ಆಗುತ್ತವೆ. ಈಗ ನಾನು ಫೈನ್ ಆಗಿದ್ದೇನೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
- ವೈದ್ಯರ ನಿರ್ಲಕ್ಷ್ಯ : 19 ದಿನದ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ ಸಾವು
- ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ – ಬೀದರ್ ನ ಒಂದೇ ಕುಟುಂಬದ 7 ಜನ ದುರಂತ ಸಾವು
- IPL ಪಂದ್ಯದ ಸಮಾರೋಪದಲ್ಲಿ ಮಂಡ್ಯ – ಶಿವಮೊಗ್ಗ ಕಲಾವಿದರಿಂದ ಪೂಜಾ ಕುಣಿತ, ಡೊಳ್ಳು ಕುಣಿತ
- ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ಕಣ್ಮರೆ
- ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್
More Stories
ಕರ್ನಾಟಕ ಫಿಲ್ಮ್ ಚೇಂಬರ್ ಗೆ ಭಾ.ಮಾ.ಹರೀಶ್ ಅಧ್ಯಕ್ಷರಾಗಿ ಆಯ್ಕೆ
‘ರಕ್ಕಮ್ಮ’ಗಾಗಿ ರೀಲ್ಸ್ ಮಾಡಿದ ಕಿಚ್ಚ ಸುದೀಪ್ : ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್ ವಿಡಿಯೋ
ಡ್ರಗ್ಸ್ ಕೇಸ್ ಪ್ರಕರಣ – ಸಾಕ್ಷ್ಯಾಧಾರ ಕೊರತೆ : ಶಾರೂಖ್ ಪುತ್ರ ಆರ್ಯನ್ ಸೇರಿ 6 ಮಂದಿಗೆ ಕ್ಲೀನ್ ಚಿಟ್