ಕೆಆರ್ ಪೇಟೆ ಪಟ್ಟಣದಲ್ಲಿ ಈಶ್ವರ ದೇವಾಲಯದಲ್ಲಿ ಕಳೆದ ಸೋಮವಾರ ಸಂಭವಿಸಿದ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ ಹಿನ್ನಲೆಯಲ್ಲಿ ದೇವಸ್ಥಾನದ ಶುದ್ದೀಕರಣ ಮತ್ತು ಪ್ರಾಯಶ್ಚಿತ್ತದ ಹೋಮಗಳು ಮಂಗಳವಾರ ರಾತ್ರಿ ಜರುಗಿವೆ.
ಈ ಬಗ್ಗೆಮಾಹಿತಿ ನೀಡಿರುವ ವೇ.ಬ್ರ.ಗೋಪಾಲಕೃಷ್ಣ ಅವದಾನಿ ಮಂಗಳವಾರ ರಾತ್ರಿ ದೇವಸ್ಥಾನದ ಆವರಣದಲ್ಕಿ ಕೂಷ್ಮಾಂಡಾದಿ ಪ್ರಾಯಶ್ಚಿತ್ತ ಹೋಮಗಳು, ಮೃತ್ಯು ಆಕರ್ಷಣ ಹೋಮಗಳನ್ನು ಮಾಡಿ ಮೃತ್ಯು ದೇವರನ್ನು ಮೃತ್ಯುಪಂಚಕ ದ್ರವ್ಯದಲ್ಲಿ ಆಕರ್ಷಣೆಯನ್ನು ಮಾಡಿ ಅನ್ಯ ಸ್ಥಳದಲ್ಲಿ ವಿಸರ್ಜನೆ ಮಾಡಿ, ದಿಗ್ಬಂಧನ ಮಾಡಲಾಗಿದೆ. ಇದನ್ನು ಓದಿ –ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ
ನಂತರ ದುಷ್ಟ ಶಕ್ತಿ ಉಚ್ಛಾಟನೆಯಾಗಿ ರಾಕ್ಷೋಘ್ನ, ಅಘೋರಾಸ್ತ್ರ, ಪಾಶುಪತಾಸ್ತ್ರ ಹೋಮಗಳನ್ನು ಮಾಡಿ ದಿಕ್ಪಾಲಕ ಬಲಿ,ರಾಕ್ಷೋಜ್ಞ, ಅಘೋರಾಸ್ತ್ರ, ಪಾಶುಪತಾಸ್ತ್ರ ಬಲಿಯನ್ನು ಅರ್ಚಕರ ಸಮ್ನುಖದಲ್ಲಿ ನೆರವೇರಿಸಲಾಗಿದೆ.ತಿಲ ಹೋಮ ಗ್ರಹಯಜ್ಞ , ವಾಸ್ತುಹೋಮ ಕ್ಷೇತ್ರ ಪಾಲಕ ಹೋಮ , ಪವಮಾನ ಹೋಮಗಳನ್ನು ನೆರವೇರಿಸಲಾಗುವುದು
ಇಂದು ( ಬುಧವಾರ)ಘಟನೆ ಸಂಭವಿಸಿದ ಸ್ಥಳದ ಮಣ್ಣನ್ನು ತೆಗೆದು ಬೇರೆ ಮಣ್ಣನ್ನು ತುಂಬಿ ಬಲಿಪೀಠ ವಿಸರ್ಜನೆ ಮಾಡಿದ ನಂತರ ನೂತನ ಬಲಿಪೀಠ ಸ್ಥಾಪನೆ ಮಾಡಲಾಗುವದು ಸಂಜೆ ಮೂಲ ದೇವರ ಸಂಪ್ರೋಕ್ಷಣಾ ಕಾರ್ಯಕ್ರಮ ಪ್ರಾರಂಭವಾಗುತ್ತದೆ.
ಗುರುವಾರ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪುನರ್ ಪ್ರತಿಷ್ಠಾಪನೆ, ಹೋಮ , ಕಲಾನ್ಯಾಸ ಪ್ರಧಾನಹೋಮ ನಡೆಸಿ ಪೂರ್ಣಾಹುತಿ ನೆರವೇರಿಸಿದ ನಂತರ ದಿನನಿತ್ಯ ಪೂಜೆ ಆರಂಭವಾಗಲಿದೆ.ದೇವಾಲಯದ ಅರ್ಚಕರಾದ ಮಾಲತೇಶ್ ಭಟ್ಟ,ರೋಹಿತ್ ಶರ್ಮ ಸೇರಿದಂತೆ ವೈದಿಕರ ತಂಡ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದೆ.
- ಶಿವಮೊಗ್ಗದಲ್ಲಿ ಕೋಮು ಗಲಭೆ : ಈದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಹಲವರಿಗೆ ಗಾಯ : 35 ಜನ ಪೊಲೀಸ್ ವಶಕ್ಕೆ
- ಜೀವ ರಕ್ಷಕ CPR -ಪಠ್ಯಕ್ಕೆ ಸೇರಿಸಲು ಚಿಂತನೆ
- ನಟ ನಾಗಭೂಷಣ ಕಾರು ಬೆಂಗಳೂರಿನಲ್ಲಿ ಅಪಘಾತ- ಮಹಿಳೆ ಸಾವು
- ಹೆಚ್ ಡಿ ಕೋಟೆ ಬಳಿ : ನಾಲೆಗೆ ಬಿದ್ದ ಪುತ್ರಿ ರಕ್ಷಣೆಗೆ ಹೋದ ಅಪ್ಪ – ಅಮ್ಮನೂ ದುರಂತ ಸಾವು
- ಅಂತರರಾಷ್ಟ್ರೀಯ ಕಾಫಿ ದಿನ | International Coffee Day 2023
- ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮರುಪರಿಶೀಲನಾ ಅರ್ಜಿ: ಸಿದ್ದರಾಮಯ್ಯ