ಚಾಮುಂಡಿ ಬೆಟ್ಟದಲ್ಲಿ ಮತ್ತೆ ಕುಸಿತ ಭೀತಿ: ದುರಸ್ತಿ ಕಾಮಗಾರಿ ಇನ್ನೂ ಪ್ರಾರಂಭ ಇಲ್ಲ

Team Newsnap
1 Min Read

ಕಳೆದ ಬಾರಿ ಮುಂಗಾರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಚಾಮುಂಡಿಬೆಟ್ಟದ ನಂದಿ ರಸ್ತೆ ಕುಸಿದಿತ್ತು. ಇದರ ದುರಸ್ತಿ ಕಾರ್ಯ ಈವರೆಗೂ ಆರಂಭವಾಗಿಲ್ಲ. ಈಗಾಗಲೇ ಮುಂಗಾರು ರಾಜ್ಯ ಪ್ರವೇಶಿಸಿದೆ. ಹೀಗಾಗಿ ಕುಸಿತ ಉಂಟಾದ ರಸ್ತೆ ಭಾಗ ಮತ್ತಷ್ಟು ಹಾನಿಗೀಡಾಗುವ ಆತಂಕ ಎದುರಾಗಿದೆ.

ಮಳೆಗಾಲ ಆರಂಭವಾಗಿರುವುದರಿಂದ ಭೂ ಕುಸಿತ ಉಂಟಾದ ಜಾಗದಲ್ಲಿ ಮತ್ತೆ ಭೂಮಿ ಬಿರುಕು ಬಿಟ್ಟು ಮಣ್ಣಿನ ಕುಸಿತವಾಗಬಹುದು. ಇದರಿಂದ ರಸ್ತೆ ದುರಸ್ತಿ ಮತ್ತಷ್ಟು ಜಟಿಲವಾಗುವ ಆತಂಕ ಎದುರಾಗಿದೆ.ಇದನ್ನು ಓದಿಕೆ ಆರ್ ಪೇಟೆ ಈಶ್ವರನ ದೇವಸ್ಥಾನದಲ್ಲಿ ಶುದ್ದೀಕರಣ ಆರಂಭ – ನಾಳೆ ಪುನರ್ ಪ್ರತಿಷ್ಠಾಪನೆ

ಮತ್ತಷ್ಟು ಬಿರುಕು

ಕುಸಿತಗೊಂಡಿರುವ ರಸ್ತೆ ಸಮೀಪ ಮತ್ತಷ್ಟು ಕಡೆ ಬಿರುಕು ಕಾಣಿಸಿಕೊಂಡಿದೆ. ಈಗಾಗಲೇ ಎರಡು ಕಡೆ ಭಾರಿ ಪ್ರಮಾಣದ ಭೂ ಕುಸಿತವಾಗಿದೆ.

chamundihill profile

ಕುಸಿತಗೊಂಡಿರುವ ಜಾಗದಲ್ಲಿ ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳದ ಪರಿಣಾಮ ಭಾರಿ ಪ್ರಮಾಣದ ಮಣ್ಣು ಸವೆಯುತ್ತಿದೆ. ಇದರ ಜತೆಗೆ ಕುಸಿದ ಭಾಗದ ಸಮೀಪ ಎರಡು-ಮೂರು ಕಡೆ 50 ಮೀಟರ್‌ಗಳಷ್ಟು ಬಿರುಕು ಬಿಟ್ಟಿದೆ. ಇದು ಈ ಬಾರಿ ಸುರಿಯುವ ಮಳೆಯಲ್ಲಿ ಕುಸಿಯುವ ಎಲ್ಲಾ ಸಾಧ್ಯತೆ ಇದೆ, ಹೀಗಾಗಿ ಬೆಟ್ಟಕ್ಕೆ ಮತ್ತಷ್ಟು ಘಾಸಿಯಾಗುವ ಮುನ್ನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.

Share This Article
Leave a comment