ಜೂನ್ 30 ಮೈಷುಗರ್ ನಲ್ಲಿ ಕಬ್ಬು ಅರೆಯವ ಕಾರ್ಯ ಆರಂಭ – ಎಂಡಿ

Team Newsnap
1 Min Read
June 30 Sugarcane cultivation begins in Mysugar - MD ಜೂನ್ 30 ಮೈಷುಗರ್ ನಲ್ಲಿ ಕಬ್ಬು ಅರೆಯವ ಕಾರ್ಯ ಆರಂಭ - ಎಂಡಿ #BREAKINGNEWS

ಮಂಡ್ಯ : ಜೂನ್ 30 ರಿಂದ ಮಂಡ್ಯದ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯವನ್ನು ಆರಂಭಿಸಲಾಗುವುದು ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಪಾಟೀಲ್ ಅಪ್ಪ ಸಾಹೇಬ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಾಹೇಬ್ ಅವರು ಮೈಶುಗರ್ ಕಾರ್ಖಾನೆಯ ಯಂತ್ರಗಳ ದುರಸ್ತಿ ಕಾರ್ಯವು ಪೂರ್ಣಗೊಂಡಿದೆ ಹೀಗಾಗಿ ನಿರಂತರ ಕಬ್ಬು ಅರೆಯುವಿಕೆಗೆ ಸಿದ್ದತೆ ಮಾಡಲಾಗಿದೆ ಎಂದು ಹೇಳಿದರು.

ಕಬ್ಬು ಕಟಾವು ಹಾಗೂ ಅಗತ್ಯವಾಗಿರುವ ಕಾರ್ಮಿಕರ ವ್ಯವಸ್ಥೆಯನ್ನೂ ಕೂಡ ಕಂಪನಿಯೇ ವ್ಯವಸ್ಥೆ ಮಾಡಲಿದೆ. ಅಲ್ಲದೇ ರೈತರು ಕಬ್ಬು ಕಟಾವು ಮಾಡಿದ 24 ಗಂಟೆಯೊಳಗೆ ಅರೆಯುವಿಕೆ ಎಲ್ಲಾ ರೀತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ರೈತರು ಕಬ್ಬು ಸರಬರಾಜು ಮಾಡಿದ 14 ದಿನಕ್ಕೆ ಕಬ್ಬಿನ ಹಣವನ್ನು ಪಾವತಿಸಲಾಗುವುದು. ರೈತರುಗಳು ಕಂಪನಿಯ ಏಳಿಗೆಗಾಗಿ ತಾವು ಬೆಳೆದ ಗುಣಮಟ್ಟದ ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಪರಭಾರೆ ಮಾಡದೆ ಮೈಸೂರು ಸಕ್ಕರೆ ಕಾರ್ಖಾನೆಗೆ ಸರಬರಾಜು ಮಾಡಬೇಕೆಂದು ಮನವಿ ಮಾಡಿದರು.“ಗೃಹ ಜ್ಯೋತಿ” ಯೋಜನೆಗೆ ನೊಂದಾಯಿಸುವ ಸುಲಭ ಮಾರ್ಗ

ಸರ್ಕಾರದದಿಂದ ಕಾರ್ಖಾನೆಯ ಖಾತೆಗೆ 50 ಕೋಟಿ ಹಣ ಜಮೆ ಆಗಿದೆ. ಸದ್ಯಕ್ಕೆ ಹಣದ ಕೊರತೆ ಇಲ್ಲ. ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿನಗಳಿಗೊಮ್ಮೆ ಹಣ ಬಿಡುಗಡೆ ಮಾಡಲಾಗುವುದು. ಕಾರ್ಖಾನೆಯಲ್ಲಿ 18 ಸಾವಿರ ಕ್ವಿಂಟಲ್ ಸಕ್ಕರೆ ಇದೆ ಅದನ್ನು ಮಾರಾಟ ಮಾಡಿ ಹಣಕಾಸಿನ ಪರಿಸ್ಥಿತಿಯನ್ನು ಸರಿದೂಗಿಸಲಾಗುವುದು.
1000 ಸ್ಥಳೀಯರು ಕಾರ್ಮಿಕರು, ಬಳ್ಳಾರಿಯಿಂದ 1000, ಮಹಾರಾಷ್ಟ್ರ 500, ಬಿಜಾಪುರ 500, ಜಾರ್ಖಂಡ್ ನಿಂದ 500 ಕಾರ್ಮಿಕರು ಸೇರಿದಂತೆ ಒಟ್ಟು 3500 ಕಾರ್ಮಿಕರ ಕೆಲಸ ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಇವಾಗ 300 ಕಾರ್ಮಿಕರು ಕೆಲಸ ನಿರ್ವಹಿಸಿಸುತ್ತಿದ್ದಾರೆ ಎಂದರು.

Share This Article
Leave a comment