“ಗೃಹ ಜ್ಯೋತಿ” ಯೋಜನೆಗೆ ನೊಂದಾಯಿಸುವ ಸುಲಭ ಮಾರ್ಗ

Team Newsnap
2 Min Read

“ಗೃಹ ಜ್ಯೋತಿ” ಯೋಜನೆಗೆ ನಿಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್/ ಲ್ಯಾಪ್‌ಟಾಪ್ ಗಳಿಂದ ನೊಂದಾಯಿಸುವ ಸುಲಭ ಮಾರ್ಗ,ಯಾವುದೇ ದಾಖಲೆ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ.

1) ವಿದ್ಯುತ್ ಬಿಲ್
2) ಆಧಾರ್ ಸಂಖ್ಯೆ
3) ಆಧಾರ್ ಕಾರ್ಡ್ ನಲ್ಲಿರುವ ಪೋನ್ ಸಂಖ್ಯೆಯಿರುವ ಮೊಬೈಲ್..
ಈ ಮೂರು ಇದ್ದರೆ ಸಾಕು..
ಸೈಬರ್ ಸೆಂಟರ್, ನಾಡ ಕಚೇರಿ- ಕರ್ನಾಟಕ ಒನ್, ಎಸ್ಕಾಂ ಕಚೇರಿಗಳಿಗೆ ಹೋಗುವ ಅವಶ್ಯಕತೆಯೂ ಇಲ್ಲ..

1) ಈ ಲಿಂಕ್ ನ Internet Explorer/Google Chrome/ Mozilla Firefox App ನಲ್ಲಿ ತೆರೆಯಿರಿ..👇🏻👇🏻

https://sevasindhugs.karnataka.gov.in/

2) ನಿಮ್ಮದು ಯಾವ ಎಸ್ಕಾಂ- ESCOM ಅಂತ ಟಿಕ್ 🔘 ಮಾಡಿ

3) ನಂತರ ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ 10 ಸಂಖ್ಯೆಯ Account ID ಟೈಪ್ ಮಾಡಿ.
ಮನೆ ವಿಳಾಸ ತಾನಾಗೆ ಮೂಡುತ್ತದೆ..(ವಿಳಾಸ ಬರುವವರೆಗೆ ತಾಳಿ)

4) ಮುಂದೆ ಸ್ವಂತ ಮನೆನಾ ಅಥವಾ ಬಾಡಿಗೆ ಮನೆನಾ ಅಂತ ಟಿಕ್ 🔘ಮಾಡಿ

5) ಅರ್ಜಿದಾರರ ಮನೆಯ ಯಜಮಾನ/ ಯಜಮಾನಿಯ( ಬಾಡಿಗೆ ಇದ್ದರೆ ಬಾಡಿಗೆಯವರು) ಆಧಾರ್ ಕಾರ್ಡ್ ನ 12 ಸಂಖ್ಯೆ ಟೈಪ್ ಮಾಡಿ

6) ನಂತರ ಆಧಾರ್ e – KYC ಕೇಳುತ್ತದೆ.. OK ಮಾಡಿದರೆ ಹೊಸ ಪೇಜ್ ತೆರೆದುಕೊಳ್ಳುತ್ತದೆ..
ಅಲ್ಲಿ OK ಅಂತ ಟಿಕ್ ಮಾಡಿ.. ಆಧಾರ್ ಕಾರ್ಡ್’ನಲ್ಲಿ ಇರುವ ಫೋನ್ ನಂಬರ್’ಗೆ OTP( ಒಟಿಪಿ) ಸಂಖ್ಯೆ ಬರುತ್ತದೆ.. ಅದನ್ನ ಟೈಪ್ ಮಾಡಿ OK ಮಾಡಿ, e – KYC‌ ಮುಗಿಯಿತು..

7) ನಂತರ ಮುಂದಿನ ಬಾಕ್ಸ್’ ನಲ್ಲಿ ಸಂಪರ್ಕಕ್ಕಾಗಿ ಫೋನ್ ಸಂಖ್ಯೆ ಟೈಪಿಸಿ.. ಈ ಸಂಖ್ಯೆಗೆ ಮತ್ತೊಂದು OTP (ಒಟಿಪಿ) ಬರುತ್ತದೆ.. ‌
ಅದನ್ನ ಟೈಪ್ ಮಾಡಿ OK ಮಾಡಿ..

8) ಕೆಳಗೆ I agree ಅಂತ ಇರುವ ಡಿಕ್ಲೆರೇಶನ್’ಗೆ right tick mark ✅ ಮಾಡಿ..

9) ಕೆಳಗೆ Word verification ಅಂತ ತೋರಿಸುವ 6 ಸಂಖ್ಯೆಯನ್ನ, ಅಲ್ಲಿನ ಬಾಕ್ಸ್’ನಲ್ಲಿ ಟೈಪ್ ಮಾಡಿ submit ಮಾಡಿ..

10) ನಿಮ್ಮ ಅರ್ಜಿಯ ಒಟ್ಟು ಮಾಹಿತಿಯ ಹೊಸ ಪೇಜ್ ತೆರೆದುಕೊಳ್ಳುತ್ತದೆ, ಮತ್ತೆ submit ಅಂತ ಕೊಡಿ.‌.

11) ನಿಮ್ಮ‌ ಅರ್ಜಿಯ ಸಂಖ್ಯೆಯೊಂದಿಗೆ ಸ್ವೀಕೃತಿ ಪ್ರತಿಯ ಪಿಡಿಎಫ್ ಬರುತ್ತದೆ..
ಅದನ್ನ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ..
ಇಲ್ಲಿಗೆ ಅರ್ಜಿ ಹಾಕುವ ಪ್ರಕ್ರಿಯೆ ಮುಗಿಯಿತು..ರಷ್ಯಾದಲ್ಲಿ ಅಂತರ್ಯುದ್ಧ: ಅಧ್ಯಕ್ಷ ಪುಟೀನ್ ವಿರುದ್ದ ದಂಗೆ

ಎರಡು- ಮೂರು ಸಲ ಪ್ರಯತ್ನ ಮಾಡಿದರೆ ಸಾಕು, ಸುಲಭವಾಗಿ ಅರ್ಜಿ ನೊಂದಾಯಿಸಬಹುದು.. ಸರ್ವರ್‌ ಸಮಸ್ಯೆ ಇರುವುದರಿಂದ ಬೆಳಿಗ್ಗೆ 10 ಗಂಟೆಯ ಒಳಗೆ, ರಾತ್ರಿ 8ರ ನಂತರ ನೊಂದಾಯಿಸಿದರೆ‌ ಉತ್ತಮ.. ಅರ್ಜಿ ನೊಂದಾಯಿಸಲು ಕೊನೆಯ ದಿನಾಂಕ ಇಲ್ಲ ,ಹಾಗಾಗಿ ಅವಸರ ಬೇಡ.

Share This Article
Leave a comment