ಜೂನ್ 14 ರಿಂದ 25 ರ ವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ – ಸುರೇಶ್ ಕುಮಾರ್

Team Newsnap
1 Min Read
no extra fee to be collected for NEET JEE IIT exams

ಜೂನ್ 14 ರಿಂದ 25 ರವರೆಗೆ ಪರೀಕ್ಷೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸುರೇಶ್ ಕುಮಾರ್ ಮಾತನಾಡಿದ ಸಚಿವರು, ಈ ಬಾರಿ ಪರೀಕ್ಷಾ ಅವಧಿ 3 ಗಂಟೆ 15 ನಿಮಿಷಗಳ ಕಾಲ ಇರುತ್ತದೆ.
ಜೂನ್ 14ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಲಿದೆ ಎಂದು ಹೇಳಿದರು.

ಫೆ.1 ರಿಂದ ಎಲ್ಲಾ ತರಗತಿಗಳು ಆರಂಭ:

ಫೆಬ್ರವರಿ 1ರಿಂದ 9ನೇ ತರಗತಿ, 10ನೇ ತರಗತಿ ಹಾಗೂ 11, 12ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ.

1-5ನೇ ತರಗತಿ ಆರಂಭಿಸುವ ಬಗ್ಗೆ ಫೆಬ್ರವರಿ 2ನೇ ವಾರದಿಂದ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

ಖಾಸಗಿ ಶಾಲೆಗಳ ಶುಲ್ಕ ನಿಗದಿ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರವಾಗಿಲ್ಲ. ಶುಲ್ಕ ನಿಗದಿ ಬಗ್ಗೆ ಪ್ರತ್ಯೇಕ ಸಲಹಾ ಸಮಿತಿ ಜೊತೆ ಚರ್ಚಿಸಬೇಕಿದೆ. ಆ ಬಳಿಕ ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾ ಪಟ್ಟಿ :

  • ಜೂನ್ 14ರಂದು ಪ್ರಥಮ ಭಾಷೆ ಕನ್ನಡ
  • ಜೂನ್ 16ರಂದು ಗಣಿತ/ ಸಮಾಜಶಾಸ್ತ್ರ
  • ಜೂನ್ 18ರಂದು ದ್ವಿತೀಯ ಭಾಷೆ ಇಂಗ್ಲೀಷ್ ಅಥವಾ ಕನ್ನಡ
  • ಜೂನ್ 21ರಂದು ವಿಜ್ಞಾನ
  • ಜೂನ್ 23ರಂದು ತೃತೀಯ ಭಾಷೆ
  • ಜೂನ್ 25ರಂದು ಸಮಾಜ ವಿಜ್ಞಾನ

Share This Article
Leave a comment