ಪತ್ರಕರ್ತ ಹೊನಕೆರೆ ನಂಜಂಡೇಗೌಡರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರಕಟ

Team Newsnap
1 Min Read

ಬೆಂಗಳೂರು :

ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಈ ಬಾರಿ ಹಿರಿಯ ಪತ್ರಕರ್ತ, ಬಳ್ಳಾರಿಯ ವಿಶೇಷ ವರದಿಗಾರ ಹೊನಕೆರೆ ನಂಜುoಡೇಗೌಡ ಅವರಿಗೆ ಲಭಿಸಿದೆ.

ನಂಜುಂಡೇಗೌಡರು ಪ್ರಜಾವಾಣಿ ಪತ್ರಿಕೆಯಲ್ಲಿ ಹಲವು ದಶಕಗಳಿಂದ ವಿವಿಧ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿ ಕನ್ನಡ ಪತ್ರಿಕೋದ್ಯಮಕ್ಕೆ ಉತ್ತಮ ಸೇವೆ ಸಲ್ಲಿಸಿರುತ್ತಾರೆ.

ಇದುವರೆಗೆ ಈ ಪ್ರಶಸ್ತಿಯನ್ನು ೨೯ ಹಿರಿಯ ಪತ್ರಕರ್ತರು ಪಡೆದಿದ್ದು, ಇವರು ೩೦ನೇಯವರು. ಪ್ರಶಸ್ತಿ ೧೫ ಸಾವಿರ ರೂ ನಗದು ಹಾಗೂ ಫಲಕ ಹೊಂದಿದೆ.

ನಂಜುoಡೇಗೌಡರು ನಡೆ-ನುಡಿಯಲ್ಲಿ ಕಟ್ಟುನಿಟ್ಟು. ಮೈಸೂರಿನ ಪತ್ರಕರ್ತರ ಪಡೆಗೆ ಸೇರಿದ ಇವರು ದೆಹಲಿ, ಧಾರವಾಡ, ಶಿವಮೊಗ್ಗ, ದಾವಣಗೆರೆ, ಬೆಂಗಳೂರಿನಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡವರು.

ಪತ್ರಕರ್ತನಾದವನಿಗೆ ಹಳ್ಳಿಯಿಂದ ದಿಲ್ಲಿಯವರೆಗೆ ಅನುಭವ ಇರಬೇಕೆಂದು ಹೇಳುವುದುಂಟು. ಅದರಂತೆ ಹೊನಕೆರೆ ನುಂಜುಂಡೇಗೌಡರು ಅಪಾರ ಅನುಭವ ಪಡೆದುಕೊಂಡಿದ್ದಾರೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊನಕೆರೆ ಇವರ ಸ್ವಂತ ಗ್ರಾಮ. ಗ್ರಾಮೀಣ ಭಾಷೆಯ ಗಮ್ಮತ್ತು ಅವರ ಮಾತಿನಲ್ಲಿ ಹಾಗೆ ಉಳಿದುಕೊಂಡಿದೆ. ಒಟ್ಟು ೩೫ ವರ್ಷಗಳ ಅನುಭವ. ಜಿ-೨೦ ಯಿಂದ ಸಮ್ಮೇಳನದಿಂದ ಹಿಡಿದು ಧಾರವಾಡ ಜಿಲ್ಲೆಯ ಸತ್ತೂರು ಗ್ರಾಮದ ರೈತನ ಆತ್ಮಹತ್ಯೆವರೆಗೆ ಎಲ್ಲ ಆಗುಹೋಗುಗಳನ್ನು ವಸ್ತುನಿಷ್ಠವಾಗಿ ವರದಿ ಮಾಡಿದವರು. ವಿಶ್ವ ಪರಿಸರ ದಿನಾಚರಣೆ

ಮನಮೋಹನಸಿಂಗ್, ಎಸ್.ಎಂ. ಕೃಷ್ಣ ಅವರೊಂದಿಗೆ ಪಾಕಿಸ್ತಾನ,ಸೌದಿ ಅರೇಬಿಯಾ ಕಂಡವರು. ನೇಪಾಳ ಭೂಕಂಪದ ನೋವನ್ನು ಅನುಭವಿಸಿದವರು. ಈಗ ಬಳ್ಳಾರಿಯಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಎಚ್ಚರದ ಹದ್ದಿನ ಕಣ್ಣು ಹಾಗೆ ಇದೆ. ಅವರಿಗೆ ಈ ಪ್ರಶಸ್ತಿ ಜೀವಮಾನದ ಸೇವೆಗೆ ಸಂದ ಸಂಮ್ಮಾನ. ಕಳೆದ ವರ್ಷ ಈ ಪ್ರಶಸ್ತಿಯನ್ನು ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಗೋಪಾಲ ಹೆಗಡೆ ಅವರಿಗೆ ನೀಡಲಾಗಿತ್ತು ಎಂದು
ಟ್ರಸ್ಟ್ ಪರವಾಗಿ ಎಚ್.ಆರ್. ಶ್ರೀಶ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Share This Article
Leave a comment