July 6, 2022

Newsnap Kannada

The World at your finger tips!

politcs,JDS,congress

JDS MLC declares support for Congress MLC candidate Madhu

ಕಾಂಗ್ರೆಸ್ ಎಂಎಲ್ ಸಿ ಅಭ್ಯರ್ಥಿ ಮಧುಗೆ ಜೆಡಿಎಸ್ MLC ಮರಿತಿಬ್ಬೇಗೌಡರ ಬೆಂಬಲ ಘೋಷಣೆ

Spread the love
WhatsApp Image 2022 06 05 at 1.23.38 PM 1

ಮಂಡ್ಯದ ರಾಜಕಾರಣದ ತಿರುವಿಗೆ ನಿರ್ದೀಷ್ಟ ದಿಕ್ಕುಗಳೇ ಇಲ್ಲ. ದಿನವೂ ಬದಲಾವಣೆ . ಈಗ ಮತ್ತೊಂದು ಸ್ವರೂಪ. MLC ಮರಿತಿಬ್ಬೇಗೌಡ ಜೆಡಿಎಸ್ ಗುಡ್ ಬೈ ಹೇಳಿ, ಕಾಂಗ್ರೆಸ್ ಗೆ ಜೈ ಜೈ ಎಂದು ಕಾಂಗ್ರೆಸ್ ನತ್ತ ಒಲವು ತೋರಿದ್ದಾರೆ

ದಕ್ಷಿಣ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ ಪರ ಮರಿತಿಬ್ಬೇಗೌಡ ಪ್ರಚಾರ. ಮಾಡುವುದರ ಮೂಲಕ ಕಾಂಗ್ರೆಸ್ ಸೇರ್ತಾರಾ ಎಂಬುದು ಖಚಿತವಾಗಿದೆ.

ಮರಿತಿಬ್ಬೇಗೌಡರ ಆಪ್ತನಿಗೆ ಜೆಡಿಎಸ್ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ. ಜೆಡಿಎಸ್ ವಿರುದ್ದ ಅಸಮಾಧಾನಗೊಂಡಿದ್ದ ಮರಿತಿಬ್ಬೇಗೌಡರು ಜೆಡಿಎಸ್ ವರಿಷ್ಠ‌ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಇತ್ತಿಚೆಗೆ ವಾಗ್ದಾಳಿ ನಡೆಸಿದ್ದರು

WhatsApp Image 2022 06 05 at 1.23.37 PM

ಇದನ್ನು ಓದಿ:ಎಫ್‌ಬಿ ಗೆಳತಿಯಿಂದ ಮೋಸ: ವ್ಯಾಪಾರ ಪಾಲುದಾರಿಕೆ ನೆಪದಲ್ಲಿ 35 ಲಕ್ಷ ರು ಪಂಗನಾಮ

ಹಣವಿದ್ದವರಿಗೆ ಮಾತ್ರ ಜೆಡಿಎಸ್ ನಲ್ಲಿ ಟಿಕೆಟ್.ದೇವೇಗೌಡರ ಕುಟುಂಬ ರಾಜಕಾರಣದಿಂದ ಪಕ್ಷ ಹೀನಾಯ ಸ್ಥಿತಿಗೆ ಹೋಗಲು ಕಾರಣ.
ನನ್ನನ್ನ ಕಳೆದ ಚುನಾವಣೆಯಲ್ಲಿ ನಿಲ್ಲಿಸಿ ಸೋಲಿಸಲು ಮುಂದಾಗಿದ್ದರು ‌ ಎಂದು ಹೇಳುವ ಮೂಲಕ ಜೆಡಿಎಸ್ ವಿರುದ್ದ ಮರಿತಿಬ್ಬೇಗೌಡರುಕಿಡಿಕಾರಿದ್ದರು

ನಾನು ಈ ಬಾರಿ ಜೆಡಿಎಸ್ ಅಭ್ಯರ್ಥಿಗೆ ಯಾವುದೇ ಕಾರಣಕ್ಕು ಬೆಂಬಲ ಕೊಡಲ್ಲ.ನೀವು ಯಾರು ಜೆಡಿಎಸ್ ಅಭ್ಯರ್ಥಿ ಗೆ ವೋಟ್ ಹಾಕಬೇಡಿ ಎಂದು ಬೆಂಬಲಿಗರಿಗೆ ಕರೆ ನೀಡಿದ್ದ‌ರು

ಇದೀಗ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ. ಆರಂಭಿಸಿದ್ದಾರೆ ಮಂಡ್ಯದ ಖಾಸಗಿ ಭವನದಲ್ಲಿ ಬೆಂಬಲಿಗರ‌ ಸಭೆ ಕರೆದು ಮಧು ಜಿ‌ ಮಾದೇಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ

ಮಧು ಜಿ ಮಾದೇಗೌಡರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸುವಂತೆ ಮರಿತಿಬ್ಬೇಗೌಡರ ತೀರ್ಮಾನಕ್ಕೆ ಜೈ ಎಂದ ಬೆಂಬಲಿಗರು.

error: Content is protected !!