Facebook ಗೆಳತಿಯಿಂದ ಮೋಸ: ವ್ಯಾಪಾರ ಪಾಲುದಾರಿಕೆ ನೆಪದಲ್ಲಿ 35 ಲಕ್ಷ ರು ಪಂಗನಾಮ

Team Newsnap
1 Min Read
Fake Fb account, WhatsApp message in DC name; demanded money ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ, ವಾಟ್ಸಪ್ ಮೆಸೇಜ್; ಹಣಕ್ಕೆ ಕಿಡಿಗೇಡಿಗಳಿಂದ ಬೇಡಿಕೆ

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಫೇಸ್ ಬುಕ್ ಗೆಳತಿಯಿಂದ 35 ಲಕ್ಷ ರು ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನು ಓದಿ:ರಾಜ್ಯದಲ್ಲಿ ಶೀಘ್ರವೇ ಪೆಟ್ರೋಲ್, ಡಿಸೇಲ್ ದರ ಮತ್ತಷ್ಟು ಇಳಿಕೆ : ಸಂಸದ ಸಿದ್ದೇಶ್ವರ್

48 ವರ್ಷದ ಬ್ಯಾಂಕ್ ನೌಕರರೊಬ್ಬರಿಗೆ ಕೆಲವು ತಿಂಗಳ ಹಿಂದೆ ಎಫ್‌ಬಿಯಲ್ಲಿ ನ್ಯಾನ್ಸಿ ವಿಲಿಯಂ ಎಂಬ ಮಹಿಳೆಯಿಂದ ಫ್ರೆಂಡ್‌ ರಿಕ್ವೆಸ್ಟ್‌ ಬಂದ ನಂತರ ಇಬ್ಬರೂ ಸ್ನೇಹಿತರಾಗಿದ್ದಾರೆ.

ಪರಿಚಯವಾದ ಕೆಲ ದಿನಗಳ ನಂತರ ತಮ್ಮ ತಮ್ಮ ಮೊಬೈಲ್‌ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ನ್ಯಾನ್ಸಿಯು ತಾನು ಯುನೈಟೆಡ್ ಕಿಂಗ್‌ಡಮ್‌ನ ಉದ್ಯಮಿ ಎಂದು ಹೇಳಿಕೊಂಡಿದ್ದಾಳೆ. ಭಾರತದಲ್ಲಿ ಆಭರಣ ಮಳಿಗೆ ತೆರೆಯುವುದು ಸೇರಿದಂತೆ ತನ್ನ ವಿವಿಧ ಯೋಜನೆಗಳ ವಿವರಗಳನ್ನು ಅವಳು ಹಂಚಿಕೊಂಡಿದ್ದಾರೆ.

ಈ ವೇಳೆ ವಿಲಿಯಮ್ಸ್ ರಾಕೇಶ್‌ನನ್ನು ಆಭರಣ ವ್ಯವಹಾರದಲ್ಲಿ ಪಾಲುದಾರನನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾಳೆ. ವ್ಯಾಪಾರಕ್ಕಾಗಿ ಕೆಲವು ಆರಂಭಿಕ ಹೂಡಿಕೆಗೆ ಬದಲಾಗಿ ಪಾಲುದಾರಿಕೆಯನ್ನು ನೀಡುವುದಾಗಿ ಹೇಳಿದ್ದಾಳೆ.

ರಾಕೇಶ್ ಆಕೆಯನ್ನು ಕುರುಡು ನಂಬಿಕೆಯಿಂದ ಹೂಡಿಕೆ ಮಾಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾನೆ. ಇವರು ತಮ್ಮ ಆರು ಬ್ಯಾಂಕ್ ಖಾತೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ಆ ಖಾತೆಗಳಲ್ಲಿರುವ ಹಣವನ್ನು ವರ್ಗಾಯಿಸಲು ರಾಕೇಶ್‌ಗೆ ಅವಳು ಕೇಳಿದ್ದಾಳೆ. ಈ ಎಲ್ಲಾ ಖಾತೆಗಳು ಭಾರತದವು. ಏಪ್ರಿಲ್ 7 ಮತ್ತು ಮೇ 27 ರ ನಡುವೆ ಬಹು ವಹಿವಾಟುಗಳ ಮೂಲಕ ರಾಕೇಶ್ 35 ಲಕ್ಷ ರೂ. ಆಕೆಯ ಖಾತೆಗೆ ವರ್ಗಾವಣೆ ಮಾಡಿದ್ದಾನೆ.

ನಂತರ ಆಕೆಯ ಸುಳಿವೂ ಕೂಡ ಇರಲಿಲ್ಲ. ಇದರಿಂದ ಕಂಗಾಲಾದ ರಾಕೇಶ್‌ ಕೊನೆಗೆ ಈ ವಿಷಯದ ಬಗ್ಗೆ ಅನುಮಾನಗೊಂಡು ತನ್ನ ಸ್ನೇಹಿತರನ್ನು ವಿಚಾರಿಸಿದ್ದಾನೆ. ಅವರು ಪೊಲೀಸರನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು. ಈ ಬಗ್ಗೆ ದೂರು ದಾಖಲಿಸಿದಾಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಿಚಾರಣೆ ವೇಳೆ ಮೋಸ ಮಾಡಿರುವ ಸತ್ಯ ಬಯಲಾಗಿದೆ.

Share This Article
Leave a comment