ರಾಜ್ಯದ 93 ಕ್ಷೇತ್ರಗಳಲ್ಲಿ ಸ್ಪರ್ದೆ ಮಾಡುವ ಜೆಡಿಎಸ್ ಪಟ್ಟಿ ಬಿಡುಗಡೆ -ಅಪ್ಪ , ಮಕ್ಕಳಿಗೆ ಟಿಕೆಟ್

Team Newsnap
1 Min Read

ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಮಾತ್ರ ಬಾಕಿ ಇರುವ ಬೆನ್ನಲ್ಲಿ ಜೆಡಿಎಸ್‌ 93 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, 2023ರ ಚುನಾವಣೆಗೆ ಜೆಡಿಎಸ್ ಪಟ್ಟಿ ಬಿಡುಗಡೆ ಬಗ್ಗೆ ಹಲವರು ಪ್ರಶ್ನೆ ಕೇಳಿದ್ದರು. ಈ ಕಾರಣಕ್ಕೆ ಇಂದು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.ಫಿಫಾ ಫುಟ್ ಬಾಲ್ : 3ನೇ ಬಾರಿ ಅರ್ಜೆಂಟೀನಾ ಚಾಂಪಿಯನ್‌ -ಬಹುಮಾನಗಳ ಸುರಿಮಳೆ

ಅಪ್ಪ – ಮಗನಿಗೆ ಟಕೇಟ್ :

ಜಿ.ಟಿ.ದೇವೇಗೌಡರಿಗೆ ಚಾಮುಂಡೇಶ್ವರಿಯಲ್ಲಿ ಟಿಕೆಟ್ ಸಿಕ್ಕಿದರೆ ಹುಣಸೂರಿನಲ್ಲಿ ಜಿಟಿಡಿ ಪುತ್ರ ಹರೀಶ್ ಗೌಡಗೆ ಸಿಕ್ಕಿದೆ. ಚನ್ನಪಟ್ಟಣದಿಂದ ಎಚ್‌ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ, ರಾಮನಗರದಿಂದ ನಿಖಿಲ್ ಸ್ಪರ್ಧಿಸಲಿದ್ದಾರೆ.

ಹಾಸನ ಜಿಲ್ಲೆಯ ಟಿಕೆಟ್ ಘೋಷಣೆಯಾಗಿಲ್ಲ. ಈ ಜಿಲ್ಲೆಯ ಟಿಕೆಟ್‌ ಹಂಚಿಕೆಯ ಅಧಿಕಾರವನ್ನು ದೇವೇಗೌಡ ಮತ್ತು ರೇವಣ್ಣಗೆ ಕೊಡಲಾಗಿದೆ.

WhatsApp Image 2022 12 19 at 3.48.00 PM
WhatsApp Image 2022 12 19 at 3.48.30 PM
WhatsApp Image 2022 12 19 at 3.48.57 PM
WhatsApp Image 2022 12 19 at 3.49.22 PM
Share This Article
Leave a comment