March 15, 2026

Newsnap Kannada

The World at your finger tips!

puttraju dance

ಕನ್ನಡದ ಹಾಡಿಗೆ ಭರ್ಜರಿ ಸ್ಟೆಪ್ಸ್​ ಹಾಕಿ ಸಂಭ್ರಮಿಸಿದ ಜೆಡಿಎಸ್​ ಶಾಸಕ ಪುಟ್ಟರಾಜು

Spread the love

ಮಾಜಿ ಸಚಿವ ಹಾಗೂ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹುಟ್ಟಿದರೆ ಕನ್ನಡ ನಾಡಿನಲ್ಲ ಹುಟ್ಡಬೇಕು ಎಂಬ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿ ಸಂಭ್ರಮಿಸಿದ್ದಾರೆ.

ಪಾಂಡವಪುರದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿ.ಎಸ್. ಪುಟ್ಟರಾಜು ಡಾ.ರಾಜ್ ನಟನೆಯ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡನ್ನು ಹಾಡುತ್ತಾ ಮಕ್ಕಳೊಂದಿಗೆ ಭರ್ಜರಿ ನೃತ್ಯ ಮಾಡಿದ್ದಾರೆ.

ವೇದಿಕೆಯಿಂದ ಮೈಕ್ ಹಿಡಿದು ಹಾಡುತ್ತಾ ಮೈದಾನಕ್ಕಿಳಿದ ಶಾಸಕರು ಮಕ್ಕಳೊಂದಿಗೆ ಮಕ್ಕಳಾಗಿ ಸಖತ್​ ಡ್ಯಾನ್ಸ್​ ಮಾಡಿದ್ದಾರೆ.

ಸದ್ಯ ಶಾಸಕರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

error: Content is protected !!