ಪುನೀತ್ ಸಡನ್ ಡೆತ್ ಗೆ ಬೆಚ್ಚಿದ ಜನ‌ : 2 ದಿನಗಳಿಂದ ಹೃದಯ ತಪಾಸಣೆ ಸಂಖ್ಯೆ ಹೆಚ್ಚಳ

Team Newsnap
1 Min Read
Dr. Manjunath's tenure as Director of Jayadeva Hospital has been extended by 1 year ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ ಮಂಜುನಾಥ್‌ ಸೇವಾವಧಿ 1 ವರ್ಷ ವಿಸ್ತರಣೆ #Thenewsnap #latestnews #karnataka #kannadanews #Hospital #jaideva #Mandyanews #Mysuru

ನಟ ಪುನೀತ್ ರಾಜ್​ಕುಮಾರ್​ ಸಡನ್​ ಡೆತ್​ ಸಂಭವಿಸಿದ್ದೇ ತಡ ನಗರ ವಾಸಿಗಳು ಬೆಚ್ಚಿ ಬಿದ್ದಿದ್ದಾರೆ.

ಬೆಂಗಳೂರು- ಮೈಸೂರಿನ ಜಯದೇವ ಆಸ್ಪತ್ರೆಗೆ ತಪಾಸಣೆ, ಚಿಕಿತ್ಸೆಗೆ ಬರುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ.

ನಟ ಪುನೀತ್ ನಿಧನದಿಂದ ಭಯ ಬಿದ್ದಿರುವ ಸಿಲಿಕಾನ್ ಸಿಟಿ ಜನರು ಆರೋಗ್ಯದ ತಪಾಸಣೆಗೆ ಹೃದಯ ಚಿಕಿತ್ಸೆ ಆಸ್ಪತ್ರೆಗಳಿಗೆ ಧಾವಿಸಿ ಬರುತ್ತಿದ್ದಾರೆ.

ಇದೇ ವೇಳೆ ಇಷ್ಟು ದಿನ ವ್ಯಾಯಾಮ ಕಸರತ್ತು ಮಾಡಿಕೊಂಡಿರುತ್ತಿದ್ದ ಜನರೂ ಜಿಮ್​ಗಳಿಂದ ವಿಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಸಣ್ಣಪುಟ್ಟ ಹೃದಯ ಸಮಸ್ಯೆ ಇರುವವರು ಸಹ ಹೃದಯ ಚಿಕಿತ್ಸೆಗೆಂದು ಬರ್ತಿದ್ದಾರೆ. ಜಯದೇವ ಆಸ್ಪತ್ರೆಯ ಓಪಿಡಿಯಲ್ಲಿ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ದಿಢೀರ್ ಏರಿಕೆ ಆಗಿದೆ

2 ದಿನದಿಂದ ಹೃದ್ರೋಗ ತಪಾಸಣೆಗೆ ಬರುವವರ ಸಂಖ್ಯೆ ಹೆಚ್ಚಳವಾಗ್ತಿದೆ. ಕಳೆದ 2 ದಿನದಲ್ಲೇ ಶೇ. 25ರಷ್ಟು ಜನ ಹೆಚ್ಚಾಗಿ ಚಿಕಿತ್ಸೆಗಾಗಿ ಬಂದಿದ್ದಾರೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ, ಡಾ. ಸಿ.ಎನ್​​. ಮಂಜುನಾಥ್ ತಿಳಿಸಿದ್ದಾರೆ.

ರಜಾ ದಿನವಾದರೂ ಸಹ ಹೃದ್ರೋಗ ತಪಾಸಣೆಗೆ ಬರುತ್ತಿದ್ದಾರೆ. ಮೈಸೂರು ಮತ್ತು ಬೆಂಗಳೂರು ಜಯದೇವ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗತೊಡಗಿದೆ. 105 ಹೃದ್ರೋಗ ತಜ್ಞರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಇದ್ದಾರೆ. ಪ್ರತಿ ದಿನ 1200 ಹೊರ ರೋಗಿಗಳು ಬರುತ್ತಿದ್ದರು. ಆದರೆ ಈಗ 1500ಕ್ಕೂ ಹೆಚ್ಚು ಹೊರ ರೋಗಿಗಳು ಬಂದಿದ್ದಾರೆ ಎಂದು ತಿಳಿಸಿದರು

Share This Article
Leave a comment