October 7, 2022

Newsnap Kannada

The World at your finger tips!

election,vice president,politics

NDA supported candidate Jagdeep Dhankar elected as Vice President

ಉಪ ರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಆಯ್ಕೆ

Spread the love

ಉಪ ರಾಷ್ಟ್ರಪತಿ ಚುನಾವಣೆಯಲ್ಲೂ ಎನ್​ಡಿಎ ಬೆಂಬಲಿತ ಅಭ್ಯರ್ಥಿ ಜಗದೀಪ್ ಧನ್ಕರ್ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾದರು

ಧನ್ಕರ್ ಎದುರು ಪ್ರತಿಸ್ಪರ್ಧಿ, ಯುಪಿಎ ಬೆಂಬಲಿತ ಮಾರ್ಗರೆಟ್ ಆಳ್ವ ಪರಾಭವಗೊಂಡಿದ್ದಾರೆ.

ಈ ಮೂಲಕ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್, ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆ ಆಗಿದ್ದಾರೆ. ಈ ಚುನಾವಣೆಯಲ್ಲಿ ಜಗದೀಪ್​ಗೆ 500 ಹಾಗೂ ಮಾರ್ಗರೆಟ್​​ಗೆ 200 ಮತಗಳು ಚಲಾವಣೆ ಆಗಿವೆ.ಇದನ್ನು ಓದಿ –ನಾಡಹಬ್ಬ ದಸರಾ – 2022 ಈ ಬಾರಿ ಗೋಲ್ಡ್‌ ಪಾಸ್‌ ರದ್ದು: ಸಚಿವ ಸೋಮಶೇಖರ್‌ ಸ್ಪಷ್ಟನೆ

ಜಗದೀಪ್ ಹಿನ್ನೆಲೆ:

ಜಗದೀಪ್ ಧನ್ಕರ್ (71) ರಾಜಸ್ಥಾನ ಮೂಲದವರು. 1951ರ ಮೇ 18ರಂದು ಕಿಥನಾ ಗ್ರಾಮದಲ್ಲಿ ಜನಿಸಿದ ಧನ್ಕರ್ ಚಿತ್ತೋರಗಢದ ಸೈನಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪೂರೈಸಿ, ಜೈಪುರದ ರಾಜಸ್ಥಾನ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ವಕೀಲಿ ವೃತ್ತಿ ಮಾಡುತ್ತಿದ್ದ ಅವರು, ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್​ನ ಅಧ್ಯಕ್ಷರೂ ಆಗಿದ್ದರು. ಜನತಾ ದಳದ ಮೂಲಕ ರಾಜಕೀಯ ಪ್ರವೇಶ ಪಡೆದ ಧನ್ಕರ್, ಝುುಂಝುುನು ಕ್ಷೇತ್ರದಿಂದ 9ನೇ ಲೋಕಸಭೆಗೆ (1989-91) ಆಯ್ಕೆ ಆಗಿದ್ದರು. 1993-98ರ ಅವಧಿಯಲ್ಲಿ ರಾಜಸ್ಥಾನದ 10ನೇ ವಿಧಾನಸಭೆಗೆ ಕಿಷನ್​ಗಢದಿಂದ ಚುನಾಯಿತರಾಗಿದ್ದರು.

ನಂತರದಲ್ಲಿ ಬಿಜೆಪಿ ಜತೆ ಗುರುತಿಸಿಕೊಂಡ ಅವರನ್ನು 2019ರ ಜುಲೈ 30ರಂದು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಧನ್ಕರ್ ನಡುವೆ ಆರಂಭದಿಂದಲೂ ಜಟಾಪಟಿ ಇದೆ. ರಾಜ್ಯಪಾಲರ ಅಧಿಕಾರ ವ್ಯಾಪ್ತಿಯನ್ನು ಮಮತಾ ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ. ರಾಜ್ಯಪಾಲರು ಪದನಿಮಿತ್ತವಾಗಿ ರಾಜ್ಯದ ಎಲ್ಲ ವಿವಿಗಳ ಕುಲಾಧಿಪತಿಗಳೂ ಆಗಿರುತ್ತಾರೆ. ಆದರೆ, ಇತ್ತೀಚೆಗೆ ಈ ಅಧಿಕಾರವನ್ನು ಕಿತ್ತುಕೊಂಡು, ಮುಖ್ಯಮಂತ್ರಿಯೇ ಎಲ್ಲ ವಿವಿಗಳ ಕುಲಾಧಿಪತಿ ಎಂಬ ತಿದ್ದುಪಡಿ ಮಸೂದೆಗೆ ಟಿಎಂಸಿ ಸರ್ಕಾರ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿದೆ.

error: Content is protected !!