September 27, 2022

Newsnap Kannada

The World at your finger tips!

rain,wall collapse,death

2 children died when barn wall collapsed due to rain near Magadi

ಮಾಗಡಿ ಬಳಿ ಮಳೆಗೆ ಕೊಟ್ಟಿಗೆ ಗೋಡೆ ಕುಸಿದು ಇಬ್ಬರು ಮಕ್ಕಳ ಧಾರುಣ ಸಾವು

Spread the love

ನಿರಂತರ ಮಳೆಗೆ ಕೊಟ್ಟಿಗೆ ಗೋಡೆ ಕುಸಿದ ಪರಿಣಾಮ ಪಕ್ಕದಲ್ಲೇ ಮಲಗಿಕೊಂಡಿದ್ದ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ಜರುಗಿದೆ

ಪರ್ಭಿನ್(4), ಇಷಿಕಾ(3) ಮೃತ ದುರ್ದೈವಿಗಳು.ಇದನ್ನು ಓದಿ –ಉಪ ರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಆಯ್ಕೆ

ಸೋಲೂರು ಗ್ರಾಮದಲ್ಲಿನ ಶೆಡ್‍ನಲ್ಲಿ ಮಲಗಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತಿಬ್ಬರಿಗೆ ಗಾಯವಾಗಿದೆ ನೇಪಾಳ ಮೂಲದ ಕುಟುಂಬವೊಂದು ದನದ ಕೊಟ್ಟಿಗೆ ಪಕ್ಕದಲ್ಲೇ ಶೆಡ್ ನಿರ್ಮಿಸಿಕೊಂಡು ವಾಸವಾಗಿತ್ತು.

ಹೋಟೆಲ್ ಒಂದರಲ್ಲಿ ಇವರು ಕೆಲಸ ಮಾಡುತ್ತಿದ್ದರು. ನಿರಂತರ ಮಳೆ ಬರುತ್ತಿದ್ದ ಹಿನ್ನೆಲೆ ಶೆಡ್ ಮೇಲೆ ಏಕಾಏಕಿ ಕೊಟ್ಟಿಗೆ ಗೋಡೆ ಕುಸಿದೆ. ಈ ಹಿನ್ನೆಲೆ ಸ್ಥಳದಲ್ಲೇ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮೀನಾ ಮತ್ತು ಮೋನಿಷಾರಿಗೆ ಗಾಯವಾಗಿದೆ.


ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಾಳುಗಳಿಗೆ ಮಾಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !!