ಮಂಡ್ಯದ ಶ್ರೀನಿಧಿ ಚಿನ್ನದಂಗಡಿ ಮಾಲೀಕನ ಜಗನ್ನಾಥ್ ಶೆಟ್ಟಿ ಹನಿಟ್ರ್ಯಾಪ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ.
ಜಗನ್ನಾಥ್ ಶೆಟ್ಟಿ ಕೊಟ್ಟ ದೂರು ಸುಳ್ಳು, ವೀಡಿಯೋದಲ್ಲಿರುವುದು ಕೂಡ ಸುಳ್ಳು ಎಂದು ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.
4 ಕೋಟಿ ಆಸ್ತಿವಂತ ಶಿರಾ ನಗರಸಭೆ ಸದಸ್ಯನ ಬಳಿ ಬಿಪಿಎಲ್ ಕಾರ್ಡ್ : ಸದಸ್ಯತ್ವದಿಂದ ವಜಾ
ಜಗನ್ನಾಥ್ ಶೆಟ್ಟಿಯನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಹಲವು ದಿನಗಳಿಂದ ಪ್ಲಾನ್ ನಡೆದಿದೆ. ಜೊತೆಗೆ ಲಾಡ್ಜ್‌ನಲ್ಲಿ ಸಿಕ್ಕಿಕೊಂಡಿದ್ದ ಯುವತಿ ಕೂಡ ಸಲ್ಮಾ ಭಾನು ಆಂಡ್ ಟೀಂನ ಸದಸ್ಯೆ ಎಂಬುದು ವಿಡಿಯೋದಲ್ಲಿ ಗ್ಯಾಂಗ್ ವರ್ತನೆಯಿಂದ ನಾಟಕ ಎಂಬುದು ಗೊತ್ತಾಗುತ್ತದೆ
ಆ ಯವತಿ ಮೂಲಕವೇ ಜಗನ್ನಾಥ್ ಶೆಟ್ಟಿಗೆ
ಫೋನ್ ನಲ್ಲಿ ಸ್ನೇಹ ಸಂಪಾದಿಸಿದ್ದಳು. ಯುವತಿಗೆ ತಾನು ಕೂಡ ಲೆಕ್ಚರ್ ಎಂದು ಜಗನ್ನಾಥ್ ಶೆಟ್ಟಿ ಹೇಳಿಕೊಂಡಿದ್ದನು. ಶೆಟ್ಟಿ ಹೇಳಿದ್ದ ಸುಳ್ಳನ್ನೇ ಈ ಗ್ಯಾಂಗ್ ತಮ್ಮ ಬಂಡವಾಳವಾಗಿ ಮಾಡಿಕೊಂಡಿತ್ತು. ಜಗನ್ನಾಥ ಶೆಟ್ಟಿ ಹಿನ್ನೆಲೆ ಗೊತ್ತೆ ಇಲ್ಲ ಎನ್ನುವಂತೆ ನಾಜುಕಾಗಿ ಮಾತನಾಡಿ ಯುವತಿ ಡ್ರಾಮಾ ಮಾಡಿ ಆತನನ್ನು ಲಾಕ್ ಮಾಡಿದ್ದಾಳೆ.
ಯುವತಿ ಜೊತೆಗೆ ಸಲುಗೆ ಬೆಳೆಯುತ್ತಿದ್ದಂತೆ ಜಗನ್ನಾಥ್ ಶೆಟ್ಟಿ ಲಾಡ್ಜ್ ಗೆ ಕರೆದಿದ್ದನು. ಶೆಟ್ಟಿ ಆಹ್ವಾನ ಬಳಿಕ ಆತನನ್ನು ಲಾಡ್ಜ್‍ನಲ್ಲಿ ಲಾಕ್ ಮಾಡಲು ಪ್ಲಾನ್ ನಡೆದಿತ್ತು. ಮಂಡ್ಯ ಮೂಡಾದ 5 ಕೋಟಿ ರು ಹಗರಣ : ತೀರ್ಪಿನಲ್ಲಿ ಐವರ ಹೆಸರು ಬಹಿರಂಗ : ಮೋಸ ಮಾಡಿದ್ದು ಹೇಗೆ ? ಡೀಟೆಲ್ಸ್ ಓದಿ
ಯುವತಿ ರೂಮಿಗೆ ಹೋದ ಕೆಲವೇ ಕ್ಷಣಗಳಲ್ಲಿ ಸಲ್ಮಾ ಮತ್ತು ಟೀಂ ಎಂಟ್ರಿಕೊಟ್ಟಿದೆ. ನಂತರ ವ್ಯಕ್ತಿಯೋರ್ವ ಅವನ್ಯಾರು ಹೇಳು, ಇಲ್ಲಿಗೆ ಏಕೆ ಬಂದೆ ಎಂದು ಪ್ರಶ್ನಿಸಿದಾಗ “ಫ್ರೆಂಡ್ ಮನೆಗೆ ಅಂತ ಹೇಳಿ ಇಲ್ಲಿಗೆ ಬಂದೆ ಟ್ಯೂಷನ್ ಮುಗಿಸಿ ವಾಪಸ್ ಹೋಗುತ್ತೇನೆ. ಅವರು ನಮ್ಮ ಲೆಕ್ಚರ್, ಅವರಿಗೆ ಏನೂ ಮಾಡಬೇಡಿ ಚಿಕ್ಕಪ್ಪ, ಚಿಕ್ಕಪ್ಪ” ಎಂದು ಶೆಟ್ಟರ ಮುಂದೆ ಯುವತಿ ಹೈಡ್ರಾಮಾ ಮಾಡಿದ್ದಾಳೆ.
ಜಗನ್ನಾಥ್ ಶೆಟ್ಟಿಗೆ ಹೊಡೆಯಲು ಮುಂದಾದಾಗ ತಡೆದು ತನ್ನ ಮೇಲೆ ಜಗನ್ನಾಥ್ ಶೆಟ್ಟಿಗೆ ಅನುಕಂಪ ಬರುವಂತೆ ಮಾಡಿದ್ದಾಳೆ. ಜೊತೆಗೆ ವ್ಯಕ್ತಿ ಯುವತಿಗೆ ಹೊಡೆದು, ಗದರಿಸಿ ಶೆಟ್ಟಿಗೆ ನಂಬಿಕೆ ಬರುವಂತೆ ನಟಿಸಿದ್ದ.
ಯುವತಿ ಚಿಕ್ಕಪ್ಪ ಎಂದು ನಟಿಸಿ ಜಗನ್ನಾಥ ಶೆಟ್ಟಿಯನ್ನು ಗ್ಯಾಂಗ್ ಲಾಕ್ ಮಾಡಿದ್ದಲ್ಲದೇ ಈ ವೀಡಿಯೋವನ್ನು ರೆಕಾರ್ಡ್ ಮಾಡಿ ಹಣಕ್ಕಾಗಿ ಜಗನ್ನಾಥ್ ಶೆಟ್ಟಿ ಬಳಿ ಬೇಡಿಕೆ ಇಟ್ಟಿದೆ. ಇದರಿಂದ ಭಯಭೀತನಾಗಿ ನಿಜಕ್ಕೂ ಯುವತಿಯ ಚಿಕ್ಕಪ್ಪನೇ ಬಂದಿದ್ದಾನೆಂದು ನಂಬಿ ಲಕ್ಷ, ಲಕ್ಷ ಹಣಕೊಟ್ಟವನ್ನು ಗ್ಯಾಂಗ್‍ಗೆ ಜಗನ್ನಾಥ್ ಶೆಟ್ಟಿ ನೀಡಿದ್ದಾನೆ. ಆದರೆ ಎಷ್ಟೇ ಹಣ ಕೊಟ್ಟರೂ ಇವರ ಹಾವಳಿ ನಿಲ್ಲದೇ ಇದ್ದಾಗ ಜಗನ್ನಾಥ್ ಶೆಟ್ಟಿ ಪೊಲೀಸರ ಮೊರೆ ಹೋಗಿದ್ದಾನೆ. ಫೆಬ್ರುವರಿ 26ರಂದು ಈ ಘಟನೆ ನಡೆದಿದ್ದು, ಈ ಸಂಬಂಧ ಆಗಸ್ಟ್ 19 ರಂದು ಮರ್ಯಾದೆಗೆ ಅಂಜಿ ಅಪಹರಣ ಮತ್ತು ಬ್ಲಾಕ್ ಮೇಲ್ ದೂರನ್ನು ಜಗನ್ನಾಥ್ ಶೆಟ್ಟಿ ನೀಡಿದ್ದಾನೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ