March 29, 2023

Newsnap Kannada

The World at your finger tips!

temple

Devotee who had come to see Hassanambe died of a heart attack ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಭಕ್ತನೊಬ್ಬ ಹೃದಯಾಘಾತದಿಂದ ಸಾವು

ಈ ಬಾರಿ ಹಾಸನಾಂಬ ದೇವಿ ದರ್ಶನ 15 ದಿನ ಮಾತ್ರ : ಅ13 ರಿಂದ 27ರ ತನಕ ದರ್ಶನ ಭಾಗ್ಯ

Spread the love

ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯು ಈ ಭಾರಿ ಹದಿನೈದು ದಿನಗಳ ಕಾಲ ದರ್ಶನ ಭಾಗ್ಯ ಸಿಗಲಿದೆ

ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸರಳವಾಗಿ ಹಾಸನಾಂಬ ಜಾತ್ರಾ ಮಹೋತ್ಸವ ನಡೆದಿತ್ತು.

ಈ ಬಾರಿ. ಅಕ್ಟೋಬರ್​ 13ರಿಂದ 27 ರವರೆಗೆ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಲಿದೆ. ಆಶ್ವಿಜ ಮಾಸದ ಮೊದಲ‌ ಗುರುವಾರ ಹದಿನೈದು ದಿನಗಳ ಕಾಲ ಹಾಸನಾಂಬ ಗರ್ಭಗುಡಿಯ ಬಾಗಿಲು ತೆರೆಯಲು ನಿರ್ಧರಿಸಲಾಗಿದೆ.
ಇನ್ನು ಅಕ್ಟೋಬರ್​ 25 ರಂದು ಗ್ರಹಣದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ ಎಂದು ದೇವಸ್ಥಾನದ ಮುಖ್ಯಸ್ಥರು ಹೇಳಿದ್ದಾರೆ

ಹಾಸನಾಂಬ ದೇವಿಯ ದರ್ಶನವನ್ನು ಪಡೆಯಲು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಈಗಾಗಲೇ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.

error: Content is protected !!