ಎಸ್ ಎಂ ಕೃಷ್ಣ ಸಹೋದರಿ ನಿವಾಸದ ಮೇಲೆ ಐಟಿ ರೇಡ್

Team Newsnap
1 Min Read

ಬೆಂಗಳೂರು : ಮಾಜಿ ಸಿಎಂ ಎಸ್ ಎಂ ಕೃಷ್ಣ ಸಹೋದರಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಕೋರಮಂಗಲದ ಫಸ್ಟ್ ಬ್ಲಾಕ್ ನಲ್ಲಿ ವಾಸವಿರುವ ಎಸ್ ಎಂ ಕೃಷ್ಣ ಸಹೋದರಿ ಸುನೀತಾ ಅವರ ನಿವಾಸದ ಮೇಲೆ ದಾಳಿ ನಡೆದಿದೆ.

ಸುಮಾರು ಎಂಟು ಮಂದಿ ಅಧಿಕಾರಿಗಳಿದ್ದ ತಂಡ ದಾಳಿ ನಡೆಸಿ , ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.ಬಾಗ್ಮನೆ ಹೆಸರಿನ ನಿವಾಸ, ಕಚೇರಿ ಮೇಲೆ ದಾಳಿ ನಡೆದಿದೆ.ಮದ್ದೂರು ಕೈ ಅಭ್ಯರ್ಥಿ ಉದಯ್ ಬೆಂಬಲಿಗರ ನಿವಾಸದಲ್ಲಿ 2 ಕೋಟಿ ಹಣ ಪತ್ತೆ – ಒಬ್ಬ ವ್ಯಕ್ತಿ ವಶಕ್ಕೆ

ಈ ನಡುವೆ ಕಾಂಗ್ರೆಸ್ ನಾಯಕರುಗಳ ಬೆಂಬಲಿಗರ ಮನೆ ಮೇಲೆ ದಾಳಿ ನಡೆದಿದೆ.

Share This Article
Leave a comment