ಮದ್ದೂರು ಕೈ ಅಭ್ಯರ್ಥಿ ಉದಯ್ ಬೆಂಬಲಿಗರ ನಿವಾಸದಲ್ಲಿ 2 ಕೋಟಿ ಹಣ ಪತ್ತೆ – ಒಬ್ಬ ವ್ಯಕ್ತಿ ವಶಕ್ಕೆ

Team Newsnap
1 Min Read
2 crore money found in residence of Maddur Kai candidate Uday supporter - one person arrested ಮದ್ದೂರು ಕೈ ಅಭ್ಯರ್ಥಿ ಉದಯ್ ಬೆಂಬಲಿಗರ ನಿವಾಸದಲ್ಲಿ 2 ಕೋಟಿ ಹಣ ಪತ್ತೆ - ಒಬ್ಬ ವ್ಯಕ್ತಿ ವಶಕ್ಕೆ

ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆಎಂ ಉದಯ್ ಬೆಂಬಲಿಗರ ಮನೆ ಮೇಲೆ ದಾಳಿ ನಡೆಸಿರುವ ಚುನಾವಣಾ ಅಧಿಕಾರಿಗಳು 2 ಕೋಟಿ ರೂ.ಗೂ ಅಧಿಕ ಹಣವನ್ನು ಪತ್ತೆ ಹಚ್ಚಿದ್ದಾರೆ.

ಕೆಎಂ ಉದಯ್ ಬೆಂಬಲಿಗ ಮದ್ದೂರು ಪಟ್ಟಣದ ದೊಡ್ಡಿ ಬೀದಿಯ ಸುರೇಶ್ ಹಾಗೂ ರಮೇಶ್ ಮನೆ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ತಂಡ ದಾಳಿ ನಡೆಸಿದೆ.

ಬೆಳ್ಳಂಬೆಳಗ್ಗೆ 5:30ರ ವೇಳೆಗೆ ಅಧಿಕಾರಿಗಳು ದಾಳಿ ಮಾಡಿ 2 ಕೋಟಿ ರೂ.ಗೂ ಅಧಿಕ ಹಣವನ್ನು ಪತ್ತೆ ಹಚ್ಚಿ ಅದನ್ನು ವಶಪಡಿಸಿಕೊಂಡಿದ್ದಾರೆ.

ಸುರೇಶ್ ಮನೆಯಲ್ಲಿ 2 ಕೋಟಿ ರೂ. ಪತ್ತೆಯಾಗಿದೆ, ರಮೇಶ್ ಮನೆಯಲ್ಲಿ 3.50 ಲಕ್ಷ ರೂ. ಪತ್ತೆಯಾಗಿದೆ. ಹಾವೇರಿ ಕಾಂಗ್ರೆಸ್ ನಾಯಕ ಚನ್ನಬಸಪ್ಪನ ಮನೆ ಮೇಲೆ ಐಟಿ ದಾಳಿ

ಚುನಾವಣಾ ಅಧಿಕಾರಿಗಳು ಹಣವನ್ನು ಮದ್ದೂರು ಪೊಲೀಸರ ವಶಕ್ಕೆ ನೀಡಿದ್ದಾರೆ.
ಪೊಲೀಸರು ಸುರೇಶ್ ಬಾಬು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Share This Article
Leave a comment