ಬೆಂಗಳೂರಿನಲ್ಲಿ ಕೈಗಾರಿಕಾ ಸಂಘದ ಅಧ್ಯಕ್ಷರ ಮನೆ ಮೇಲೆ ಐಟಿ ದಾಳಿ

Team Newsnap
1 Min Read
IT raid on Haveri Congress leader Channabasappa's house ಹಾವೇರಿ ಕಾಂಗ್ರೆಸ್ ನಾಯಕ ಚನ್ನಬಸಪ್ಪನ ಮನೆ ಮೇಲೆ ಐಟಿ ದಾಳಿ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ 20 ಅಧಿಕಾರಿಗಳ ತಂಡ ಶನಿವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ.

ಬೊಮ್ಮಸಂದ್ರ ಪುರಸಭಾ ಸದಸ್ಯರಾಗಿರುವ ಎ. ಪ್ರಸಾದ್ ಹಾಗೂ ಸಹೋದರ ಛಲಪ್ರಸಾದ್ ಅವಳಿ ಸಹೋದರರ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಎ. ಪ್ರಸಾದ್ ಅವರ ಬೊಮ್ಮಸಂದ್ರ ನಿವಾಸ, ಸಹೋದರ ಛಲಪ್ರಸಾದ್ ಅವರ ಆರ್‌ಎಸ್ ಗಾರ್ಡೇನಿಯ ನಿವಾಸ, ಬೊಮ್ಮಸಂದ್ರ ಕೈಗಾರಿಕಾ ಸಂಘದ ಕಚೇರಿ ಹಾಗೂ ಕಂಪನಿ ಮೇಲೆ ದಾಳಿ ಮಾಡಿದ್ದಾರೆ.

ಇದನ್ನು ಓದಿ –ಬೇಸಿಗೆಯಲ್ಲಿ ಹಿತ ನೀಡುವ ಡ್ರೈಫ್ರೂಟ್ಸ್ ಮಿಲ್ಕ್ ಶೇಕ್ : ಮಾಡುವುದು ಹೇಗೆ ?

ಬೊಮ್ಮಸಂದ್ರದಲ್ಲಿ ಪ್ರಭಾವಿ ನಾಯಕರಾಗಿರುವ ಎ.ಪ್ರಸಾದ್ ಹಾಗೂ ಛಲಪ್ರಸಾದ್ ಬಿಜೆಪಿಯಿಂದ ಬೊಮ್ಮಸಂದ್ರ ಪುರಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

#bengaluru #bommasandra #income tax #Breakingnews #IndustrialAssociation #it_raid #ಆದಾಯತೆರಿಗೆಇಲಾಖೆ #ಕೈಗಾರಿಕಾ_ಸಂಘ #ಬೆಂಗಳೂರು #ಬೊಮ್ಮಸಂದ್ರ

Share This Article
Leave a comment