ಬೇಸಿಗೆಯಲ್ಲಿ ಹಿತ ನೀಡುವ ಡ್ರೈಫ್ರೂಟ್ಸ್ ಮಿಲ್ಕ್ ಶೇಕ್ : ಮಾಡುವುದು ಹೇಗೆ ?

Team Newsnap
1 Min Read
Dry Fruits Milk Shake for Summer: How to make it? ಬೇಸಿಗೆಯಲ್ಲಿ ಹಿತ ನೀಡುವ ಡ್ರೈಫ್ರೂಟ್ಸ್ ಮಿಲ್ಕ್ ಶೇಕ್ : ಮಾಡುವುದು ಹೇಗೆ ?

ಏಪ್ರಿಲ್ – ಮೇ ತಿಂಗಳ ಬಿಸಿಲಿನ ಸಮಯಕ್ಕೆ ಜನರು ತಮ್ಮ ದೇಹಕ್ಕೆ ತಂಪನ್ನು ನೀಡುವ ಪಾನೀಯಗಳ ಮೊರೆ ಹೋಗುತ್ತಾರೆ.

ಬೀದಿ ಬದಿಯಲ್ಲಿ ದೊರೆಯುವ ಪಾನೀಯಗಳು ಕೆಮಿಕಲ್ ಮಿಶ್ರಿತವಾಗಿರುತ್ತೆ. ಅದು ಆರೋಗ್ಯವನ್ನು ಹದಗೆಡಿಸುವ ಸಾಧ್ಯತೆಯಿದೆ. ಆದ್ದರಿಂದ ಸಾಧ್ಯವಾದಷ್ಟು ಮನೆಯಲ್ಲಿಯೇ ಪಾನೀಯಗಳನ್ನು ಮಾಡಿ ಕುಡಿದರೆ ಒಳ್ಳೆಯದು.

ಇವತ್ತು ಆರೋಗ್ಯಕರ ಹಾಗೂ ದೇಹಕ್ಕೆ ತಂಪೆನಿಸುವ ಡ್ರೈಫ್ರೂಟ್ಸ್ ಮಿಲ್ಕ್‌ಶೇಕ್ ರೆಸಿಪಿಯನ್ನು ಇಲ್ಲಿದೆ ನೋಡಿ.

WhatsApp Image 2023 04 29 at 10.22.28 AM

ಬೇಕಾಗುವ ಸಾಮಾಗ್ರಿಗಳು:

ಅಂಜೂರದ ಹಣ್ಣು- 3ರಿಂದ 4
ಬಾದಾಮಿ- ಕಾಲು ಕಪ್
ಗೋಡಂಬಿ- ಕಾಲು ಕಪ್
ಒಣ ದ್ರಾಕ್ಷಿ – ಕಾಲು ಕಪ್
ಪಿಸ್ತಾ – ಕಾಲು ಕಪ್
ಖರ್ಜೂರ- 7ರಿಂದ 8
ತಣ್ಣಗಿನ ಹಾಲು- ಅರ್ಧ ಲೀಟರ್
ಕೇಸರಿ- ಸ್ವಲ್ಪ
ಸಕ್ಕರೆ- 2 ಚಮಚ

ಮಾಡುವ ವಿಧಾನ :

1) ಮೊದಲಿಗೆ ಅಂಜೂರದ ಹಣ್ಣುಗಳನ್ನು ನೀರಿನಲ್ಲಿ ನೆನೆಹಾಕಿ ಅರ್ಧಗಂಟೆ ನೆನೆಯಲು ಬಿಡಿ. ಹಾಗೆಯೇ ಖರ್ಜೂರದ ಬೀಜವನ್ನು ತೆಗೆದು ಅದನ್ನೂ ಸಹ ನೆನೆಸಿ. ಖರ್ಜೂರ ಹಾಗೂ ಅಂಜೂರ ನೆನೆಸಿದ ಬಳಿಕ ಅದನ್ನು ಸಾಧಾರಣ ಗಾತ್ರದಲ್ಲಿ ಹೆಚ್ಚಿಕೊಳ್ಳಿ.

2) ಒಂದು ಮಿಕ್ಸಿ ಜಾರಿಗೆ ಎಲ್ಲಾ ಡ್ರೈಫ್ರೂಟ್ಸ್‌ಗಳನ್ನು ಹಾಕಿಕೊಂಡು ಅದಕ್ಕೆ ಅರ್ಧ ಕಪ್ ತಣ್ಣಗಿನ ಹಾಲನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ತೆಂಗಿನ ಹಾಲನ್ನು ಸಹ ಬಳಸಿಕೊಳ್ಳಬಹುದು. ಬಳಿಕ ಇದಕ್ಕೆ ಸ್ವಲ್ಪ ಕೇಸರಿಯನ್ನು ಸೇರಿಸಿಕೊಳ್ಳಿ. ಇದು ಉತ್ತಮ ರುಚಿಯನ್ನು ನೀಡುತ್ತದೆ.

3) ಇದಕ್ಕೆ ಉಳಿದ 2 ಕಪ್ ಹಾಲನ್ನು ಸೇರಿಸಿಕೊಂಡು ಮತ್ತೊಮ್ಮೆ ರುಬ್ಬಿಕೊಳ್ಳಿ. ಸಕ್ಕರೆ ಅಥವಾ ಬೆಲ್ಲ ಇಷ್ಟಪಡುವವರು 1ರಿಂದ 2 ಚಮಚ ಸಕ್ಕರೆ ಅಥವಾ ಬೆಲ್ಲವನ್ನೂ ಸೇರಿಸಿಕೊಂಡು ರುಬ್ಬಿ.ಇಂದಿನಿಂದ ರಾಜ್ಯದಲ್ಲಿ ಮತದಾನ ಆರಂಭ

ಈಗ ಈ ಮಿಲ್ಕ್‌ಶೇಕ್ ಅನ್ನು ಒಂದು ಗ್ಲಾಸಿಗೆ ಹಾಕಿಕೊಳ್ಳಿ. ಡ್ರೈಫ್ರೂಟ್ಸ್ ತಿನ್ನಲು ಇಚ್ಚಿಸುವವರು ಇದರ ಮೇಲೆ ಚಿಕ್ಕದಾಗಿ ಹೆಚ್ಚಿದ ಡ್ರೈಫ್ರೂಟ್ಸ್ ಅನ್ನು ಹಾಕಿ ಅಲಂಕರಿಸಿಕೊಳ್ಳಿ.

ಈಗ ರುಚಿಕಟ್ಟಾದ ಡ್ರೈಫ್ರೂಟ್ಸ್ ಮಿಲ್ಕ್‌ಶೇಕ್ ಸವಿಯಿರಿ.

WhatsApp Image 2023 04 29 at 10.24.27 AM
Share This Article
Leave a comment