ಮೇ 10 ರಂದು ವಿಧಾನಸಭಾ ಚುನಾವಣೆ (Election) ನಡೆಯಲಿರುವ ಹಿನ್ನೆಲೆಯಲ್ಲಿ 80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ನೀಡಿದೆ.
ಆಯೋಗದ ವೇಳಾಪಟ್ಟಿಯಂತೆ ನಾಳೆಯಿಂದ (ಶನಿವಾರದಿಂದ) ಬ್ಯಾಲೆಟ್ ಪೇಪರ್ ವೋಟಿಂಗ್ (Voting) ನಡೆಯಲಿದೆ.
ಏಪ್ರಿಲ್ 29ರಿಂದ ಮೇ 6ರವರೆಗೆ ಬ್ಯಾಲೆಟ್ ಪೇಪರ್ ವೋಟಿಂಗ್ ನಡೆಯಲಿದೆ, 80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಹಾಗೂ ವಿಕಲಚೇತನರಿಗೆ ಚುನಾವಣಾ ಸಿಬ್ಬಂದಿಗಳು ಬ್ಯಾಲೆಟ್ ಪೇಪರ್ ನೀಡುವ ಮೂಲಕ ಮತದಾನ ಪ್ರಕ್ರಿಯೆಯನ್ನು ನಡೆಸಲಿದ್ದಾರೆ.
ರಾಜ್ಯದಲ್ಲಿ ಒಟ್ಟು 12.15 ಲಕ್ಷ ಜನ 80 ವರ್ಷ ಮೇಲ್ಪಟ್ಟ ಮತದಾರರಿದ್ದು, ಮನೆಯಿಂದಲೇ ಮತದಾನ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ (Bengaluru) 2 ಲಕ್ಷಕ್ಕೂ ಹೆಚ್ಚು ಮಂದಿ 80 ವರ್ಷ ಮೇಲ್ಪಟ್ಟವರಿದ್ದಾರೆ. ಅದರಲ್ಲಿ 9,152 ಮಂದಿ ಮತದಾರರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ಮೇ 10ರಂದು ಪ್ರವಾಸಿ ತಾಣಗಳು ಬಂದ್
ಎಷ್ಟು ಜನ ಮನೆಯಿಂದ ಮತದಾನ?
- ಬೆಂಗಳೂರು ಕೇಂದ್ರ- 1,995
- ಬೆಂಗಳೂರು ಉತ್ತರ- 2,298
- ಬೆಂಗಳೂರು ದಕ್ಷಿಣ- 2,530
- ಡಿಸಿ ಅರ್ಬನ್- 2,329
- ಒಟ್ಟು- 9,152
ಬ್ಯಾಲೆಟ್ ಪೇಪರ್ ವೋಟಿಂಗ್ ಹೇಗೆ?
ಗೌಪ್ಯ ಮತದಾನ ಮಾಡುವಾಗ ಸ್ಥಳೀಯ ಪೊಲೀಸರು ಹಾಗೂ ಚುನಾವಣಾ ಸಿಬ್ಬಂದಿ ಹಾಜರಿರುತ್ತಾರೆ. ಮತದಾನ ಮಾಡುವ ಸಂದರ್ಭದಲ್ಲಿ ವಿಡಿಯೋ ರೆಕಾರ್ಡಿಂಗ್ ನಡೆಯಲಿದೆ. ಮತದಾನದ ನಂತರ ಸ್ಟ್ರಾಂಗ್ ರೂಮ್‌ಗೆ ಮತಪೆಟ್ಟಿಗೆಯನ್ನು ರವಾನಿಸಲಾಗುವುದು. ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
ಮೇ.10ರಂದು ರಾಜ್ಯ ದ 224 ಕ್ಷೇತ್ರಗಳಲಿ ಮತದಾನ ನಡೆಸಲಿದೆ.ಕರ್ನಾಟಕದಲ್ಲಿರುವವ ರಾಜ್ಯದಲ್ಲಿ ಒಟ್ಟು 5,30,85,566 ಮತದಾರರರು ಇದ್ದಾರೆ.
- ಪುರುಷ – 2,66,82,156
- ಮಹಿಳಾ – 2,63,98,483
- ಹೊಸ ಮತದಾರ – 16,04,285
- ರಾಜ್ಯದಲ್ಲಿ ಒಟ್ಟು 5,30,85,566
2022ರ ಸೆಪ್ಟೆಂಬರ್ 1 ರಿಂದ 38 ಲಕ್ಷ ವೋಟರ್ ಐಡಿ ನೀಡಲಾಗಿದೆ.
- 58,545 ಪೋಲಿಂಗ್ ಸ್ಟೇಷನ್
- 1,15,709 ಇವಿಎಂ
- 89379 ವಿವಿಪ್ಯಾಟ್ ಯಂತ್ರ
- 47,488 ಯೋಧರಿಗೆ ಅಂಚೆ ಮತಪತ್ರ
- 80 ವರ್ಷ ದಾಟಿದ 80,250 ಜನರು ಮನೆಯಿಂದಲೇ ಮತದಾನ
- 19279 ವಿಕಲ ಚೇತನರು
- 13771 ಅಗತ್ಯ ಸೇವೆ ಒದಗಿಸುವವರು
- ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ
- ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
- ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ವಿವರ, ವೇತನ ಮತ್ತು ಅರ್ಜಿ ದಿನಾಂಕ
- ಅಕ್ರಮ ಆಸ್ತಿ ಆರೋಪ: ಇಂದು ಲೋಕಾಯುಕ್ತ ಮುಂದೆ ಹಾಜರಾಗುವಾರಾ ಸಚಿವ ಜಮೀರ್ ಅಹ್ಮದ್?
- ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಡಿ.3 ರಂದು ಶಾಲೆ, ಅಂಗನವಾಡಿ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ
More Stories
ರಾಜ್ಯ ಸರ್ಕಾರದಿಂದ 6 ಕೆಎಎಸ್ ಅಧಿಕಾರಿಗಳ ಸ್ಥಳಾಂತರ: ಹೊಸ ಆದೇಶ ಹೊರಡಿಕೆ
ಜೀಪ್ ಟೈರ್ ಸ್ಪೋಟ : ಪ್ರೊಬೆಷನರಿ ಐಪಿಎಸ್ ಅಧಿಕಾರಿ ದುರಂತ ಸಾವು
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು