ಕರ್ನಾಟಕ ರಾಜ್ಯದಲ್ಲಿ ಸರಿ ಸುಮಾರು ಒಂದು ಅಂದಾಜಿನಂತೆ……..
ಸಕ್ರೀಯವಾಗಿರುವ ವೃತ್ತಿನಿರತರು……..
ಕರ್ನಾಟಕದ ಜನಸಂಖ್ಯೆಯ ಶೇಕಡಾವಾರು…..
ರಾಜಕಾರಣಿಗಳು 1%
ಅಧಿಕಾರಿಗಳು 3%
ನ್ಯಾಯಾಧೀಶರು
ಮತ್ತು ವಕೀಲರು .50%
ಪತ್ರಕರ್ತರು .50%
ಧರ್ಮಾಧಿಕಾರಿಗಳು .25%
ವೈದ್ಯರು .15%
ಪೋಲೀಸರು .50%
ಶಿಕ್ಷಕರು .75%
ತೆರಿಗೆ ಸಂಗ್ರಹಕಾರರು .15%
ಲೆಕ್ಕಾಧಿಕಾರಿಗಳು .10%
ಹೋರಾಟಗಾರರು .25%…..
ಬಹುಶಃ ಇನ್ನೊಂದಿಷ್ಟು ಇದಕ್ಕೆ ಸೇರಿಸಿದರು ಶೇಕಡಾ 10% ದಾಟುವುದಿಲ್ಲ.
ಇನ್ನುಳಿದ ಶೇಕಡಾ 90% ಮಕ್ಕಳು ಯುವಕರು ಮಹಿಳೆಯರು ರೈತರು ಕಾರ್ಮಿಕರು ವ್ಯಾಪಾರಸ್ಥರು ಚಾಲಕರು ದರ್ಜಿಗಳು ಪೂಜಾರಿಗಳು ಇತ್ಯಾದಿ ಇತ್ಯಾದಿ….
ಒಂದು ವೇಳೆ ಮೇಲಿನ ಶೇಕಡಾ 10% ಜನ ಪ್ರಾಮಾಣಿಕತೆ ಮತ್ತು ದಕ್ಷತೆಯ ಒಂದು ಪ್ರತಿಜ್ಞೆ ಸ್ವೀಕರಿಸಿದರೆ ಏನಾಗಬಹುದು. ಏಕೆಂದರೆ ಈ ಹತ್ತರಷ್ಟು ಜನ ಅಕ್ಷರಸ್ಥರು, ವಿದ್ಯಾವಂತರು ಬುದ್ದಿವಂತರು ಅಧಿಕಾರ ಹೊಂದಿರುವವರು, ಕೆಲವರನ್ನು ಹೊರತುಪಡಿಸಿ ಬಹುತೇಕರು ನಿಗದಿತ ಸರ್ಕಾರಿ ಅಥವಾ ಅರೆ ಸರ್ಕಾರಿ ಆದಾಯ ಹೊಂದಿರುವವರು, ಬಹುತೇಕ ಸಂಪನ್ಮೂಲಗಳನ್ನು ಬಳಸುತ್ತಿರುವವರು, ಸಮಾಜದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿರುವವರು, ರಾಜ್ಯದ ಎಲ್ಲಾ ಸಮಕಾಲೀನ ಸಮಸ್ಯೆ ಮತ್ತು ಮಾಹಿತಿಯ ಅರಿವಿರುವವರು.
ಇವರುಗಳೇನಾದರೂ ಮುಂದಿನ ಕೇವಲ 3/4 ವರ್ಷಗಳಲ್ಲಿ ಕಾನೂನಿನ ಅಡಿಯಲ್ಲಿ ನೈತಿಕತೆಯ ನೆಲೆಯಲ್ಲಿ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ನಿರ್ವಹಿಸಿದ್ದೇ ಆದರೆ ಕರ್ನಾಟಕ ರಾಜ್ಯದ ಭವಿಷ್ಯ ಜನರ ಜೀವನಮಟ್ಟ ಆಧಾರದಲ್ಲಿ ಹೇಗಾಗಬಹುದು ಊಹಿಸಿ.
ಅವರೇನು ಸ್ವಾತಂತ್ರ್ಯ ಹೋರಾಟಗಾರರಂತೆ ಪ್ರಾಣ ತ್ಯಾಗ ಮಾಡಬೇಕಾಗಿಲ್ಲ, ಉಪವಾಸ ಸತ್ಯಾಗ್ರಹ ಮಾಡಬೇಕಾಗಿಲ್ಲ, ಮನೆ ಮಠ ಸಂಸಾರ ತೊರೆಯಬೇಕಾಗಿಲ್ಲ. ಕೇವಲ ಸರ್ಕಾರದ ಸಂಬಳ ಮಾತ್ರ ಪಡೆಯುವುದು ಮತ್ತು ಅದಕ್ಕೆ ತಕ್ಕ ಕರ್ತವ್ಯ ನಿರ್ವಹಿಸುವುದು ಅಷ್ಟು ಮಾತ್ರ ಮಾಡಿದರೆ ಸಾಕು. ಸರ್ಕಾರದ ಸಂಬಳ ಇಲ್ಲದವರು ಒಂದು ಮಿತಿ ಮೀರದ ಲಾಭದ ಒಳಗೆ ಕೆಲಸ ಮಾಡಿದರೆ ಸಾಕು.
ಅತಿ ಮುಖ್ಯವಾಗಿ……..
ಕರ್ನಾಟಕದಲ್ಲಿ…………
ನಮ್ಮ ರಾಜ್ಯದ ಎಲ್ಲಾ ಅಧಿಕಾರ ಇರುವ ರಾಜಕಾರಣಿಗಳು ಮತ್ತು ಸರ್ಕಾರಿ ನೌಕರರು ಒಂದು ವರ್ಷದ ಮಟ್ಟಿಗೆ ತಮ್ಮ ಕೆಲಸವನ್ನು ಸೇವೆ ಎಂದು ಪರಿಗಣಿಸಿ ಯಾವುದೇ ಲಂಚ ಸ್ವೀಕರಿಸದೆ ಸಹಜವಾಗಿ ಮತ್ತು ಪ್ರಾಮಾಣಿಕವಾಗಿ ತಮ್ಮ ಎಂದಿನ ಸರಳ ಕೆಲಸಗಳನ್ನು ಅಧಿಕೃತ ಸಂಬಳವನ್ನು ಪಡೆದೂ ಸಹ ಮಾಡಿದರೆ ಈ ರಾಜ್ಯದ ಆದಾಯ ಈಗಿನ ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿಯಿಂದ ಎರಡು ಲಕ್ಷ ಕೋಟಿಗೆ ಅತ್ಯಂತ ಸುಲಭವಾಗಿ ಏರಿಕೆಯಾಗುತ್ತದೆ.
ಇಷ್ಟೇ ಪ್ರಾಮಾಣಿಕತೆಯ ಕೆಲಸ ಇಲ್ಲಿಯವರೆಗೂ ಅವರ ಬೇಜವಾಬ್ದಾರಿ, ನಿರ್ಲಕ್ಷ್ಯ , ಸೋಮಾರಿತನದಿಂದ ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ಉಳಿಸಿ ತಮ್ಮ ಕೆಲಸಗಳನ್ನು ಕ್ರಮಬದ್ಧಗೊಳಿಸಿದರೆ ಈ ಎರಡು ಲಕ್ಷ ಕೋಟಿಯ ಆದಾಯದ ಜೊತೆಗೆ ಮತ್ತೆ ಕನಿಷ್ಠ ಇಪ್ಪತ್ತೈದು ಸಾವಿರ ಕೋಟಿ ಉಳಿತಾಯ ರೂಪದಲ್ಲಿ ಸಿಗುತ್ತದೆ.
ಅಂದರೆ ಹೊಟ್ಟೆ ತುಂಬಿ ಸಂಸಾರ ನಡೆಸುವಷ್ಟು ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳ ಕೇವಲ ಒಂದು ವರ್ಷದ ಪ್ರಾಮಾಣಿಕ ದುಡಿಮೆ ರಾಜ್ಯದ ಈಗಿನ ಆದಾಯವನ್ನು ದ್ವಿಗುಣ ಗೊಳಿಸುತ್ತದೆ.
ಆ ಹಣವನ್ನು ಅಷ್ಟೇ ಪ್ರಾಮಾಣಿಕತೆಯಿಂದ ಉಪಯೋಗಿಸಿದರೆ ಖಂಡಿತವಾಗಿಯೂ ಜನರ ಜೀವನಮಟ್ಟ ಬಹಳಷ್ಟು ಉತ್ತಮವಾಗುತ್ತದೆ.
ಇದರಿಂದಾಗಿ,
ಆರೋಗ್ಯ, ಶಿಕ್ಷಣ, ಸ್ವಚ್ಚತೆ, ಕ್ರೀಡೆ ಸಂಗೀತ ಸಾಹಿತ್ಯ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿ ಕಾಣುವುದಲ್ಲದೆ ವೇಶ್ಯಾವಾಟಿಕೆ, ವಲಸೆ, ಬಾಲ ಕಾರ್ಮಿಕ ಪದ್ದತಿ,
ಅಪಘಾತ, ಅಪೌಷ್ಟಿಕತೆ, ಶಿಶು ಮರಣ, ಕಳ್ಳತನ ದರೋಡೆ ಕೊಲೆ ಮುಂತಾದುವುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತದೆ.
ಕೇವಲ ಕೆಲವೇ ಲಕ್ಷಗಳ ಸಂಖ್ಯೆಯಲ್ಲಿ ಇರುವ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಸಂಕಲ್ಪ ಮಾಡಿದರೆ ಎಷ್ಟೊಂದು ಮಹತ್ವದ ಬದಲಾವಣೆ ಸಾಧ್ಯ.
ಇದರ ಪರೋಕ್ಷ ಪರಿಣಾಮ ಸಾಮಾನ್ಯ ಜನರ ಮೇಲಾಗಿ ಅವರೂ ಕೂಡ ಜಾಗೃತರಾಗುತ್ತಾರೆ. ಇಡೀ ವ್ಯವಸ್ಥೆ ಉತ್ತಮ ಗುಣಮಟ್ಟದ ಸಮಾಜವಾಗಿ ರೂಪಗೊಳ್ಳುತ್ತದೆ.
ಆ ಸೌಭಾಗ್ಯದ ದಿನಗಳನ್ನು ಕಾಣಲು ನಾವೆಲ್ಲರೂ ಮನಸ್ಸುಗಳ ಅಂತರಂಗದ ಚಳವಳಿ ರೂಪಿಸೋಣ.
ಇದು ತುಂಬಾ ಕಷ್ಟ ನಿಜ. ಆದರೆ ಅಸಾಧ್ಯವಲ್ಲ.
ಸೂರ್ಯನಲ್ಲಿಗೇ ಉಪಗ್ರಹ ಕಳಿಸುವ ತಯಾರಿಯಲ್ಲಿರುವಾಗ ಇದು ಯಾವ ಮಹಾ ಕಷ್ಟ ಅಲ್ಲವೇ……
ವಿವೇಕಾನಂದ. ಹೆಚ್.ಕೆ.
- ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
- ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
- ರಾಜ್ಯಗಳಾದ್ಯಂತ `ED’ ದಾಳಿ: ಲಾಟರಿ ಕಿಂಗ್ ಮಾರ್ಟಿನ್ನ 12.41 ಕೋಟಿ ನಗದು ಜಪ್ತಿ
- ರಾಜ್ಯದಲ್ಲಿ ಶೀಘ್ರವೇ 14 ಲಕ್ಷ ಬಿಪಿಎಲ್ ಕಾರ್ಡ್ಗಳು ರದ್ದು: ಸರ್ಕಾರದಿಂದ ಸ್ಪಷ್ಟನೆ
- ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!