ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭ – 29 ಮಸೂದೆ ಮಂಡನೆ

Team Newsnap
1 Min Read

ಇಂದಿನಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲ ಅಧಿವೇಶನ ಡಿಸೆಂಬರ್​ 23ರ ವರೆಗೆ ನಡೆಯಲಿದೆ.

ಅಧಿವೇಶನದಲ್ಲಿ 29ಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗೋ ಸಾಧ್ಯತೆ ಇದೆ. ಪ್ರಮುಖವಾಗಿ ಕೃಷಿ
ಕಾನೂನು ರದ್ದು, ಕ್ರಿಪ್ಟೋ ಕರೆನ್ಸಿ ನಿಯಂತ್ರಣ, ಕೆಲ ಸರ್ಕಾರಿ ಬ್ಯಾಂಕ್​
ಖಾಸಗೀಕರಣ, ಡ್ರಗ್ಸ್​​ ನಿಯಂತ್ರಣ ಸೇರಿ ಹಲವು ಮಹತ್ವದ ಮಸೂದೆಗಳು ಈ ಬಾರಿ ಮಂಡನೆಯಾಗುತ್ತಿವೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ವ್ಯವಸ್ಥಿತ ಅಧಿವೇಶನ ನಡೆಸುವುದಕ್ಕಾಗಿ ಸರ್ವಪಕ್ಷಗಳ ಸಾಂಪ್ರದಾಯಿಕ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಆದರೆ ಪ್ರಧಾನಿ ಮೋದಿ ಸಭೆಗೆ ಗೈರಾಗಿದ್ದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮತ್ತು ಸಚಿವ ಪಿಯೂಷ್​ ಗೋಯಲ್​ ಸರ್ಕಾರದಿಂದ ಹಾಜರಾಗಿದ್ದರು.

ಮೋದಿ ಗೈರಾಗಿರುವ ಬಗ್ಗೆ ರಾಜ್ಯಸಭೆ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಸೇರಿ ವಿಪಕ್ಷ ನಾಯಕರು ಖಂಡಿಸಿದರು.
ಇನ್ನು ಪ್ರಮುಖವಾಗಿ ಮೂರು ಕೃಷಿ ಕಾಯಿದೆಗಳ ರದ್ದತಿ ಮಸೂದೆ, ಕ್ರಿಪ್ರೋ ಕರೆನ್ಸಿ ಅಧೀಕೃತ ನಿಯಂತ್ರಣ ಮಸೂದೆ ಬಗ್ಗೆಯೂ ಕೇಂದ್ರ ಮಸೂದೆ ಮಂಡಿಸುವುದಕ್ಕಾಗಿ ಅಣಿಯಾಗಿದೆ. ಹೀಗಾಗಿ ಇಡೀ ದೇಶದ ಚಿತ್ತ ಚಳಿಗಾಲದ ಅಧಿವೇಶನದತ್ತ ನೆಟ್ಟಿದೆ.

ಈ ನಡುವೆ ವಿಪಕ್ಷಗಳಿಂದ ಪ್ರತಿಭಟನೆಯ ಬಿಸಿ ಇಂದು ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಎಲ್ಲ ವಿಪಕ್ಷಗಳು ಭಾರೀ ಸಿದ್ಧತೆ ನಡೆಸಿವೆ. ಇಂಧನ ಬೆಲೆ ಏರಿಕೆ, ಹಣದುಬ್ಬರ, ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಹತ್ಯೆ, ಲಖೀಂಪುರ ಖೇರಿ ದುರ್ಘಟನೆ, ಸೇರಿ ಹಲವು ವಿಚಾರಗಳನ್ನ ಮುಂದಿಟ್ಟುಕೊಂಡು ಕೇಂದ್ರವನ್ನ ತಾರಟೆಗೆ ತೆಗೆದುಕೊಳ್ಳೋದಕ್ಕೆ ವಿಪಕ್ಷಗಳು ತುದಿಗಾಲಲ್ಲಿ ನಿಂತುಕೊಂಡಿವೆ.

Share This Article
Leave a comment