ಬಡ ಜನರಿಗೆ, ರೈತರಿಗೆ ಉಚಿತ ವಿದ್ಯುತ್ ಕೊಡದ ಈ ಕಾಂಗ್ರೆಸ್ ನವರು ಎಸಿ ರೂಂನಲ್ಲಿ ನಾಯಿ ಸಾಕೋರಿಗೆ 200 ಯುನಿಟ್ ಪ್ರೀ ಕರೆಂಟ್ ಕೊಡ್ತೀರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮಂಗಳವಾರ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವೇಳೆ ಕಾಂಗ್ರೆಸ್‌ನ 200 ಯುನಿಟ್ ವಿದ್ಯುತ್ ಘೋಷಣೆ ಮತ್ತು 2 ಸಾವಿರ ಗೃಹಿಣಿಯರಿಗೆ ಹಣ ಘೋಷಣೆಗೆ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ ಅವರು, ಚುನಾವಣೆಯಲ್ಲಿ ಮತ ಪಡೆಯಲು ಈ ರೀತಿಯ ಆಶ್ವಾಸನೆ ನೀಡುತ್ತಿದ್ದಾರೆ. ರಾಜಸ್ಥಾನ, ಹಿಮಾಚಲ ಪ್ರದೇಶ, ಛತ್ತೀಸ್‌ಗಢದಲ್ಲಿ ಅವರ ಸರ್ಕಾರವೇ ಇದೆ. ಅಲ್ಲಿ ಮಾಡಿ ತೋರಿಸಬೇಕಿತ್ತು.
ಅವರು ಅಲ್ಲಿ ಮಾಡದೇ ಇಲ್ಲಿ ಹೇಗೆ ಮಾಡುತ್ತಾರೆ. ಇವೆಲ್ಲ ಚುನಾವಣೆ ಗಿಮಿಕ್ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.ದೊಡ್ಡಬಳ್ಳಾಪುರದಲ್ಲಿ ದುರಂತ : ಮರದಿಂದ ಕೆಳಗೆ ಬಿದ್ದು ಯುವಕ ಸಾವು
ರೈತರಿಗೆ ವಿದ್ಯುತ್ ಕೊಡುವುದಕ್ಕೆ ಆಗುವುದಿಲ್ಲ ನಿಮಗೆ. ನಗರದಲ್ಲಿ ಎಸಿ ರೂಂನಲ್ಲಿ ನಾಯಿ ಸಾಕಲು ಕರೆಂಟ್ ಕೊಡುತ್ತೀರಾ. ಬರೀ ನಗರ ಪ್ರದೇಶದ ಜನರಿಗೆ ಕೊಟ್ಟರೆ ಹಳ್ಳಿ ಜನರಿಗೆ ಏನ್ ಕೊಡ್ತೀರಾ? ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಏನು ಮಾಡದೆ ಈಗ ಇಲ್ಲಿ ಮಾಡುತ್ತೇವೆ ಎನ್ನುತ್ತಾರೆ. ಗೃಹಲಕ್ಷ್ಮಿ, ಸಂತಾನ ಲಕ್ಷ್ಮಿ, ಅಷ್ಠಲಕ್ಷ್ಮಿ ಎಲ್ಲಾ ಮೊದಲು ಅಧಿಕಾರ ಇರುವ ರಾಜ್ಯದಲ್ಲಿ ಮಾಡಿ ತೋರಿಸಿ. ಆ ಮೇಲೆ ಇಲ್ಲಿ ಮಾಡುವರಂತೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್, ಬಿಜೆಪಿ ಸರ್ಕಾರ ಬಂದಾಗ ರಾಜ್ಯದಲ್ಲಿ ದರಿದ್ರ ಲಕ್ಷ್ಮಿ ಬರುತ್ತದೆ. ಕಾಂಗ್ರೆಸ್ ಅವರು 120 ರಿಂದ 70ಕ್ಕೆ ಬಂದರೂ ಈಗ 58ಕ್ಕೆ ಕಾಂಗ್ರೆಸ್ ಇಳಿಯುತ್ತದೆ ಎಂದು ಭವಿಷ್ಯ ನುಡಿದರು.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
- ಮುಡಾ ಹಗರಣ: ಸ್ನೇಹಮಯಿ ಕೃಷ್ಣ ಮತ್ತು ಕೈ ಮುಖಂಡ ಲಕ್ಷ್ಮಣ್ ನಡುವೆ ವಾಗ್ವಾದ
More Stories
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ