IRSO ಗಗನಯಾನಕ್ಕೆ ಮತ್ತೊಂದು ಮಹತ್ವ ಪರೀಕ್ಷೆ ಯಶಸ್ವಿ

Team Newsnap
2 Min Read

ಗಗನಯಾನ್ ಮಿಷನ್‌ – IRSO ಡ್ರೋಗ್ ಪ್ಯಾರಾಚೂಟ್‌ಗಳ (drogue parachutes) ಮೇಲೆ ಸರಣಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ.

ಚಂದ್ರಯಾನ 3 ರ ಯಶಸ್ವಿ ಉಡಾವಣೆ ನಂತರ, ಇಸ್ರೋ ಈಗ ಗಗನಯಾನ ಮಿಷನ್‌ನಲ್ಲಿ ಕೆಲಸ ಮಾಡುತ್ತಿದೆ, ಇದು ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕರೆದೊಯ್ಯುತ್ತದೆ, ಗಗನಯಾನ್ ಮಿಷನ್‌ಗೆ (Gaganyaan Mission) ಸಂಬಂಧಿಸಿದಂತೆ ಮತ್ತೊಂದು ಪರೀಕ್ಷೆಯನ್ನು IRSO ಯಶಸ್ವಿಯಾಗಿ ನಡೆಸಿದೆ. ಡ್ರೋಗ್ ಪ್ಯಾರಾಚೂಟ್‌ಗಳ (drogue parachutes) ಮೇಲೆ ಸರಣಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ.

ISRO 2

ಪ್ಯಾರಾಚೂಟ್ ಯಾವಾಗ ಸಹಾಯಕ್ಕೆ ಬರುತ್ತದೆ ?

ಗಗನಯಾನ ನೌಕೆಯು ಭೂಮಿಯನ್ನು ಮರು-ಪ್ರವೇಶದ ಸಮಯದಲ್ಲಿ ಸಿಬ್ಬಂದಿಗಳಿರುವ ಮಾಡ್ಯೂಲ್ ಅನ್ನು ಸ್ಥಿರಗೊಳಿಸಲು ಮತ್ತು ಅದರ ವೇಗವನ್ನು ಸುರಕ್ಷಿತ ಮಟ್ಟಕ್ಕೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ವೇಗವನ್ನು ಕಡಿಮೆ ಮಾಡಲು ಮತ್ತು ವೇಗವಾಗಿ ಚಲಿಸುವ ವಸ್ತುಗಳನ್ನು ಸ್ಥಿರಗೊಳಿಸಲು ಡ್ರೋಗ್ ಪ್ಯಾರಾಚೂಟ್‌ಗಳನ್ನು ನಿಯೋಜಿಸಲಾಗುತ್ತಿದೆ. ಇಸ್ರೋದ ತಿರುವನಂತಪುರಂ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಸಿ) ಆಗಸ್ಟ್ 8 ಮತ್ತು 10ರ ಅವಧಿಯಲ್ಲಿ ಚಂಡೀಗಢದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯದ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ (ಆರ್‌ಟಿಆರ್‌ಎಸ್) ಸೌಲಭ್ಯದಲ್ಲಿ ಡ್ರೋಗ್ ಪ್ಯಾರಾಚೂಟ್ ನಿಯೋಜನೆ ಪರೀಕ್ಷೆಗಳ ಸರಣಿಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಇಸ್ರೋ ತಿಳಿಸಿದೆ.

ಈ ಪರೀಕ್ಷೆಗಳನ್ನು ಏರಿಯಲ್ ಡೆಲಿವರಿ ರಿಸರ್ಚ್ ಆಯಂಡ್ ಡೆವಲಪ್‌ಮೆಂಟ್ ಎಷ್ಟಾಬ್ಲಿಷ್ಮೆಂಟ್ (ADRDE)/ಡಿಆರ್‌ಡಿ ಜಂಟಿ ಕಾರ್ಯಾಚರಣೆಯಲ್ಲಿ ಈ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. ಡ್ರೋಗ್ ಪ್ಯಾರಾಚ್ಯೂಟ್‌ಗಳು ಮೋರ್ಟಾರ್ಸ್ ಎಂದು ಕರೆಯಲಾಗುವ ಪೈರೋ-ಆಧಾರಿತ ಸಾಧನಗಳಲ್ಲಿ ಪ್ಯಾಕ್ ಮಾಡಲಾಗಿರುತ್ತದೆ. ಕಮಾಂಡ್ ಮೂಲಕ ಪ್ಯಾರಾಚ್ಯೂಟ್‌ಗಳನ್ನು ಗಾಳಿಯಲ್ಲಿ ಹರಡಿಕೊಳ್ಳುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಪರಪುರುಷನ ಸಂಬಂಧ ಶಂಕೆ – ಪತ್ನಿ ಹತ್ಯೆ ಮಾಡಿದ ಪತಿ: ಸಾವಿಗೆ ಕಾರಣವಾದ ಟಿಕ್ ಟಾಕ್ ಗೀಳು

ಈ ಶಂಕುವಿನಾಕಾರದ ರಿಬ್ಬನ್ ಮಾದರಿಯ ಪ್ಯಾರಾಚ್ಯೂಟ್‌ಗಳು 5.8 ಮೀಟರ್ ವ್ಯಾಸವನ್ನು ಹೊಂದಿದ್ದು, ಏಕ-ಹಂತದ ರೀಫಿಂಗ್ ಕಾರ್ಯವಿಧಾನವನ್ನು ಬಳಸಿಕೊಳ್ಳುತ್ತವೆ. ಪ್ಯಾರಾಚ್ಯೂಟ್‌ಗಳು ಹರಡಿಕೊಂಡಾಗ ಆರಂಭಿಕ ಆಘಾತವನ್ನು ತಗ್ಗಿಸುತ್ತದೆ. ಮೃದುವಾದ ಮತ್ತು ನಿಯಂತ್ರಿತ ಲ್ಯಾಂಡಿಂಗ್ ಅನ್ನು ಖಾತ್ರಿಗೊಳಿಸುತ್ತದೆ ಎಂದು ಇಸ್ರೋ ಹೇಳಿದೆ.

IRSO ಗಗನಯಾನಕ್ಕೆ ಮತ್ತೊಂದು ಮಹತ್ವ ಪರೀಕ್ಷೆ ಯಶಸ್ವಿ – irso-gaganayaan-test-success #ISRO #india #karnataka #mandya #bangalore #mysore #DRDO

Share This Article
Leave a comment